Spread the love

ಬೆಂಗಳೂರು:ಗೋಕರ್ಣದ ರಾಮತೀರ್ಥ ಗುಹೆಯಲ್ಲಿ ವೀಸಾ ಅವಧಿ ಮುಗಿದು ಅಕ್ರಮವಾಗಿ ವಾಸವಾಗಿದ್ದ ರಷ್ಯಾದ ಮಹಿಳೆ ನೀನಾ ಕುಟಿನಾ ಹಾಗೂ ಅವಳ ಮೂವರು ಮಕ್ಕಳನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಶ್ಯಾಕ್ಕೆ ಕಳುಹಿಸುವಲ್ಲಿ ಗೋಕರ್ಣ ಪೊಲೀಸರು ಯಶಸ್ವಿಯಾಗಿದ್ದಾರೆ.

ಹೌದು…ರಷ್ಯಾ ಮೂಲದ ನಿನಾ ಕುಟಿನಾ ಎಂಬಾಕೆ 2016 ಏಪ್ರಿಲ್ ತಿಂಗಳಿನಲ್ಲಿ ಬ್ಯುಸಿನೆಸ್ ವೀಸಾದ ಮೇರೆಗೆ ರಷ್ಯದಿಂದ ಭಾರತಕ್ಕೆ ಬಂದಿದ್ದರು. 2017 ಏಪ್ರಿಲ್ ನಲ್ಲಿ ವೀಸಾ ಕೊನೆಗೊಂಡ ಬಳಿಕ  2018 ರಲ್ಲಿ ಎಕ್ಸಿಟ್ ಪರ್ಮಿಟ್ ಆದೇಶವನ್ನು ಪಡೆದು ಭಾರತದಿಂದ ನೇಪಾಳ ತೆರಳಿ ಮತ್ತೆ ರಸ್ತೆಮಾರ್ಗದ ಮೂಲಕ ಭಾರತವನ್ನು ಅಕ್ರಮ ಪ್ರವೇಶಿಸಿ ಗೋವಾಕ್ಕೆ ಬಂದಿದ್ದಳು ಎನ್ನಲಾಗಿತ್ತು, ಗೋವಾದಲ್ಲಿ ಓರ್ವ ವಿದೇಶಿ ಪುರುಷನ ಮೇಲೆ ಆಕರ್ಷಣೆಗೆ ಒಳಪಟ್ಟು ಕೆಲಕಾಲ ಗೋವಾದಲ್ಲೇ ಉಳಿದುಕೊಂಡು ನಂತರದಲ್ಲಿ ತಮ್ಮಿಬ್ಬರು ಮಕ್ಕಳೊಂದಿಗೆ ಗೋಕರ್ಣದ ರಾಮತೀರ್ಥದ ಸಮೀಪ ದಟ್ಟಡವಿಯ ಗುಹೆಯಲ್ಲಿ ವಾಸಿಸುತ್ತಿದ್ದ ನಿನಾ ಕುಟೀನಾ ಹಾಗೂ ಇಬ್ಬರು ಮಕ್ಕಳನ್ನು ಗೋಕರ್ಣ ಸಿಪಿಐ ಶ್ರೀಧರ್ ಎಸ್ ಆರ್ ಮಾರ್ಗದರ್ಶನದಲ್ಲಿ ರಕ್ಷಿಸಿ ಮಹಿಳಾ ಸಾಂತ್ವನ ಕೇಂದ್ರಕ್ಕೆ ಸ್ಥಳಾಂತರಿಸಿದ್ದರು. ನಂತರ ವಿದೇಶಿ ಮಹಿಳೆ ಕಳೆದುಕೊಂಡಿದ್ದೇನೆ ಎಂದಿದ್ದ ಪಾಸ್ಪೋರ್ಟ್ ಮತ್ತು ವೀಸಾವನ್ನು ಅರಣ್ಯ ಪ್ರದೇಶದಲ್ಲಿ ಹುಡುಕಿ ಅದು ದೊರೆಯುತ್ತಿದ್ದಂತೆ ಮಹಿಳೆಯ ಹಿನ್ನೆಲೆಪತ್ತೆಯಾಗಿದೆ, ಅಂದಿನ  ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ್ ಮಹಿಳೆಯ ಬಗ್ಗೆ ರಾಜ್ಯ ಸರಕಾರದ ಗಮನಕ್ಕೆ ತಂದಿದ್ದು, ಭಾರತೀಯ ವಿದೇಶಾಂಗ ಇಲಾಖೆ ರಷ್ಯಾ ರಾಯಬಾರ ಕಚೇರಿಗೆ ಮಾಹಿತಿ ನೀಡಿದ್ದರು ಈ ಮೂಲಕ ಮಹಿಳೆ ಹಾಗೂ ಮಕ್ಕಳನ್ನು ರಶ್ಯಾಕ್ಕೆ ಕಳುಹಿಸುವಲ್ಲಿ ಗೋಕರ್ಣ ಪೊಲೀಸರ ಕಾರ್ಯವೈಖರಿ ಎಲ್ಲಡೆ ಶ್ಲಾಘನೆ ವ್ಯಕ್ತವಾಯಿತು.

ಶ್ರೀಧರ್ ಎಸ್ ಆರ್ ಕಾರ್ಯವೈಖರಿಗೆ ಎಲ್ಲೆಡೆ ಮೆಚ್ಚುಗೆ!

ಗೋಕರ್ಣದ ರಾಮತೀರ್ಥದ ಸಮೀಪ ದಟ್ಟ ಅರಣ್ಯ ಪ್ರದೇಶದ ಗುಹೆಯಲ್ಲಿ ವಾಸಿಸುತ್ತಿದ್ದ ನಿನಾ ಕುಟೀನಾ ಹಾಗೂ ಇಬ್ಬರು ಮಕ್ಕಳನ್ನು ಗೋಕರ್ಣ ಸಿಪಿಐ ಶ್ರೀಧರ್ ಎಸ್ ಆರ್ ಮಾರ್ಗದರ್ಶನದಲ್ಲಿ ರಕ್ಷಿಸಿ ಮಹಿಳಾ ಸಾಂತ್ವನ ಕೇಂದ್ರಕ್ಕೆ ಸ್ಥಳಾಂತರಿಸಿದ್ದರು. ನಂತರದಲ್ಲಿ ಸರಕಾರದ ಗಮನಕ್ಕೆ ತರುವಲ್ಲಿ ಶ್ರಮಿಸಿದ್ದರು.ಈ ಮೂಲಕ ಮಹಿಳೆ ಹಾಗೂ ಮಕ್ಕಳನ್ನು ರಷ್ಯಾಕ್ಕೆ ಕಳುಹಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅದರಂತೆಯೇ ಸರಕಾರದ ಆದೇಶದಂತೆ ಗೋಕರ್ಣ ಠಾಣೆಯ ಪಿಎಸ್ಐ ಶಶಿಧರ ಹಾಗೂ ಸಿಬ್ಬಂದಿ ಪರಮೇಶ್ವರ  ಹಾಗೂ ತುಮಕೂರು ನಗರ ಠಾಣೆಯ ಪಿಎಸ್ಐ ಮಂಜುಳ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ರಷ್ಯಾ ದೇಶಕ್ಕೆ ಇಂದು ಮರಳಿಸಿದ್ದಾರೆ.

Leave a Reply

Your email address will not be published. Required fields are marked *