Spread the love

ಅಂಕೋಲಾ: ಬಾವೈಕ್ಯತೆ ಎನ್ನುವುದು ತೋರಿಕೆ ಅಲ್ಲ ಅದು ಬಾವನೆ ಎನ್ನುವುದಕ್ಕೆ ಸಾಕ್ಷಿಯಾಗಿ ಅಪಘಾತದಲ್ಲಿ ಸಾವನ್ನಪ್ಪಿದ ಮುಸ್ಲಿಂ ಯುವಕನಿಗೋಸ್ಕರ ನೂರಾರು ಹಿಂದೂಗಳು ಕಣ್ಣೀರಿಡುತ್ತಿರುವ ಮತ್ತು ಕ್ರೂರ ವಿಧಿಗೆ ಶಾಪಹಾಕುತ್ತಿದ್ದ ಹೃದಯವಿದ್ರಾವಕ ದೃಶ್ಯ ಅಂಕೋಲಾ ತಾಲೂಕಿನ ಬೊಬ್ರುವಾಡ ಗ್ರಾಮದಲ್ಲಿ ಕಂಡುಬಂದಿದೆ.

ಮೃತ ಅಷ್ಪಾಕ್ ಸೈಯ್ಯದ್

ಹೌದು… ಕಳೆದ ಮೂರ್ನಾಲ್ಕು ತಿಂಗಳುಗಳ ಹಿಂದೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಎನ್ನಲಾಗಿದ್ದ ಅಂಕೋಲಾ ಮೂಲದ ಅಷ್ಪಾಕ್ ಸಯ್ಯದ್ (35) ಬುಧವಾರ ಬೆಳಿಗ್ಗೆ ಕಾರವಾರದ ನಾಗಮಂಗಲ ಅಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದು, ಈ ವಿಷಯ ತಿಳಿಯುತ್ತಿದ್ದಂತೆ ಬೊಬ್ರುವಾಡದ ಗ್ರಾಮಸ್ಥರು ಮೃತದೇಹ ನೋಡಲು ತೆರಳಿ ಕಣ್ಣೀರಿಡುತ್ತಿದ್ದಾರೆ.

ಹಿಂದೂಗಳೇ ಹೆಚ್ಚಿರುವ ಬೊಬ್ರುವಾಡದಲ್ಲಿ ಗ್ರಾಮಸ್ಥರೊಂದಿಗೆ ಅನ್ಯೋನ್ಯವಾಗಿದ್ದ ಅಷ್ಪಾಕ್ ಇಲ್ಲಿಯ ಕನ್ನಡ  ಶಾಲೆಯಲ್ಲೇ ವಿದ್ಯಾಭ್ಯಾಸ ಮಾಡಿ, ನಂತರದಲ್ಲಿ ದಾವಣಗೆರೆಯಲ್ಲಿ ಸ್ವಂತ ಟ್ರಾವೆಲ್ಲಿಂಗ್ ಏಜೆನ್ಸಿ ಪ್ರಾರಂಭಿಸಿದ್ದನ್ನು, ದೂರದ ದಾವಣಗೆರೆಯಲ್ಲಿದ್ದರು,ಇಲ್ಲಿಯ ಗೆಳೆಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದನು ಎನ್ನಲಾಗಿದೆ,ಆದರೆ ಆಕಸ್ಮಿಕವಾಗಿ ನಡೆದಿದೆ ಎನ್ನಲಾದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಈತ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಎನ್ನಲಾಗಿದೆ.ಸ್ವಲ್ಪ ಚೇತರಿಕೆ ಕಂಡುಕೊಳ್ಳುತ್ತಿದ್ದಂತೆ ಕಾರವಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರ ಬೆಳಿಗ್ಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

ಅಷ್ಪಾಕ್ ಸಾವು ಬೊಬ್ರುವಾಡ ಗ್ರಾಮದಲ್ಲಿ ಶೋಕದ ವಾತಾವರಣ ಏರ್ಪಟ್ಟಿದ್ದರು,ಈ ಸಾವಿನಲ್ಲಿ ಜಾತಿ-ಧರ್ಮಕ್ಕೂ ಮಿಗಿಲಾದ ಒಂದು ಬಂಧ ಏರ್ಪಟ್ಟಿರುವುದು ನಿಜವಾದ ಬಾವೈಕ್ಯತೆಗೆ ಸಾಕ್ಷಿಯಾಗಿದೆ.

Leave a Reply

Your email address will not be published. Required fields are marked *