ಮುಂಡಗೋಡ : ಬೈಕ್ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಹೆಡೆಮುರಿಕಟ್ಟಿದ ಮುಂಡಗೋಡ ಪೊಲೀಸರು ವಾಹನ ಸಮೇತ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಯಲ್ಲಾಪುರ ತಾಲೂಕಿನ ಮಂಚಿಕೇರಿ ಗ್ರಾಮದ ನಾಸಿರ ಅಹ್ಮದ ಸಿದ್ಧಿ ಎಂಬಾತನೇ ಕಳ್ಳತನಮಾಡಿದ್ದ ಬಗ್ಗೆ ತಿಳಿದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
ತಾಲೂಕಿನ ಮುತ್ತಣ್ಣ ಭೋವಿ ಎನ್ನುವವರು ಪ.ಪಂ ಸಮೀಪ ಇರುವ ನೌಕರ ಭವನದ ಸಮೀಪದಲ್ಲಿ ಆತನ ಬಜಾಜ್ ಪ್ಲಾಟಿನಾ ಬೈಕ್ ನಿಲ್ಲಿಸಿಕೊಂಡು ಕೆಲಸಕ್ಕೆ ತೆರಳಿದ್ದು, ಸಾಯಂಕಾಲ ಮರಳಿ ಬಂದು ನೋಡಿದರೆ ಬೈಕ್ ಕಾಣದೆ ಇದ್ದುದರಿಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಈ ಪ್ರಕರಣದ ಹಿಂದೆ ಬಿದ್ದ ಪೊಲೀಸರು ಆರೋಪಿಯನ್ನು ಹಿಡಿದು ಕಾನೂನು ಪ್ರಕ್ರಿಯೆ ಕೈಗೊಂಡಿದ್ದಾರೆ.

ಈ ಕಾರ್ಯಾಚರಣೆ ಸಿಪಿಐ ರಂಗನಾಥ ನೀಲಮ್ಮನವರ ಮಾರ್ಗದರ್ಶನದಲ್ಲಿ ಪಿಎಸ್ಐ ಪರಶುರಾಮ ಮಿರ್ಜಗಿ, ವಿನೋದ ಎಸ್.ಕೆ, ಸಿಬ್ಬಂದಿಗಳಾದ ಕೊಟೇಶ ನಾಗರವಳ್ಳಿ, ಅಣ್ಣಪ್ಪ ಬುಡಿಗೇರ, ತಿರುಪತಿ ಚೌಡಣ್ಣನವರ, ಬಸವರಾಜ ಲಂಬಾಣಿ ಮತ್ತಿತರರು ಉಪಸ್ಥಿತರಿದ್ದರು.


Leave a Reply