ಅಂಕೋಲಾ: ತಾಲೂಕಿನ ಬೆಳಂಬಾರ ಗ್ರಾಮದ
ಮಾನ್ಯ ಮಂಜುನಾಥ್ ನಾಯ್ಕ ‘ನೀಟ್’ ಪರೀಕ್ಷೆಯಲ್ಲಿ ವೈದ್ಯಕೀಯ ಶಿಕ್ಷಣ ವಿಭಾಗದಲ್ಲಿ 14000 ರ್ಯಾಂಕ್ ಗಳಿಸಿದ ಹಿನ್ನೆಲೆಯಲ್ಲಿ ಜನತಾ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಅಂಕೋಲಾ ವತಿಯಿಂದ ಸನ್ಮಾನಿಸಿ ವೈಯಕ್ತಿಕ 25000 ರೂಪಾಯಿಗಳ ಗೌರವದನವನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಜನತಾ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಅಂಕೋಲಾ ಅಧ್ಯಕ್ಷರಾದ ಉಪೇಂದ್ರ ಬಿ ನಾಯ್ಕ ಮಾತನಾಡಿ ಕಷ್ಟದ ಬದುಕಿನಲ್ಲೂ ಮಗಳ ಓದಿಗೆ ಶ್ರಮಿಸಿ,ಮಗಳನ್ನು ಗುರಿ ಮುಟ್ಟಿಸುವಂತೆ ಮಾಡಿದ ಮಂಜುನಾಥ್ ನಾಯ್ಕ ಮತ್ತು ಸುಮಾ ದಂಪತಿಗಳ ಪರಿಶ್ರಮಕ್ಕೆ ಫಲದೊರೆತಿದೆ. ರಾಷ್ಟ್ರಮಟ್ಟದಲ್ಲಿ ಅಂಕೋಲೆಯ ಹೆಸರನ್ನು ಪ್ರಖ್ಯಾತಿಗೊಳಿಸಿದ ಮಾನ್ಯ ನಾಯ್ಕ ಇವಳಿಗೆ ಶಾಸಕ ಸತೀಶ್ ಸೈಲ್ ನೇತೃತ್ವದಲ್ಲಿ 25 ಸಾವಿರ ರೂಪಾಯಿ ಚೆಕ್ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಮಂಜೇಶ್ವರ ನಾಯಕ,ಪಾಂಡುರಂಗ ಗೌಡ,ವಿನೋದ್ ನಾಯಕ,ಜೆಪಿ ನಾಯಕ ಮುಂತಾದವರು ಉಪಸ್ಥಿತರಿದ್ದರು.


Leave a Reply