ಅಂಕೋಲಾ: ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಪಕ್ಷದ ಎಲ್ಲಾ ಕಾರ್ಯಕ್ರಮಗಳಲ್ಲಿ ಕಾರ್ಯಕರ್ತರು ಸಕ್ರಿಯವಾಗಿ ಬಾಗವಹಿಸಬೇಕೆಂದು ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸಾಯಿ ಗಾಂವ್ಕರ್ ಹೇಳಿದರು.

ಅವರು ಪಟ್ಟಣದ ನಾಡವರ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಾಕಾರಿಣಿ ಸಭೆಯಲ್ಲಿ ಅದ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತನಾಡಿ ಪಧವಿದರ ಕ್ಷೇತ್ರದ ಚುನಾವಣೆಗಳನ್ನು ಎದುರಿಸಲು ಪೂರ್ವ ಸಿದ್ಧತೆಗಳನ್ನು ಮಾಡಬೇಕಾಗಿದೆ, ಉತ್ತರ ಕನ್ನಡ ಜಿಲ್ಲೆಯಲ್ಲಿ 14231 ನೋಂದಾಯಿತ ಮತದಾರರಿದ್ದು, ಸುಶಿಕ್ಷಿತರು ಹೆಚ್ಚಿರುವ ನಮ್ಮ ಜಿಲ್ಲೆಯಲ್ಲಿ ಮತದಾರರ ಸಂಖ್ಯೆ ಕಡಿಮೆಯಿದೆ.ಆದ್ದರಿಂದ ಮುಂಬರುವ 6 ನೇ ತಾರಿಕಿನಿಂದ ಮತದಾರರರನ್ನು ನೋಂದಾವಣಿ ಪ್ರಕ್ರಿಯೆ ಆರಂಭವಾಗಲಿದ್ದು, ಪ್ರತಿಯೊಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಈ ಕುರಿತು ಗಂಭೀರವಾಗಿ ಪರಿಗಣಿಸಿ ಮತದಾರರ ನೋಂದಣಿ ಕಾರ್ಯದಲ್ಲಿ ತೊಡಗಬೇಕು ಎಂದರು ಹಾಗೆಯೇ ಜನಸಾಮಾನ್ಯರೊಂದಿಗೆ,ಅವರ ಕಷ್ಟ ಕಾರ್ಪಣ್ಯಗಳಿಗೆ ಯಾರು ಸ್ಪಂದಿಸುತ್ತಾರೋ ಅಂತವರಿಗೆ ಟಿಕೆಟ್ ನೀಡಲಾಗುವುದು, ಈ ಚುನಾವಣೆಯನ್ನು ಕೆಪಿಸಿಸಿ ಗಂಭೀರವಾಗಿ ಪರಿಗಣಿಸಿದೆ ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಉಸ್ತುವಾರಿಗಳನ್ನು ನೇಮಿಸಿದೆ. ಕಾಂಗ್ರೆಸ್ ಪಕ್ಷದ ಬಲವರ್ಧನೆಗಾಗಿ ಸಕ್ರಿಯವಾಗಿ ಪಕ್ಷದ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳಿ ಎಂದರು.

ಮಾಜಿ ಎಂ ಎಲ್ ಸಿ ಮೋಹನ್ ನಿಂಬೇಕಾಯಿ ಮಾತನಾಡಿ 4 ಬಾರಿ ಎಚ್ ಕೆ ಪಾಟಿಲ್ ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದರು,ಸರಕಾರ ಮತದಾರರ ನೋಂದಾಣಿಗೆ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕಾರ್ಯಕರ್ತರು ಮತದಾರರ ನೋಂದಣಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು.ಹಾಗೆಯೇ ಮತದಾರರಿಗೆ ಮತದಾನದ ವಿಧಾನವನ್ನು ವಿವರಿಸಬೇಕು ಎಂದರು.

