ಅಂಕೋಲಾ:ಟಾಟಾ ಮೋಟಾರ್ಸ್ ಹಾಗೂ ಅರವಿಂದ್ ಮೋಟಾರ್ಸ್,ಕುಮಟಾದ ಸಹಬಾಗಿತ್ವದಲ್ಲಿ ಟಿಪ್ಪರ್ ಗ್ರಾಹಕರ ಸಭೆ ಅಂಕೋಲಾ ತಾಲೂಕಿನಲ್ಲಿ ಹಲವಾರು ಉದ್ಯಮಿಗಳ ಸಮ್ಮುಖದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಯಮಿ ತುಳಸಿದಾಸ್ ಕಾಮತ್ ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಟಾಟಾ ಮೋಟಾರ್ಸ್ ಸೇಲ್ಸ್ ವ್ಯವಸ್ಥಾಪಕ ಪೈದಿರಾಜ್ ನೂತನ ವಾಹನಗಳ ಬಾಳಿಕೆ,ವಿಶೇಷತೆ,ಇಂಜಿನಗಳ ಕಾರ್ಯಕ್ಷಮತೆ ಹಾಗೂ ಟಾಟಾ ವಾಹನಗಳ ಸಮಸ್ತ ಉಪಯೋಗದ ಕುರಿತು ಗ್ರಾಹಕರಿಗೆ ವಿವರಿಸಿದರು ಮತ್ತು ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸಿದರು.

ವೇದಿಕೆಯಲ್ಲಿ ಉದ್ಯಮಿ ನಾರಾಯಣ ನಾಯಕ(ನನ್ನಿ),ರಾಜು ಕಳಸ್,ವಿನಾಯಕ್ ಕಾಮತ್ ಮುಂತಾದವರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಅರವಿಂದ ಮೋಟಾರ್ಸ್ ಮಾರಾಟ ಪ್ರಧಾನ ವ್ಯವಸ್ಥಾಪಕ ಉದಯ್,ಡಿ ಎಸ್ ಎಂ ಶಾಜಿ, ಶ್ರೀಧರ್ ಪ್ರಭು,ವಿಜಯ್ ಸಿಂಹ, ಸೀನಿಯರ್ ಬ್ರ್ಯಾಂಚ್ ಮ್ಯಾನೇಜರ್ ರವಿ ಎಂ ನಾಯ್ಕ,ಅಸಿಸ್ಟೆಂಟ್ ಸೇಲ್ಸ್ ಮ್ಯಾನೇಜರ್ ವಿಶ್ವನಾಥ್ ಬಾನಾವಳಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ದಿನಕರ್ ನಾಯ್ಕ,ಪಪ್ಪು ಸೈಯದ್,ಸಂದೇಶ್ ನಾಯ್ಕ,ಜಾತುವೇದ ನಾಯಕ,ಶರತ್ ನಾಯ್ಕ,ವೆಂಕಟೇಶ್ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.


Leave a Reply