Spread the love

ಭಟ್ಕಳ: ಸರ್ಕಾರದ ದೂರದರ್ಶಿತ್ವದ ಕಾರ್ಯಕ್ರಮಗಳಲ್ಲೊಂದಾದ “ಸ್ವಚ್ಛತಾ ಹೀ ಸೇವಾ’ ಅಭಿಯಾನದಡಿ “ಏಕ್ ದಿನ್. ಎಕ್ ಘಂಟಾ, ಎಕ್ ಸಾಥ” ಶ್ರಮದಾನ ಘೋಷವಾಕ್ಯದಡಿ ಭಟ್ಕಳ ತಾಲೂಕಿನ 16 ಗ್ರಾಮ ಪಂಚಾಯತಿಗಳು ಏಕ ಕಾಲದಲ್ಲಿ ಶ್ರಮದಾನದಲ್ಲಿ ತೊಡಗಿಸಿಕೊಳ್ಳುವ ಮೂಲಕ ಅಭೂತಪೂರ್ವ ಯಶಸ್ಸು ಗಳಿಸಿದೆ ಎಂದು ಭಟ್ಕಳ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ್ ಎಂ ರವರು ತಿಳಿಸಿದರು.

ಅವರು ಇಂದು ಬೇಂದ್ರೆ ಗ್ರಾಮ ಪಂಚಾಯತನ ಸಣಭಾವಿ ತೀರದಲ್ಲಿ ತಾಲೂಕ ಮಟ್ಟದ “ಬೀಜ್ ಸ್ವಚ್ಚತಾ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ನಾವು ನಮ್ಮ ಪರಿಸರದ ಸ್ವಚ್ಚತೆ ಕಾರ್ಯ ದೈನಂದಿನ ಚಟುವಟಿಕೆಯಾಗಿ ಅಳವಡಿಸಿಕೊಂಡು “ಸ್ವಚ್ಛ ಸ್ವಸ್ಥ ದೇಶ ನಿರ್ಮಾಣ ಸಾಧ್ಯ. ನಾವೆಲ್ಲರೂ ಸ್ವಚ್ಚತೆಯೆಡೆಗೆ ಒಂದು ಹೆಜ್ಜೆ ಎಂಬ ದೃಢ ಸಂಕಲ್ಪದೊಂದಿಗೆ ಸಾಗಲು ಪ್ರತಿಜ್ಞೆಗೈಯಬೇಕು ಎಂದು ಕರೆ ನೀಡಿದರು. ಬೇಂದ್ರೆ ಗ್ರಾಮ ಪಂಚಾಯತದವರು ಸಮುದಾಯವನ್ನು ತೊಡಗಿಸಿಕೊಂಡು ನಡೆಸಿದ ಇಂದಿನ ಶ್ರಮದಾನ ಶ್ಲಾಘನೀಯ ಎಂದರು.

ಪಂಚಾಯತ ಅಭಿವೃದ್ಧಿ ಅಧಿಕಾರಿ ಉದಯ ಬೋರಕರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ ಗ್ರಾಮ ಪಂಚಾಯತದಲ್ಲಿ ತ್ಯಾಜ್ಯ ವಿಲೇವಾರಿ ಘಟಕ, ವಾಹನ, ಸಿಬ್ಬಂದಿ ಸೇವೆಯಿದ್ದು ಜನರಲ್ಲಿ ಸ್ವಚ್ಛತೆಯ ಕುರಿತು ಜನಜಾಗೃತಿ ಮಾಡಿಸಲಾಗುತ್ತಿದೆ ಅವರ ಪರಿಶ್ರಮವೇ ಇಂದಿನ ಕಾರ್ಯಕ್ರಮದ ಯಶಸ್ವಿಗೆ ಕಾರಣವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷೆ ಪ್ರಮೀಳಾ ಡಿ’ಕೋಸ್ತಾ, ಉಪಾಧ್ಯಕ್ಷ ಜನಾರ್ಧನ ನಾಯ್ಕ, ಗ್ರಾ.ಪಂ. ಸದಸ್ಯರು, ತಾಲೂಕ ಪಂಚಾಯತ ಸಿಬ್ಬಂದಿಗಳು. ಆಶಾ, ಅಂಗನವಾಡಿ ಸಂಜೀವಿನಿ ಒಕ್ಕೂಟ, ವಿವಿಧ ಸ್ವ-ಸಹಾಯ ಸಂಘ. ಧರ್ಮಸ್ಥಳ ವಿಪತ್ತು ನಿರ್ವಹಣಾ ಘಟಕದ ಸದಸ್ಯರು, ಪಂಚಾಯತ ಸಿಬ್ಬಂದಿಗಳು ಪಾಲ್ಗೊಂಡು ಸುಮಾರು 500 ಕೆ.ಜಿ ಪ್ಲಾಸ್ಟಿಕ್, ಗಾಜು, ಖಾಲಿ ಬಾಟಲ್, ಬಲೆಯ ಅವಶೇಷಗಳಂತ ತ್ಯಾಜ್ಯವನ್ನು ಸಂಗ್ರಹಿಸಲಾಯಿತು.

Leave a Reply

Your email address will not be published. Required fields are marked *