ಕಾರವಾರ: ಗೋಕರ್ಣ ಠಾಣಾ ವ್ಯಾಪ್ತಿಯ ಪ್ರಮುಖ ಸ್ಥಳಗಳಲ್ಲಿ ಭದ್ರತೆ ದೃಷ್ಟಿಯಿಂದ ಹಾಗೂ ಸಂಶಯಾಸ್ಪದ ಸ್ಥಳಗಳಲ್ಲಿ ಗೋಕರ್ಣ ಪೊಲೀಸರ ಜೊತೆಗೂಡಿ ಶ್ವಾನದಳದೊಂದಿಗೆ ಮಾದಕ ದ್ರವ್ಯ ವಿರೋಧಿ ಕಾರ್ಯಾಚರಣೆ ನಡೆಸಲಾಯಿತು.

ಹೌದು… ಕರಾವಳಿಯಲ್ಲಿ ಮಾದಕ ದ್ರವ್ಯ ಬಳಕೆ ಹೆಚ್ಚುತ್ತಿರುವ ಕುರಿತು ಎಸ್ಪಿ ಎಂ ನಾರಾಯಣ್ ಕ್ರಮಕ್ಕೆ ಮುಂದಾಗಿದ್ದು, ಗೋಕರ್ಣ ಪೊಲೀಸರು ಹಾಗೂ ವಿರೋಧಿ ವಿಧ್ವಂಸಕ ಪರಿಶೀಲನಾ ತಂಡ ( Anti Subotage check Team ) ಹಾಗೂ ಶ್ವಾನದಳದೊಂದಿಗೆ ಜಂಟಿಯಾಗಿ ತಪಾಸಣೆ ಹಮ್ಮಿಕೊಳ್ಳಲಾಗಿದೆ.

ಗೋಕರ್ಣ,ಬೆಲೆಹಿತ್ಲು, ಬಿಜ್ಜೂರು, ಬೇಲೆಕಾನ್, ಕಹಾನಿ ಪ್ಯಾರಡೈಸ್, ಪ್ಯಾರಡೈಸ್ ಕಡಲತೀರಗಳಲ್ಲಿ ಶ್ವಾನದಳ ಹೆಜ್ಜೆ ಹಾಕಿದ್ದು, ಮಾದಕ ದ್ರವ್ಯ ವ್ಯಸನಿಗಳು ಹಾಗೂ ಮಾರಾಟಗಾರರ ನಿದ್ದೆಗೆಡೆಸಿದಂತಾಗಿದೆ ಎನ್ನಲಾಗಿದೆ.

ಜಿಲ್ಲೆಯಲ್ಲಿ ಖಡಕ್ ಎಸ್ಪಿ ಎಂದು ಗುರುತಿಸಿಕೊಂಡಿರುವ ಎಂ ನಾರಾಯಣ್ ಅಧಿಕಾರ ವಹಿಸಿಕೊಂಡಾಗಿನಿಂದಲೂ ಹಲವು ಅಕ್ರಮಗಳಿಗೆ ಬ್ರೇಕ್ ಬಿದ್ದಿದೆ ಎನ್ನಲಾಗಿದೆ ಅದರಂತೆಯೇ ಮಾದಕ ದ್ರವ್ಯದ ವಿರುದ್ಧವೂ ಎಸ್ಪಿ ಕ್ರಮಕ್ಕೆ ಮುಂದಾಗಿದ್ದಾರೆ.

ಅದರಂತೆಯೇ ಈ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಹಲವಾರು ಠಾಣೆಗಳಲ್ಲಿ ಜನಮೆಚ್ಚಿದ ಅಧಿಕಾರಿ ಎಂದೆನಿಸಿಕೊಂಡಿರುವ ಗೋಕರ್ಣ ಸಿಪಿಐ ಶ್ರೀಧರ್ ಎಸ್ ಆರ್ ಕೂಡ ಇದಕ್ಕೆ ಸಾಥ್ ನೀಡಿದ್ದು ಶ್ರೀಕ್ಷೇತ್ರ ಗೋಕರ್ಣವನ್ನು ಮಾದಕ ದ್ರವ್ಯ ಮುಕ್ತ ಮಾಡುವ ನಿಟ್ಟಿನಲ್ಲಿ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ.


Leave a Reply