ಅಂಕೋಲಾ: ತಾಲ್ಲೂಕಿನ ಹಿಮಾಲಯ ಶಾಲೆಯಲ್ಲಿ ಕಾರ್ಗಿಲ್ ವಿಜಯ್ ದಿವಸನ್ನು ಸಂಭ್ರಮದಿಂದ ಆಚರಿಸಲಾಯಿತು. ಆರಂಭದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದ ಯೋಧರ ಭಾವಚಿತ್ರಕ್ಕೆ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದ ಪುಷ್ಪಾರ್ಪಣೆ ಮಾಡಿದರು.

ಹಿಮಾಲಯ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಮ್ ಐ ಮಹಾಲೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾರ್ಗಿಲ್ ವಿಜಯ್ ಎಂದರೆ ದೇಶಾಭಿಮಾನದ ರೋಚಕತಗೆ ಸಾಕ್ಷಿಯಾಗಿ ಸ್ಪೂರ್ತಿಯಾದ ಕ್ಷಣ. ಭಾರತವೂ ಇಂದಿಗೂ ಬಲಾಡ್ಯ ರಾಷ್ಟ್ರವಾಗಿ ಗುರುತಿಸಿಕೊಂಡಿದ್ದು ರಕ್ಷಣಾತ್ಮಕವಾಗಿ ಜನಸಾಮಾನ್ಯರು ನೆಮ್ಮದಿಯಿಂದ ಬದುಕಲು ದೇಶದ ಸೈನಿಕರ ತ್ಯಾಗವೇ ಕಾರಣ. ವಿದ್ಯಾರ್ಥಿಗಳು ದೇಶದ ಸೈನಿಕರಿಗೆ ಗೌರವ ನೀಡುವ ಜೊತೆಗೆ ದೇಶಕ್ಕಾಗಿ ತ್ಯಾಗ ಮತ್ತು ಧೈರ್ಯದ ಮನೋಧೋರಣೆ ರೂಪಿಸಿಕೊಳ್ಳಿ ಎಂದು ಕರೆ ನೀಡಿದರು.
ಹಿಮಾಲಯ ಸಿ.ಬಿ.ಎಸ್.ಸಿ ಶಾಲೆಯ ಪ್ರಾಂಶುಪಾಲರಾದ ಸವಿತಾ ಕಾನೋಜಿ ಮಾನನಾಡಿ, ಯೋಧರು ನಮ್ಮ ದೇಶ ಸುರಕ್ಷತೆಯ ಆಧಾರ. ಯೋಧರ ಧೈರ್ಯ, ಸಾಹಸ ಮತ್ತು ದೇಶಭಕ್ತಿಯಿಂದ ನಾವು ಕಾರ್ಗಿಲ್ ಯುದ್ದದಲ್ಲಿ ಜಯಬೇರಿ ಹೊಂದಲು ಸಾಧ್ಯವಾಯಿತು ಎಂದರು.
ಶಾಲೆಯ ಶಿಕ್ಷಕಿಯಾದ ಶೀತಲ್ ನಾಯ್ಕ ಕಾರ್ಗಿಲ್ ವಿಜಯ್ ದಿವಸ್ ಆಚರಣೆಯ ಮಹತ್ವ ತಿಳಿಸಿದರು. ಶಾಲೆಯ ಒಂಬತ್ತನೇ ತರಗತಿಯ ವಿದ್ಯಾರ್ಥಿಗಳು ಯೋಧರಿಗೆ ತಮ್ಮ ನೃತ್ಯದ ಮೂಲಕ ಧನ್ಯವಾದ ತಿಳಿಸಿದರು, ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳು ಯೋಧರ ವೇಷ ಭೂಷಣ ಧರಿಸಿ ಕಾರ್ಯಕ್ರಮದ ಮೆರೆಗು ಹೆಚ್ಚಿಸಿದರು.
ಒಂಬತ್ತನೇ ತರಗತಿಯ ವಿದ್ಯಾರ್ಥಿನಿ ಸಾಕ್ಷಿ ನಾಯಕ ಯೋಧರು ಹಾಗೂ ವಿದ್ಯರ್ಥಿಗಳ ಕರ್ತವ್ಯ ಪ್ರಜ್ನೆಯ ಅರಿವಿನ ಭಾ಼ಷಣದ ಮೂಲಕ ಗಮನ ಸೆಳೆದರು. ಹಿಮಾಲಯ ಶಿಕ್ಷಣ ಸಂಸ್ಥೆಯ ಶಿಕ್ಷಕರು ಮತ್ತು ಸಿಬ್ಬಂದಿ ಇದ್ದರು. ಹತ್ತನೇ ತರಗತಿಯ ವಿದ್ಯಾರ್ಥಿಗಳಾದ ಧನುಶ್ರೀ ನಾಯಕ ಮತ್ತು ವೃದ್ಧಿ ಕುರ್ಲೆ ಕಾರ್ಯಕ್ರಮ ನಿರೂಪಿಸಿದರು.


Leave a Reply