ಅಂಕೋಲಾ:ತಾಲೂಕಿನ ನದಿಬಾಗ ಕಡಲತೀರದಲ್ಲಿ ಈಜಿಗಿಳಿದ ಪ್ರವಾಸಿಗನೊಬ್ಬ ಸಮುದ್ರಪಾಲಾದ ಘಟನೆ ನಡೆದಿದೆ.

ಹುಬ್ಬಳ್ಳಿಯ ಹೆಗ್ಗೆರಿ ಮಾರುತಿನಗರದ ನಿವಾಸಿ ನಿಜಾಮುದ್ದೀನ್ ಮುಲ್ಲಾ ದಾಧಾಪಿರ್ (26) ಎಂಬಾತನೇ ಸಮುದ್ರಪಾಲಾದ ಯುವಕನಾಗಿದ್ದಾನೆ.
ಬಕ್ರೀದ್ ರಜೆ ಹಿನ್ನೆಲೆ ಎರಡು ಬೈಕಗಳಲ್ಲಿ ನಾಲ್ಕು ಮಂದಿ ಗೆಳೆಯರು ಹುಬ್ಬಳ್ಳಿಯಿಂದ ಕರಾವಳಿ ತಾಲೂಕುಗಳಿಗೆ ಪ್ರವಾಸಕ್ಕೆಂದು ಬಂದಿದ್ದರು.ನಾಲ್ವರು ಗೆಳೆಯರು ಈಜಲು ಸಮುದ್ರಕ್ಕೆ ಇಳಿದಿದ್ದರು ನಾಲ್ವರಪೈಕಿ ಓರ್ವ ಸಮುದ್ರಪಾಲಾಗಿದ್ದು ಆತನಿಗೆ ಹುಡುಕಾಟ ಆರಂಭಿಸಲಾಗಿದೆ.

ಘಟನೆಯ ವಿಷಯ ತಿಳಿಯುತ್ತಿದ್ದಂತೆ ಅಂಕೋಲಾ ಠಾಣೆಯ ಸಿಪಿಐ ಚಂದ್ರಶೇಖರ್ ಮಠಪತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತಾಲೂಕಿನೆಲ್ಲೆಡೆ ಕಳೆದಕೆಲ ದಿನಗಳಿಂದ ಸುರಿಯುತ್ತಿರುವ ಬಾರಿ ಮಳೆಗೆ ಹಳ್ಳ,ಕೊಳ್ಳಗಳೆಲ್ಲ ತುಂಬಿಕೊಂಡಿದ್ದವು,ಆದ್ದರಿಂದ ಹಳ್ಳವನ್ನು ಸಮುದ್ರಕ್ಕೆ ಸೇರಿಸುವ ಕೈಂಕರ್ಯವಾದ ಸಾಂಪ್ರದಾಯಿಕ ಕೊಡಿಯನ್ನು ಸಹ ಕಡಿಯಲಾಗಿತ್ತು,ನದಿಯಿಂದ ಸಮುದ್ರಕ್ಕೆ ರಭಸದಿಂದ ನೀರು ಸೇರುತ್ತಿರುವುದರಿಂದ ಆ ಸುಳಿಯಲ್ಲಿ ಸಿಲುಕಿದ್ದಾನೆ ಎನ್ನಲಾಗಿದೆ.


Leave a Reply