ಕಾಲೇಜು ವಿದ್ಯಾರ್ಥಿನಿ ನೇಣಿಗೆ ಶರಣು!

Spread the love

ಅಂಕೋಲಾ: ಅಪ್ರಾಪ್ತ ಯುವತಿಯೋರ್ವಳು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಅಗಸೂರು ಗ್ರಾಪಂ ವ್ಯಾಪ್ತಿಯ ಅಡ್ಲೂರಿನಲ್ಲಿ ನಡೆದಿದೆ.

ಅಡ್ಲೂರು ಗ್ರಾಮದ ನಿವಾಸಿ ಕವನಾ ಲಕ್ಷ್ಮಣ ಗೌಡ(17) ಎಂಬಾಕೆಯೇ ನೇಣಿಗೆ ಶರಣಾದ ಯುವತಿಯಾಗಿದ್ದಾಳೆ. ಅಗಸೂರಿನ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಕವನಾ ಗೌಡ ಎಂದಿನಂತೆ ಮಂಗಳವಾರ ಕಾಲೇಜಿಗೆ ತೆರಳಿದ್ದು ಮರಳಿ ಮನೆಗೆ ಬಂದಿದ್ದಳು, ಸಂಜೆ 5 ಗಂಟೆಯ ಸುಮಾರಿಗೆ ಸಹೋದರನ ಬಳಿ ತಿಂಡಿ ತರಲು ಅಂಗಡಿಗೆ ಕಳುಹಿಸಿದ್ದು, ಅಮ್ಮ  ದನದ ಕೊಟ್ಟಿಗೆಯಲ್ಲಿ ಕೆಲಸಮಾಡುತ್ತಿರುವ ಸಂದರ್ಭದಲ್ಲಿ,ಯಾರು ಇಲ್ಲದ ವೇಳೆಯಲ್ಲಿ ಮನೆಯ ಮೇಲ್ಛಾವಣಿಗೆ ಸೀರೆಯಿಂದ ನೇಣು ಬಿಗಿದುಕೊಂಡಿದ್ದಾಳೆ, ದನದ ಕೊಟ್ಟಿಗೆಯಿಂದ ಕೆಲಸ ಮುಗಿಸಿ ಮನೆಯೊಳಗೆ ಬಂದ ಕವನಾಳ ತಾಯಿ ಕಲ್ಪನಾ ಗೌಡ ಮಗಳು ನೇಣು ಬಿಗಿದ ಸ್ಥಿತಿಯಲ್ಲಿದ್ದದ್ದನ್ನು ಕಂಡು ಕೂಗಿಕೊಂಡಿದ್ದು, ತಕ್ಷಣ ನೆರೆಹೊರೆಯವರು ಆಗಮಿಸಿದ್ದು ಆಂಬ್ಯುಲೆನ್ಸ್ ಮೂಲಕ ತಾಲೂಕಾಸ್ಪತ್ರೆಗೆ ಕರೆತಂದಿದ್ದು, ವೈದ್ಯರು ತಪಾಸಣೆ ನಡೆಸಿ ಸಾವನ್ನಪ್ಪಿದ ದೃಢಪಡಿಸಿದ್ದಾರೆ.

ಈ ಕುರಿತು ಮೃತಳ ತಂದೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು,ಸಿಪಿಐ ಚಂದ್ರಶೇಖರ್ ಮಠಪತಿ ಪರಿಶೀಲನೆ ನಡೆಸುತ್ತಿದ್ದಾರೆ.

ಎಲ್ಲರೊಂದಿಗೂ ಅನ್ಯೋನ್ಯವಾಗಿದ್ದ ಕವನಾ!

ಸೌಮ್ಯ ಸ್ವಭಾವದ ಕವನಾ ಗೌಡ ಮಂಗಳವಾರ ಕಾಲೇಜಿಗೆ ತೆರಳಿದ್ದು,ಈ ಹಿಂದಿನಿಂದಲೂ ಗೆಳತಿಯೊಂದಿಗೆ ಹಾಗೂ ಮನೆಯವರೊಂದಿಗೆ  ಅನ್ಯೋನ್ಯತೆಯಿಂದ ಇರುತಿದ್ದಳು ಎನ್ನಲಾಗಿದ್ದು, ಕೆಲದಿನಗಳ ಹಿಂದೆಯಷ್ಟೇ ವಿಪರೀತ ಹೊಟ್ಟೆನೋವಿನಿಂದ ಬಳಲುತ್ತಿದ್ದು,ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಳು ಎನ್ನಲಾಗಿದೆ ಆದರೆ ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿದ್ದು ಏಕೆ ಎನ್ನುವುದು ಪೊಲೀಸ್ ತನಿಖೆಯಿಂದ ತಿಳಿಯಬೇಕಿದೆ.

Leave a Reply

Your email address will not be published. Required fields are marked *