ಅಂಕೋಲಾ ತಾಲೂಕಿನ ಬೆಳಂಬಾರದ ಹಿರಿಯ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮೀನುಗಾರರ ಸೊಸೈಟಿ ಅಧ್ಯಕ್ಷ ಶಂಬಾ ರಾಮಾ ಖಾರ್ವಿಯವರಿಗೆ ಅನಾರೋಗ್ಯದ ಹಿನ್ನೆಲೆ ಅವರ ಮನೆಗೆ ತೆರಳಿದ ಶಾಸಕ ಸತೀಶ್ ಸೈಲ್ ತೆರಳಿ ಆರೋಗ್ಯ ವಿಚಾರಿಸಿದರು.

ಕಳೆದ ಕೆಲ ದಿನಗಳ ಹಿಂದೆಯಷ್ಟೇ ದೋಣಿ ಮುಗುಚಿ ಪ್ರಾಣಾಪಾಯದಿಂದ ಪಾರಾಗಿದ್ದ ಹರಿಶ್ಚಂದ್ರ ಖಾರ್ವಿ ಹಾಗೂ ನಂತರ ಕಳೆದ ಕೆಲ ದಿನಗಳ ಹಿಂದೆಯಷ್ಟೇ ವಿವಾಹವಾದ ಕಾಂಗ್ರೆಸ್ ಕಾರ್ಯಕರ್ತ ಹಾಗೂ ಭೂ ನ್ಯಾಯಮಂಡಳಿಯ ಸದಸ್ಯರಾದ ಶೇಖರ ಗೌಡರವರ ಮನೆಗೂ ತೆರಳಿ ಅವರಿಗೆ ಶುಭ ಹಾರಿಸಿ, ಕೆಲಕಾಲ ಅವರ ಕುಟುಂಬದೊಂದಿಗೆ ಕಾಲ ಕಳೆದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಶ್ವರ ನಾಯಕ,ಗ್ಯಾರಂಟಿ ಪ್ರಾಧಿಕಾರದ ತಾಲೂಕಾಧ್ಯಕ್ಷ ಪಾಂಡುರಂಗ ಗೌಡ,ಮಾಜಿ ಶಾಸಕ ಕೆ ಎಚ್ ಗೌಡ,ಜಿಪಂ ಮಾಜಿ ಸದಸ್ಯ ವಿನೋದ ನಾಯಕ, ಶಾಸಕರ ಆಪ್ತ ಕಾರ್ಯದರ್ಶಿ ಜಗದೀಶ ಖಾರ್ವಿ,ಗೋಪು ನಾಯಕ,ಅಡ್ಲೂರ್,ಸುರೇಶ್ ನಾಯಕ ಅಲಗೇರಿ,ಸ್ಥಳೀಯ ಮುಖಂಡ ಮಂಜುನಾಥ ನಾಯ್ಕ,ಮಹಾಬಲೇಶ್ವರ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.


Leave a Reply