ಅಂಕೋಲಾ: ಯಾರು ಎಷ್ಟೇ ದೊಡ್ಡ ಪೂಜೆ ಮಾಡಿದರು,ದೇವರಿಗೆ ಕೇಳಿಸುವುದು ಸ್ವಚ್ಛಮನಸ್ಸಿನಿಂದ ಮಾಡಿದ ಪ್ರಾರ್ಥನೆ ಅಷ್ಟೇ ಅದನ್ನೇ ದೇವಾನುದೇವತೆಗಳು ಅನುಗ್ರಹಿಸುತ್ತಾನೆ,ಆದ್ದರಿಂದ ನಾನು ಹೇದುರುವುದು ದೇವರಿಗೆ ಮಾತ್ರ ಎಂದು ಅಂಕೋಲಾ ಕಾರವಾರ ಕ್ಷೇತ್ರದ ಶಾಸಕ ಸತೀಶ್ ಸೈಲ್ ಹೇಳಿದರು.

ಅವರು ತಾಲೂಕಿನ ವಾಸರಕುದ್ರಿಗೆ ಗ್ರಾಮ ಪಂಚಾಯತ್ ನೂತನ ಕಟ್ಟಡ, ಅರಿವು ಕೇಂದ್ರ ಹಾಗೂ ಕಸವಿಲೇವಾರಿ ಘಟಕವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ 2017 ಕ್ಕೆ ನಾನು ಕೊಟ್ಟಂತ ಅನುದಾನದಲ್ಲಿ ಅಂದೆ ನಿರ್ಮಾಣವಾಗಬೇಕಿದ್ದ ಗ್ರಾಪಂ ಕಟ್ಟಡ ಇಂದು ನನ್ನ ಕೈಯ್ಯಿಂದಲೇ ಉದ್ಘಾಟನೆಗೊಂಡಿರುವುದು ಅತ್ಯಂತ ಸಂತೋಷವಾಗಿದೆ. ನಂತರ ಐದು ವರ್ಷದಲ್ಲಿ ಬಂದಂತ ಸರಕಾರ ಏನುಮಾಡಿದೆ ಎಂಬುದೇ ಗೊತ್ತಾಗಲಿಲ್ಲ. ಆದರೆ ದೇವರು ನನ್ನ ಕೈಯ್ಯಿಂದಲೇ ಲೋಕಾರ್ಪಣೆಗೊಳಿಸಿದ್ದಾನೆ.

ಕಾಂಗ್ರೆಸ್ ಸರಕಾರದಲ್ಲಿ ಮಾತು ಕಡಿಮೆ ಕೆಲಸ ಹೆಚ್ಚು ಆದರೆ ಬಿಜೆಪಿಯಲ್ಲಿ ಬರಿ ಮಾತೇ ಜಾಸ್ತಿ. ಆದ್ದರಿಂದ ಕಳೆದ ಐದು ವರ್ಷದ ಬಿಜೆಪಿ ಆಡಳಿತದಲ್ಲಿ ಈ ಕ್ಷೇತ್ರ ಯಾವ ಅಭಿವೃದ್ಧಿಯು ಕಾಣಲಿಲ್ಲ ಎಂದರು.

ಶಿರೂರು ಘಟನೆಯಿಂದ ಸಂಪೂರ್ಣ ಸ್ಥಗಿತಗೊಂಡಿದ್ದ ರಾಷ್ಟ್ರೀಯ ಹೆದ್ದಾರಿಯಿಂದ ಅನೇಕರಿಗೆ ಸಮಸ್ಯೆ ಉಂಟಾಗಿತ್ತು ಆದರೆ ವಾಸರ ಕುದ್ರಿಗೆಯ ಜನ ತಮ್ಮ ಊರಿನ ರಸ್ತೆಯನ್ನು ಬಿಟ್ಟುಕೊಟ್ಟು ಮಾನವೀಯತೆ ಮೆರೆದಿದ್ದಾರೆ.

