ಅಂಕೋಲಾ: ಗ್ರಾಮೀಣ ಪ್ರದೇಶದಲ್ಲೇ ಹೆಚ್ಚು ಕಲಾವಿದರು ಎಲೆ ಮರೆಯ ಕಾಯಿಯಂತಿದ್ದು, ಇವರಿಗೆ ಪ್ರೋತ್ಸಾಹ ಸಿಕ್ಕರೆ ಮಾತ್ರ ಉನ್ನತ ಸಾಧನೆ ಸಾಧ್ಯವಿದೆ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಹಾಗೂ ಸ್ಪಂದನಾ ಪೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಹೇಳಿದರು.

ಅವರು ಶ್ರೀ ಮಹಾಗಣಪತಿ ಸಾಂಸ್ಕೃತಿಕ ಕಲಾ ಸಂಘದ ಆಶ್ರಯದಲ್ಲಿ ಶನಿವಾರ ತೆಂಕಣಕೇರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ತಾಲೂಕು ಮಟ್ಟದ ಗ್ರೂಪ್ ಡ್ಯಾನ್ಸ್ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿ ಇಂತಹ ಕಾರ್ಯಕ್ರಮಗಳು ಹೆಚ್ಚಿನದಾಗಿ ಹಮ್ಮಿಕೊಂಡರೆ ಮಾತ್ರ ನನ್ನ ಪ್ರೋತ್ಸಾಹ ನಿರಂತರ ಇರಲಿದೆ.ಇದೇ ಸಂದರ್ಭದಲ್ಲಿ ಅವರು ಆಯ್ದ ಐದು ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿದರು.
ಪಾರಿತೋಷಕ ಉದ್ಘಾಟಿಸಿ ಮಾತನಾಡಿದ ಉದ್ಯಮಿ ಪ್ರತಾಪ ಎಲ್ ನಾಯ್ಕ,ಇಂತಹ ಕಾರ್ಯಕ್ರಮಗಳು ಕಲೆ, ಸಂಸ್ಕೃತಿಯನ್ನು ನಿರಂತರ ಜೀವಂತ ಇಡಲಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಜಂಟಿ ನಿರ್ದೇಶಕ ದೇವಾನಂದ ಗಾಂವಕರ್ ಮಾತನಾಡಿ, ಕಲೆ ಮನುಷ್ಯನ ಬೆಳವಣಿಗೆಗೆ ಪೂರಕ.ಪ್ರತಿಯೊಬ್ಬರಲ್ಲೂ ಒಂದಿಲ್ಲೊಂದು ಕಲೆ ಇದ್ದು ಇದನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ಒಕ್ಕೂಟದ ರಾಘು ನಾಯ್ಕ, ಪ್ರತಿಭಾವಂತ ವಿದ್ಯಾರ್ಥಿನಿ ಸಿಂಚನಾ ಎಲ್. ನಾಯ್ಕ, ಹೆಸ್ಕಾಂನ ಲೈನಮೆನ್ ರಾಜು ಗಾಂವಕರ್, ಡ್ಯಾನ್ಸ್ ಮಾಸ್ಟರ್ ಹರೀಶ ಖಾರ್ವಿ ಉಡುಪಿ ಇವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಉದ್ಯಮಿ ವೈಭವ ನಾಯ್ಕ ಮಂಜಗುಣಿ, ಮುಖ್ಯಾಧ್ಯಾಪಕ ಅರುಣ ಶೆಡಗೇರಿ, ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ರಾಘು ನಾಯ್ಕ, ಪತ್ರಕರ್ತ ವಾಸುದೇವ ಗುನಗಾ, ಗ್ರಾ.ಪಂ ಸದಸ್ಯ ಜಯಂತ ನಾಯ್ಕ, ಸಂಘದ ಗೌರವಾಧ್ಯಕ್ಷ ವಿಠ್ಠಲದಾಸ ಕಾಮತ್ ಮಾತನಾಡಿದರು.

ಸೌಮ್ಯ ನಾಯ್ಕ ಪ್ರಾರ್ಥಿಸಿದರು. ಸಂಘದ ಅಧ್ಯಕ್ಷ ಶ್ರೀಕಾಂತ ಎನ್ ನಾಯ್ಕ ಸ್ವಾಗತಿಸಿದರು. ಪ್ರ. ಕಾರ್ಯದರ್ಶಿ ಪ್ರವೀಣ ಎನ್ .ನಾಯಕ ಪ್ರಾಸ್ತಾವಿಕ ಮಾತನಾಡಿದರು. ಸಹ ಕಾರ್ಯದರ್ಶಿ ಗಜಾನನ ಆಗೇರ್, ಸದಸ್ಯರಾದ ವಿನು ಎಲ್ ನಾಯ್ಕ, ಸಂತೋಷ ಎನ್. ನಾಯ್ಕ ಪರಿಚಯಿಸಿದರು.ಸದಸ್ಯ ಗೋವಿಂದರಾಯ ಕಾಮತ್ ವಂದಿಸಿದರು.ಪರ್ತಕರ್ತ ಅರುಣ ಶೆಟ್ಟಿ ನಿರ್ವಹಿಸಿದರು.
ತಾಲೂಕು ಮಟ್ಟದ ಗ್ರೂಪ್ ಡ್ಯಾನ್ಸ್ ಸ್ಪರ್ಧೆಯಲ್ಲಿ ಅಂಕೋಲೆಯ ಪಾಯಿಂಟ್ ಔಟ್ ಸೀನಿಯರ್ ತಂಡ ಪ್ರಥಮ, ಮಹಾದೇವ ಕೊಗ್ರೆ ತಂಡ ದ್ವಿತೀಯ, ಬಿಳಿಗಿರಿ ಬೊಮ್ಮಯ್ಯ ಜಮಗೋಡ ತೃತೀಯ ಸ್ಥಾನ ಪಡೆದವು.
ಪಾಯಿಂಟ್ ಔಟ್ ಜ್ಯೂನಿಯರ್ ಮತ್ತು ಡಿ.ಎಸ್.ಪಿ ತಂಡ ವಂದಿಗೆ ಸಮಾಧಾನಕರ ಬಹುಮಾನ ಪಡೆದವು.