ಪದವಿಧರ ಕ್ಷೇತ್ರದ ಉಸ್ತುವಾರಿಗಳು, ಮೆಸ್ಕಾಂ ಅಧ್ಯಕ್ಷ ಹಾಗೂ ಮಾಜಿ ಶಾಸಕ ಹರೀಶ್ ಕುಮಾರ್ ಮಾತನಾಡಿ ಚುನಾವಣೆಗೆ ಬಹಳಷ್ಟು ಸಮಯವಿದ್ದರು,ಮತದಾರರ ನೋಂದಣಿಗೆ ಕಾಲಾವಕಾಶ ಕಡಿಮೆಯಿದೆ.ಈ ಚುನಾವಣೆ ಸಾರ್ವಜನಿಕ ಚುನಾವಣೆಯ ತರಹ ಅಲ್ಲ, ಪಧವಿದರ ಕ್ಷೇತ್ರದ ಚುನಾವಣೆ ಪಧವಿದರಿಗೆ ಮಾತ್ರ, ಪಧವಿದರರು ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಮತದಾರ ಪಟ್ಟಿಯಲ್ಲಿ ನೋಂದಾವಣೆ ಮಾಡಿಕೊಳ್ಳಬೇಕು ಎಂದರು. ಪ್ರತಿಯೊಬ್ಬ ಮತದಾರರರೊಂದಿಗೆ ನಿರಂತರ ಸಂಪರ್ಕದಲ್ಲಿ ಮಾತ್ರ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯ ಎಂದರು.ದೇಶದ ಮೂಲೆ,ಮೂಲೆಗಳಲ್ಲಿ ಸುತ್ತಾಡಿ ಸಕ್ರಿಯವಾಗಿ ಜನರ ಮದ್ಯೆ ಇದ್ದು ರಾಹುಲ್ ಗಾಂಧಿಯವರ ಜನಪ್ರಿಯತೆಯನ್ನು ಮನಗಂಡ ಬಿಜೆಪಿ ವಾಮಮಾರ್ಗದಲ್ಲಿ ಮತಕಳ್ಳತನ ಆರಂಭಿಸಿ ಅಧಿಕಾರದ ಗದ್ದುಗೆ ಏರಿದೆ ಎಂದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಎಂ ವಿ ಗಫೂರ್, ಮಾಜಿ ಶಾಸಕ ವಿ ಎಸ್ ಪಾಟೀಲ್, ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶರ್ಲೆಟ್ ಪಿಂಟೋ,ಕನಿಷ್ಠ ವೇತನ ಸಲಹಾ ಮಂಡಳಿ ನಿಗಮದ ಅಧ್ಯಕ್ಷ ಟಿ ಎಂ ಶಾಹಿದ್ ಕೆಪಿಸಿಸಿ ಕಾರ್ಯದರ್ಶಿ ಸುಜಾತಾ ಗಾಂವ್ಕರ್, ಕೆಪಿಸಿಸಿ ಸದಸ್ಯ ರಮಾನಂದ ನಾಯಕ,ಕೆಪಿಸಿಸಿ ಜಿಲ್ಲಾ ಉಪಾಧ್ಯಕ್ಷರಾದ ರಾಮಾ ಮೊಗೇರ,ಆರ್ ಎಚ್ ನಾಯ್ಕ,ಶಂಭು ಶೆಟ್ಟಿ, ಶಿಕ್ಷಕರ ಪಧವಿದರ ಕ್ಷೇತ್ರದ ಬ್ಲಾಕ್ ಅಧ್ಯಕ್ಷ ನಾರಾಯಣ ನಾಯಕ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾರದಾ ರಾಠೋಡ್ ಹಾಗೂ ಜಿಲ್ಲೆಯ ವಿವಿಧ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಉಪಸ್ಥಿತರಿದ್ದರು.
ಕಾಂಗ್ರೆಸ್ ಮುಖಂಡ ವಿನೋದ ನಾಯಕ ಪಧವಿದರರ ಚುನಾವಣೆಯ ಮಾಹಿತಿಯನ್ನು ನೀಡಿದರು.ಅಂಕೋಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಶ್ವರ ನಾಯಕ ಸರ್ವರನ್ನು ಸ್ವಾಗತಿಸಿದರು,ಮಾಜಿ ಜಿಪಂ ಸದಸ್ಯ ಬಸವರಾಜ ದೊಡ್ಮನಿ ಕಾರ್ಯಕ್ರಮವನ್ನು ನಿರೂಪಿಸಿದರು. ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಅಧ್ಯಕ್ಷ ಪ್ರಸನ್ನ ಶೆಟ್ಟಿ ಸಭೆಯ ಸಂಪೂರ್ಣ ನಿರ್ವಹಣೆ ಮಾಡಿ ಸರ್ವರನ್ನು ವಂದಿಸಿದರು.