ಮುಂದಿನ ದಿನಗಲ್ಲಿ ಗ್ರಾಪಂ ಕಟ್ಟಡ ನಿರ್ಮಾಣಕ್ಕೆ ಸ್ಥಳವನ್ನು ದಾನವಾಗಿ ನೀಡಿದ ದಿವಂಗತ ವೆಂಕಣ್ಣ ನಾಯಕರ ಕುಟುಂಬಕ್ಕೆ ನಾವೆಂದು ಚಿರಋಣಿ, ಅವರ ನೆನಪು ಶಾಶ್ವತವಾಗಿರಿಸಲು ಅವರ ಹೆಸರನ್ನು ಸಹಿತ ಕಟ್ಟಡ ಮುಂಬಾಗ ನಮೂದು ಮಾಡಲಿದ್ದೇವೆ.

ಬಾಯಲ್ಲಿ ರಾಮನಾಮವಷ್ಟೇ ಹೇಳುವ ಹಿಂದಿನ ಶಾಸಕರು ಜನರ ಕೆಲಸವನ್ನು ಮಾಡುವಲ್ಲಿ ವಿಫಲರಾಗಿದ್ದಾರೆ. ಶಾಸಕರ ಅನುದಾನದ 4.32 ಕೋಟಿಯನ್ನು ಮಂಜೂರು ಯಾಕೆ ಮಾಡಿಲ್ಲ,ವರ್ಷಕ್ಕೆ ಕೇವಲ 2 ಕೋಟಿಯಷ್ಟೆ ಸರ್ಕಾರದಿಂದ ದೊರೆಯುವ ಶಾಸಕರ ಅನುದಾನದಲ್ಲಿ ಐದುವರ್ಷಗಳಲ್ಲಿ 10 ಕೋಟಿಯಷ್ಟೆ ದೊರೆಯುತ್ತದೆ ಆದರೆ ಅದರಲ್ಲಿಯೂ 4.32 ಕೋಟಿ ರೂಪಾಯಿಯನ್ನು ಯಾಕೆ ಬಳಸಿಲ್ಲ ಎನ್ನುವುದಕ್ಕೆ ಉತ್ತರ ನೀಡಲಿ. ಏನಾದರೂ ಹಣವನ್ನು ಖರ್ಚುಮಾಡಿದ್ದರೆ ದಾಖಲೆ ನೀಡಿ ಮುಕ್ತ ಚರ್ಚೆಗೆ ಬನ್ನಿ ಎಂದು ಆಕ್ರೋಶ ವ್ಯಕ್ತಪಡಿಸಿದರು.ನನ್ನಷ್ಟು ರಾಮ ಭಕ್ತಿ, ದೇವರಲ್ಲಿ ನಂಬಿಕೆ ಆದರೆ ಕೆಲವರು ವಿಷ ಬೀಜ ಬಿತ್ತಲು ಹೆಸರು ರಾಮನದ್ದು,ಕೆಲಸ ಮಾತ್ರ ರಹಿಮನದ್ದು ಎಂದು ಹರಿಹಾಯ್ದರು.

