Spread the love

ಹೊನ್ನಾವರ; ರಸ್ತೆಯ ಪಕ್ಕ ಕಾರಿನಲ್ಲಿ ಗೋ ಕಳ್ಳತನಕ್ಕೆ ತೊಡಗಿದ್ದ ಪ್ರಕರಣದಲ್ಲಿ ಕಾರು ಸಹಿತ ಇರ್ವರು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಹೊನ್ನಾವರ ಪೊಲೀಸರು ಯಶಸ್ವಿಯಾಗಿದ್ದಾರೆ.

  ಹೌದು… ಜಿಲ್ಲೆಯಾದ್ಯಂತ ನಡೆಯುತ್ತಿರುವ  ಅಕ್ರಮ ಗೋ ಕಳ್ಳತನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಸಿದ ಬೆನ್ನಲ್ಲೇ ಸ.4 ರಂದು ಪಟ್ಟಣದಲ್ಲಿ ರಸ್ತೆಯ ಪಕ್ಕದಲ್ಲಿ ಮಲಗಿದ್ದ ಹಸುವನ್ನು ಕಳ್ಳತನ ಮಾಡಲು ಮಾಸ್ಕ ಧರಿಸಿದ ವ್ಯಕ್ತಿಯೊರ್ವ ಸಹಿತ ಮೂವರು ಪ್ರಯತ್ನಿಸಿದ ಘಟನೆ ಸಿಸಿ‌ ಕ್ಯಾಮರದಲ್ಲಿ ದಾಖಲಾಗಿತ್ತು. ಈ ಪ್ರಕರಣದ ಬೆನ್ನುಹಿಡಿದ ಹೊನ್ನಾವರ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಪ್ರಕರಣ ದಾಖಲಿಸಿದ್ದರು.

ಭಟ್ಕಳ ತಾಲೂಕಿನ ಮುಗ್ದಂ ಕಾಲೂನಿಯ  ಮೊಹಮ್ಮದ್ ಜಾಪರ್ ಸಾಧಿಕ್ ಜಕ್ವಾನ್ ತಂದೆ ಮೊಹಮ್ಮದ ಅಲಿ( 24) ವರ್ಷ, ಕುಂದಾಪುರ ಮೂಲದ ಜುಮ್ಮಾ ಮಸೀದಿಯ  ಸಬೀಲ್ ಬೆಟ್ಟಿ ಹುಸೇನ್ ಸಾಹೇಬ (31) ಬಂಧಿತರಾಗಿದ್ದು, ವಿಚಾರಣೆಗೆ ಒಳಪಡಿಸಲಾಗಿದ್ದ ಸಂದರ್ಭದಲ್ಲಿ,ಹಸು ಕಳ್ಳತನ ಮಾಡಲು ಬಂದಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಇನ್ನುಳಿದ ಮಾಸ್ಕ್ ಮ್ಯಾನ್ ಗಳಾದ ಭಟ್ಕಳ ಮೂಲದ ಜಿಸ್ಸಾನ ಮತ್ತು ಮರ್ದಾನ್ ಎನ್ನುವ ಇರ್ವರು ಆರೋಪಿತರು ತಲೆ ಮರೆಸಿಕೊಂಡಿದ್ದು ಅವರ ಪತ್ತೆಕಾರ್ಯಕ್ಕೆ ಪೊಲೀಸರು ಮುಂದಾಗಿದ್ದಾರೆ.ಬಂಧಿತರಿಂದ 4 ಲಕ್ಷ ಮೌಲ್ಯದ ಮಾರುತಿ ಕಂಪನಿಯ ಬ್ರಿಜಾ ಕಾರು ವಶಪಡಿಸಿಕೊಂಡಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.


       ಪೊಲೀಸ್ ವರಿಷ್ಠಾಧಿಕಾರಿ ಉತ್ತರ ಕನ್ನಡ ಹಾಗೂ ಡಿವೈಎಸ್ಪಿ ಭಟ್ಕಳರವರ ಮಾರ್ಗದರ್ಶನದಲ್ಲಿ ಹೊನ್ನಾವರ ಠಾಣೆಯ ಸಿಪಿಐ ಸಿದ್ದರಾಮೇಶ್ವರ ಎಸ್, ಪಿಎಸೈ ರಾಜಶೇಖರ ವಂದಲಿ ಹೊನ್ನಾವರ ಇವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಗಜಾನನ ನಾಯ್ಕ, ವಿಠಲ ಗೌಡ, ಮನೋಜ.ಡಿ., ರವಿ ನಾಯ್ಕ, ಚಂದ್ರಶೇಖರ ನಾಯ್ಕ, ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿಯವರಾದ ಉದಯ ಗುನಗಾ ಕಾರ್ಯಚರಣೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *