ಕಾರವಾರ: ಉತ್ತರ ಕನ್ನಡ ಜನಮೆಚ್ಚಿದ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎಂ ನಾರಾಯಣ್ ಬೆಂಗಳೂರು ಇಲೆಕ್ಟ್ರಾನಿಕ್ ಸಿಟಿಯ ಡೆಪ್ಯೂಟಿ ಕಮಿಷನರ್ ಆಗಿ ವರ್ಗಾವಣೆ ಗೊಂಡಿದ್ದು ಅವರ ಜಾಗಕ್ಕೆ ದೀಪನ್ ಎಂ ಎನ್ ನಿಯೋಜನೆಗೊಂಡಿದ್ದಾರೆ.

ಹೌದು.. ಉತ್ತರ ಕನ್ನಡ ಜಿಲ್ಲೆಯಲ್ಲಿ ತನ್ನದೇ ಶೈಲಿಯಲ್ಲಿ ಕರ್ತವ್ಯ ನಿರ್ವಹಿಸಿ ದಕ್ಷ ಪೊಲೀಸ್ ವರಿಷ್ಠಾಧಿಕಾರಿ ಎಂದು ಗುರುತಿಸಿಕೊಂಡಿದ್ದ ಎಂ ನಾರಾಯಣ್ ವರ್ಗಾವಣೆಗೊಂಡಿದ್ದು ಜಿಲ್ಲೆಯ ಸಾವಿರಾರು ಅಭಿಮಾನಿಗಳಿಗೆ ಬೇಸರ ತಂದಿದ್ದು, ರಾಜಕೀಯ ಒತ್ತಡಗಳಿಂದಲೇ ಎಸ್ಪಿ ವರ್ಗಾವಣೆ ಮಾಡಿದ್ದಾರೆ ಎನ್ನುವ ಚರ್ಚೆ ಎಲ್ಲಡೆ ವ್ಯಕ್ತವಾಗಿದೆ.

ಉತ್ತರ ಕನ್ನಡ ನೂತನ ಎಸ್ಪಿಯಾಗಿ ಕರ್ನಾಟಕ ಮೀಸಲು ಪೊಲೀಸ್ ಕಮಾಂಡೆಂಟ್ ಆಗಿದ್ದ ದೀಪನ್ ಎಂ ಎನ್ ಅವರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.

Leave a Reply