ವಾಸರ ಕುದ್ರಿಗೆ ಗ್ರಾಪಂ ಅಧ್ಯಕ್ಷ ಪ್ರದೀಪ ನಾಯಕ ಪ್ರಾಸ್ತಾವಿಕ ಮಾತನಾಡಿ ಈ ಹಿಂದಿನ ಅವಧಿಯಲ್ಲಿ ಅನುದಾನವನ್ನು ನೀಡಿದ ನಮ್ಮ ಹೆಮ್ಮೆಯ ಶಾಸಕ ಸತೀಶ್ ಸೈಲ್ ಅವರ ವಿಶೇಷ ಕಾಳಜಿಯಲ್ಲಿ ನಮ್ಮ ಭವ್ಯ ಕಟ್ಟಡ ಇಂದು ಲೋಕಾರ್ಪಣೆಗೊಂಡಿದೆ. ಒಬ್ಬ ಉತ್ತಮ ರಾಜಕಾರಣಿಯಾಗಬೇಕಿದ್ದರೆ,ಉತ್ತಮ ಪ್ರಜಾ ಸೇವಕನಾಗಬೇಕಿದ್ದರೆ ಜನಸೇವೆಯ ಗುರಿ ಹೊಂದಿದ್ದರೆ ಮಾತ್ರ ಸಾಧ್ಯ ಎಂಬಂತೆ ನಮ್ಮ ಶಾಸಕರು ನಾಯಕರಂತೆ ಮುನ್ನೆಡೆಸುತ್ತಿದ್ದಾರೆ. ಅದರಂತೆಯೇ ಅಧಿಕಾರಿಗಳು ಸಹಿತ ನಮ್ಮೊಂದಿಗೆ ಕೈಜೋಡಿಸಿದ್ದಾರೆ. ನೂತನ ಕಟ್ಟಡದ ಸ್ಥಳದ ದಾನಿಗಳಾದ ದಿವಂಗತ ವೆಂಕಣ್ಣ ನಾಯಕರನ್ನು ಈ ಸಂದರ್ಭದಲ್ಲಿ ನಾವೆಲ್ಲರೂ ನೆನೆಯಬೇಕಾಗಿದೆ. ಮುಂದಿನ ದಿನಗಳಲ್ಲಿ ಇಂದು ಉದ್ಘಾಟನೆಗೊಂಡ ಭವ್ಯ ಕಟ್ಟದಲ್ಲಿ ಸರ್ವ ಸದಸ್ಯರು,ಅಧಿಕಾರಿಗಳು ಜೊತೆ ಜೊತೆಯಾಗಿ ಅಭಿವೃದ್ಧಿ ಚಿಂತನೆಗಳನ್ನು ನಡೆಸಿ ಜನಸೇವೆಯನ್ನು ಕೈಗೊಳ್ಳಲಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಸತೀಶ್ ಸೈಲ್ ,ಸ್ಥಳದ ದಾನಿಗಳಾದ ಪ್ರಮೋದ ನಾಯಕ, ಪಂ,ರಾ,ಇ ಅಭಿಯಂತರ ರಾಮು ಗುನಗಿ, ತಾಪಂ ಇಓ ಸುನೀಲ್ ಎಂ,ಗ್ಯಾರಂಟಿ ಪ್ರಾಧಿಕಾರದ ತಾಲೂಕಾಧ್ಯಕ್ಷ ಪಾಂಡುರಂಗ ಗೌಡ,ಕಟ್ಟಡ ಗುತ್ತಿಗೆದಾರ ರಮಾಕಾಂತ ನಾಯಕರವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಹಾಗೆಯೇ ವಾಸರ ಕುದ್ರಿಗೆ ಗ್ರಾಪಂ ಅಧ್ಯಕ್ಷರಾದ ಪ್ರದೀಪ್ ನಾಯಕ ಅವರನ್ನು ತಾಲೂಕಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಪಂ.ರಾ.ಇ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಮು ಗುನಗಿ,ತಾಪಂ ಕಾರ್ಯನಿರ್ವಹಣಾಧಿಕಾರಿ ಸುನೀಲ್ ಎಂ,ಗ್ಯಾರಂಟಿ ಪ್ರಾಧಿಕಾರದ ತಾಲೂಕಾಧ್ಯಕ್ಷ ಪಾಂಡುರಂಗ ಗೌಡ, ಗ್ರಾಪಂ ಉಪಾಧ್ಯಕ್ಷೆ ನಾಗಮ್ಮ ಗೌಡ,ಸದಸ್ಯರಾದ ದಯಾನಂದ ನಾಯಕ,ಸುಬ್ರಾಯ್ ಗೌಡ,ಅರ್ಚನಾ ನಾಯಕ,ದೀಪಾ ಆಗೇರ್,ಬೇಬಿ ಆಗೇರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಹನಾ ನಾಯಕ ಮುಂತಾದವರು ವೇದಿಕೆಯಲ್ಲಿದ್ದು ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವ್ಕರ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುಜಾತಾ ಗಾಂವ್ಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಶ್ವರ ನಾಯಕ ಸೇರಿದಂತೆ ತಾಲೂಕಿನ ಹಲವು ಗ್ರಾಪಂ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಸದಸ್ಯರುಗಳು ಹಾಗೂ ಕಾಂಗ್ರೆಸ್ ಪಕ್ಷದ ಪ್ರಮುಖರು,ಊರ ನಾಗರಿಕರು ಉಪಸ್ಥಿತರಿದ್ದರು.ಪಿಡಿಓ ಸಹನಾ ನಾಯಕ ಸ್ವಾಗತಿಸಿದರು.ಸುಬಾಷ್ ಕಾರೇಬೈಲ್ ನಿರ್ವಹಿಸಿದರು,ಶಿಕ್ಷಕ ಪ್ರಶಾಂತ್ ಸರ್ವರನ್ನು ವಂದಿಸಿದರು.


Leave a Reply