ಹಳಿಯಾಳ: ಬಡವರಿಗೆ ನಿಜವಾದ ಅಚ್ಛೇದಿನ್ ಪಂಚಗ್ಯಾರಂಟಿಗಳಿಂದ ಲಭಿಸಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಸತೀಶ ಪಿ. ನಾಯ್ಕ ಹೇಳಿದರು.

ಅವರು ಇಂದು ಹಳಿಯಾಳ ತಾಲೂಕಾ ಪಂಚಾಯತ್ ಸಭಾಭವನದಲ್ಲಿ ಗ್ಯಾರಂಟಿ ಯೋಜನೆಯ ಜಿಲ್ಲಾ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿ ಗ್ಯಾರಂಟಿ ಪ್ರಾಧಿಕಾರದ ಎಲ್ಲರಿಗೂ ಬಡವರ ಸೇವೆ ಸಲ್ಲಿಸಲು ಅವಕಾಶ ಒದಗಿ ಬಂದಿದ್ದು, ನಮಗೆ ನೀಡಿದ ಅಧಿಕಾರವನ್ನು ಸದುಪಯೋಗ ಪಡಿಸಿಕೊಂಡು ಬಡವರಿಗೆ ಈ ಯೋಜನೆಯನ್ನು ತಲುಪಿಸಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಕರೆ ನೀಡಿದರು.
ಜಿಲ್ಲೆಯಲ್ಲಿ ಗ್ರಹ ಜ್ಯೋತಿ ಯೋಜನೆಯ ಅಡಿ ಇಲ್ಲಿಯವರೆಗೆ 344.51 ಕೋಟಿ ಹಣ ಸರ್ಕಾರ ಭರಣ ಮಾಡಿದ್ದು, ಅನ್ನ ಭಾಗ್ಯ ಯೋಜನೆಯಡಿ ಪ್ರತಿ ತಿಂಗಳು 55,000 ಕ್ವಿಂಟಲ್ ಅಕ್ಕಿ ವಿತರಿಸಲಾಗುತ್ತಿದೆ. ಯುವ ನಿಧಿ ಅಡಿ 8 ಕೋಟಿ ಹಣ ನಿರುದ್ಯೋಗಿಗಳಿಗೆ ನೀಡಲಾಗಿದೆ.ಗ್ರಹ ಲಕ್ಷ್ಮೀ ಯೋಜನೆಯಡಿ 3,35,498 ಮಹಿಳೆಯರಿಗೆ ಪ್ರತಿ ತಿಂಗಳು 2,000ರೂ ದೊರೆಯುತ್ತಿದೆ.ಶಕ್ತಿ ಯೋಜನೆಯಡಿ 12ಕೋಟಿ ಬಾರಿ ಮಹಿಳೆಯರು ಇದರ ಲಾಭ ಪಡೆದು 350 ಕೋಟಿ ರೂ. ಸರ್ಕಾರ ಭರಣ ಮಾಡಿದೆ ಎಂದರು.

ಸಭೆಯಲ್ಲಿ ಉಪಾಧ್ಯಕ್ಷ ನಾಗರಾಜ ಮುರ್ಡೇಶ್ವರ, ಹಳಿಯಾಳದ ಅಧ್ಯಕ್ಷ ಕುಮಾರ ಜಾಮಳೇಕರ್, ತಾಲೂಕಾಧ್ಯಕ್ಷ ಅಣ್ಣಪ್ಪ ನಾಯಕ, ಅಶೋಕ ಗೌಡ, ಉಲ್ಲಾಸ ಶಾನಭಾಗ, ಪಾಂಡುರಂಗ ಗೌಡ, ರಾಜಶೇಖರ್ ಹಿರೇಮಠ, ರಾಜೇಂದ್ರ ರಾಣೆ, ಸುಮಾ ಬಗ್ರಾಣಕರ್,ಅನಿಲ ದುಡಗಲ್, ರಿಯಾಜ್ ಸಾಬ್ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.


Leave a Reply