ಗೋಕರ್ಣ: ವಿಶ್ವ ‘ಬೈಸಿಕಲ್’ ದಿನಾಚರಣೆಯ ಅಂಗವಾಗಿ ಗೋಕರ್ಣ ಪೊಲೀಸರು ಗೋಕರ್ಣದ ಪ್ರಮುಖ ಬೀದಿಯಲ್ಲಿ ಸೈಕಲ್ ಏರಿ ಜನಜಾಗೃತಿ ಮೂಡಿಸಿದರು.

ಹೌದು… ಕರ್ತವ್ಯದ ಒತ್ತಡದ ನಡುವೆಯೂ ಪೊಲೀಸರು ಜನಜಾಗೃತಿ ಮೂಡಿಸುತ್ತಿರುವುದರಿಂದ ಅದೆಷ್ಟೋ ಅಪರಾಧ ಪ್ರಕರಣಗಳಿಗೆ ಬ್ರೇಕ್ ಬಿದ್ದಿದೆ. ಅದರಂತೆಯೇ ಗೋಕರ್ಣ ಪೊಲೀಸರು ವಿಶ್ವ ಬೈಸಿಕಲ್ ದಿನಾಚರಣೆಯನ್ನು ಹಮ್ಮಿಕೊಂಡು ಪ್ರಮುಖ ಬೀದಿಗಳಲ್ಲಿ ಸೈಕಲ್ ತುಳಿದು ಸೈಬರ್ ಸುರಕ್ಷತೆ,ಪ್ರವಾಸಿಗರ ಸುರಕ್ಷತೆ,ರಸ್ತೆ ಸುರಕ್ಷತೆ ಹಾಗೂ ಮಾದಕ ದ್ರವ್ಯ ಮುಕ್ತ ಕರ್ನಾಟಕ ನಿರ್ಮಾಣದ ಬಗ್ಗೆ ಜಾಗೃತಿಯನ್ನು ಮೂಡಿಸಿದರು.

ಪೊಲೀಸರು ಸೈಕಲ್ ತುಳಿಯುತ್ತಿದ್ದಂತೆ ಚಿಣ್ಣರು ಸಹ ಪೊಲೀಸರೊಂದಿಗೆ ವಿಶ್ವ ಬೈಸಿಕಲ್ ದಿನಾಚರಣೆಯಲ್ಲಿ ಪಾಲ್ಗೊಂಡರು.


Leave a Reply