ಕಾರವಾರ: ಉಗ್ರ ಪೋಷಕ ಪಾಕಿಸ್ತಾನಕ್ಕೆ “ಆಪರೇಷನ್ ಸಿಂಧೂರ” ಮೂಲಕ ಸರಿಯಾದ ಉತ್ತರ ನೀಡಿದ ಭಾರತೀಯ ವೀರ ಯೋಧರಿಗೆ ಗೌರವ ಸಲ್ಲಿಸಲು ದಿನಾಂಕ 29.05.2025 ಗುರುವಾರ ರಂದು ನಡೆಯುವ ಕಾರವಾರ ಮಟ್ಟದ “ತಿರಂಗಾ ಯಾತ್ರೆ”ಯಲ್ಲಿ ಭಾಗವಿಸುವಂತೆ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಅವರಿಗೆ ಮಾಜಿ ಶಾಸಕಿ,ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಆಮಂತ್ರಿಸಿದರು.

ಅದರಂತೆಯೇ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಆಮಂತ್ರಣ ನೀಡಿ ನಮ್ಮ ದೇಶದ ಸೈನಿಕರ ಪರಾಕ್ರಮವನ್ನು ಗೌರವಿಸುವ ಸಲುವಾಗಿ ಪಕ್ಷಾತೀತವಾಗಿˌ ಜಾತ್ಯಾತೀತವಾಗಿˌ ಧರ್ಮ ಸಮುದಾಯಗಳೆನ್ನದೆ ರಾಷ್ಟ್ರಪ್ರೇಮ ಮೆರೆಯುವ ಭಾರತೀಯರಾಗಿ ಸಹಸ್ರಾರು ಸಂಖ್ಯೆಯಲ್ಲಿ ಭಾಗವಿಸುವಂತೆ ಕರೆ ನೀಡಲಾಯಿತು.


Leave a Reply