ಒಂದು ಸರ್ವೇಗೆ ಪುರಸಭೆಯ ಹತ್ತು ಅಧಿಕಾರಿಗಳ ಉಪಸ್ಥಿತಿ ಅವಶ್ಯಕತೆಯಿತ್ತೆ? ಈ ಪ್ರಕ್ರಿಯೆ ಹಠಕ್ಕೊ? ದ್ವೇಷಕ್ಕೊ?  ಜಿಲ್ಲಾಧಿಕಾರಿಯವರೇ ಏನಿದು ವ್ಯವಸ್ಥೆ?

Spread the love

ಅಂಕೋಲಾ: ತಾಲೂಕಿನಲ್ಲಿ ವಿಪರೀತ ಮಳೆ ಒಂದೆಡೆಯಾದರೆ ಸಾಲು,ಸಾಲು ಅವಘಡಗಳು ಮತ್ತೊಂದೆಡೆ ಇದರ ಮದ್ಯೆ ಪುರಸೊತ್ತು ಇಲ್ಲದೆ ಅಧಿಕಾರಿಗಳ ಒತ್ತಡದ ಕರ್ತವ್ಯಗಳು..ಆದರೆ ಅಂಕೋಲಾ ಪುರಸಭೆಯಲ್ಲಿ ಮಾತ್ರ ಅಧಿಕಾರಿಗಳು ಮನಸೋ ಇಚ್ಛೆ ಕರ್ತವ್ಯ ನಿರ್ವಹಿಸುತ್ತಿರುವುದು ಮಾತ್ರ ಆಡಳಿತಯಂತ್ರಕ್ಕೆ ಸಂಚಕಾರವಾಗಿ ಮಾರ್ಪಟ್ಟಿದೆ.

ಹೌದು… ತಾಲೂಕಿನ ಪುರಸಭೆ ವ್ಯಾಪ್ತಿಯ ಕೋಟೆವಾಡದಲ್ಲಿ ಪುರಸಭೆಗೆ ಸಂಬಂಧಿಸದ ಜಾಗೆಯಲ್ಲಿ ಸರ್ವೇ ಮಾಡುವಂತೆ ಸ್ಥಳೀಯರೊಬ್ಬರ ದೂರಿನ ಮೇರೆಗೆ ಸರ್ವೇ ಕಾರ್ಯಕ್ಕೆ ಭೂ-ಮಾಪನ ಅಧಿಕಾರಿಗಳು ಮುಂದಾಗಿದ್ದರು,ಆ ಜಾಗದ ಸರ್ವೇ ಕಾರ್ಯಕ್ಕೆ ಸರ್ವೇ ಇಲಾಖೆಯ ಅಧಿಕಾರಿಗಳು ಸೂಕ್ತ ಭದ್ರತೆ ಒದಗಿಸುವಂತೆ ಕೋರಿ ಹಾಗೂ ಈ ಸಂದರ್ಭದಲ್ಲಿ ಉಪಸ್ಥಿತರಿರುವಂತೆ ಪೊಲೀಸ್ ಇಲಾಖೆಗೆ ಪತ್ರ ಬರೆದಿದ್ದರು.ಅದರಂತೆಯೇ ಜುಲೈ 21 ಸೋಮವಾರ ಸರ್ವೇಗೆಂದು ಬಂದಿದ್ದರು ಈ ಸಂದರ್ಭದಲ್ಲಿ, ಪುರಸಭೆಯ ಎಲ್ಲಾ ಸಿಬ್ಬಂದಿವರ್ಗ ಈ ಸ್ಥಳಕ್ಕೆ ಆಗಮಿಸಿದ್ದು ಏತಕ್ಕೆ ಎನ್ನುವ ಪ್ರಶ್ನೆ ಸಾರ್ವಜನಿಕ ವಲವದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಯಾವುದೇ ವಿವಾದಿತ ಜಾಗೆಯಲ್ಲಿ ಭೂ-ಮಾಪನ ಅಧಿಕಾರಿಗಳು ಭದ್ರತೆದೃಷ್ಠಿಯಿಂದ ಪೊಲೀಸ್ ಅಧಿಕಾರಿಗಳಿಗೆ ತಿಳಿಸುವುದು ಸರ್ವೇಸಾಮಾನ್ಯ,ಅದನ್ನು ಹೊರತುಪಡಿಸಿ ಪುರಸಭೆಯ ಕಿರಿಯ ಅಭಿಯಂತರರು ಮತ್ತು ಕಂದಾಯ ಅಧಿಕಾರಿಗಳು ಬರುವುದು ಮಾಮೂಲಿ, ಅಷ್ಟಕ್ಕೂ ಪುರಸಭೆಗೆ ಸಂಬಂಧಿಸಿದ ಜಾಗವಲ್ಲದಿದ್ದರು ಹಿರಿ-ಕಿರಿಯರಿಂದ ಹಿಡಿದು ಹತ್ತಕ್ಕೂ ಹೆಚ್ಚಿನ ಪುರಸಭೆ ಅಧಿಕಾರಿಗಳು ಬೀಡು ಬಿಟ್ಟಿದ್ದು ಸಾರ್ವಜನಿಕ ಇಷ್ಟೊಂದು ಸಂಖ್ಯೆಯಲ್ಲಿ ಸಿಬ್ಬಂದಿಗಳನ್ನು ಏತಕ್ಕೆ ಈ ಸ್ಥಳಕ್ಕೆ ನಿಯೋಜನೆಮಾಡಿದ್ದರು? ಪೊಲೀಸರಂತೆ ಪುರಸಭೆ ಅಧಿಕಾರಿಗಳು ಭದ್ರತೆಗೆಂದು ಬಂದಿದ್ದರೋ? ಇಲ್ಲಿಗೆ ತೆರಳುವಂತೆ ಯಾರದ್ದಾದರು ಒತ್ತಡವಿತ್ತೆ? ಇಲ್ಲ ಪುರಸಭೆಯಲ್ಲಿ ಮಾಡಲು ಬೇರೆ ಯಾವ ಕೆಲಸವಿಲ್ಲವೋ? ಎನ್ನುವ ಪ್ರಶ್ನೆ ಉದ್ಭವವಾಗಿದೆ.

ಸೋಮವಾರ ಬಿಕೋ.. ಎನ್ನುತ್ತಿದ್ದ ಪುರಸಭೆ!

ಸೋಮವಾರ ಬೆಳಿಗ್ಗೆ  ಸರ್ವೇ ನಡೆಯುತ್ತಿದ್ದ  ಬಗ್ಗೆ ತಿಳಿದ ಪುರಸಭೆ ಅಧಿಕಾರಿಗಳು ತನ್ನೆಲ್ಲ ಸಿಬ್ಬಂದಿಗಳನ್ನು ಯಾವ ಕಾರಣಕ್ಕೆ ಕರೆದೊಯ್ದಿದ್ದರು ಮತ್ತು ಎರಡು ಗಂಟೆಗಳ ಕಾಲ ಪುರಸಭೆಯ ಅಧಿಕಾರಿಗಳು ಕೋಟೆವಾಡದಲ್ಲೇ ಕಾಲಕಳೆದಿದ್ದಾರೆ. ಹಾಗೆಯೇ ಈ ಕುರಿತು ಪುರಸಭೆ ಅಧಿಕಾರಿಗಳನ್ನು ಕೇಳಿದರೆ ಮುಖ್ಯಾಧಿಕಾರಿಯವರ ಆದೇಶದಂತೆ ತಾವೆಲ್ಲರೂ ಅಲ್ಲಿ ತೆರಳಿದ್ದೇವೆ ಎನ್ನುತ್ತಾರೆ..ಅಷ್ಟಕ್ಕೂ ಪುರಸಭೆಯ ಅಧ್ಯಕ್ಷರ ವಾರ್ಡ್ ಆಗಿರುವ ಕೋಟೆವಾಡದ ಈ ಪ್ರದೇಶಕ್ಕೆ ಇಷ್ಟೊಂದು ಅಧಿಕಾರಿಗಳನ್ನು ದ್ವೇಷದಿಂದಲೇ ಕಳುಹಿಸಿದ್ದಾರೆಯೇ? ಅಧಿಕಾರ ಹೀಗೂ ದುರ್ಬಳಕೆ ಮಾಡಿಕೊಳ್ಳಬಹುದಾ ಎನ್ನುವ ಮಾತು ಕೇಳಿಬಂದಿದ್ದು ಈ ಬಗ್ಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಸೂಕ್ತ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

ಕೋಟೆವಾಡ ಎಂದರೆ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಭೂಮಿ!

ತಾಲೂಕಿನಲ್ಲಿ ಕೋಟೆವಾಡ ಎಂದರೆ ಹಿಂದೂ-ಮುಸ್ಲಿಂ ಧರ್ಮ ಸೇರಿದಂತೆ ಹಲವಾರು ಧರ್ಮಿಯರು ಇಲ್ಲಿ ನೇಲಿಸಿದ್ದಾರೆ ಹಾಗೂ ಎಲ್ಲರೂ ಎಲ್ಲಾಧರ್ಮದ ಹಬ್ಬವನ್ನು ಸಂಭ್ರಮಿಸುತ್ತಾರೆ. ಇಲ್ಲಿ ಮುಸ್ಲಿಂ ಸಮುದಾಯದ ಸಂಖ್ಯೆ  ಪ್ರದೇಶದಲ್ಲಿ ಹೆಚ್ಚಿದ್ದು, ಹಿಂದೂಗಳ ಸಂಖ್ಯೆಯೂ ಅಷ್ಟೇ ಇದೆ.. ಹಾಗೆಯೇ ಹಿಂದೂಗಳ ಆರಾಧ್ಯದೈವ ಐತಿಹಾಸಿಕ ಪ್ರಸಿದ್ಧ ಕೋಟೆ ಮಾರುತಿ ದೇಗುಲವು ಇದೆ ಒಟ್ಟಾರೆ ಈ ನೆಲದಲ್ಲಿ ಅಂದಿನಿಂದ ಇಂದಿನವರೆಗೂ ಯಾವುದೇ ಸಂಘರ್ಷವಾಗಲಿ,ಕೊಮುವಾದವಾಗಲಿ ನಡೆದಿಲ್ಲ,ಇದಕ್ಕೆ ಪೂರಕವೆಂಬಂತೆ ಸ್ಥಳೀಯ ಜನಪ್ರತಿನಿಧಿ ಕೋಟೆವಾಡ ವಾರ್ಡ್ ನ ಸದಸ್ಯ ಹಾಗೂ ಪುರಸಭೆಯ ಅಧ್ಯಕ್ಷ ಸೂರಜ್ ಎಂ ನಾಯ್ಕ ಎಲ್ಲರನ್ನು ತಮ್ಮವರಂತೆ ಕಾಣುವ ಗುಣವುಳ್ಳವರಿದ್ದರಿಂದ ಚುನಾವಣಾ ಕಣದಲ್ಲಿ ಪ್ರತಿಸ್ಪರ್ಧಿಯೇ ಇಲ್ಲದಂತಾಗಿರುವುದು ಈ ಭಾಗದವರು ಅವರ ಮೇಲೆ ಇಟ್ಟಿರುವ ವಿಶ್ವಾಸ ತೋರ್ಪಡಿಸುತ್ತದೆ.

Leave a Reply

Your email address will not be published. Required fields are marked *