ಅಂಕೋಲಾ: 58 ನೇ ಹುಟ್ಟುಹಬ್ಬದ ಪ್ರಯುಕ್ತ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ತಾಲೂಕಿನ ಹಲವು ದೇವಸ್ಥಾನಗಳಲ್ಲಿ ಹಮ್ಮಿಕೊಂಡಿದ್ದ ಪೂಜೆಯಲ್ಲಿ ಶಾಸಕ ಸತೀಶ್ ಸೈಲ್ ಪತ್ನಿಯೊಂದಿಗೆ ಭಾಗವಹಿಸಿ ದೇವರ ಆಶೀರ್ವಾದ ಪಡೆದರು.

ಹೌದು… 58 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಶಾಸಕ ಸತೀಶ್ ಸೈಲ್ ಹುಟ್ಟುಹಬ್ಬವನ್ನು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ತಾಲೂಕಿನ ಪ್ರಮುಖ ದೇಗುಲಗಳಾದ ಭೂಮ್ತಾಯಿ ಶಾಂತಾದುರ್ಗೆ,ವೆಂಕಟರಮಣ ದೇಗುಲ,ಮಹಾಮಾಯಾ,ಆರ್ಯಾದುರ್ಗಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನೆಚ್ಚಿನ ನಾಯಕನ ಕುರಿತು ಪ್ರಾರ್ಥನೆ ಸಲ್ಲಿಸಿದರು.ಈ ಪೂಜಾ ಕೈಂಕರ್ಯಗಳಲ್ಲಿ ಶಾಸಕ ಸತೀಶ್ ಸೈಲ್ ದಂಪತಿಗಳು ಭಾಗವಹಿಸಿ ದೇವರ ಆಶೀರ್ವಾದ ಪಡೆದರು.

ಭಜನೆಯಲ್ಲಿ ದ್ವನಿಗೂಡಿಸಿದ ಸೈಲ್!
ಅಲಗೇರಿಯ ಶ್ರೀ ಗಜಾನನ ಭಜನಾ ಮಂಡಳಿಯ ವತಿಯಿಂದ ದೇಗುಲದಲ್ಲಿ ಭಜನಾಮೃತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು,ಈ ಭಜನೆ ತಂಡದೊಂದಿಗೆ ದ್ವನಿಗೂಡಿಸಿದ ಸತೀಶ ಸೈಲ್ ಭಜನೆ ಗೀತೆಯನ್ನು ಹಾಡಿ ದೇವರ ಮೇಲಿನ ಭಕ್ತಿಯನ್ನು ತೋರ್ಪಡಿಸಿದರು.

ಶಾಂತಾದುರ್ಗೆ ದೇವಸ್ಥಾನದಲ್ಲಿ ಸೈಲ್ ದಂಪತಿಗಳಿಗೆ ಸನ್ಮಾನ!
ಹುಟ್ಟು ಹಬ್ಬದ ನಿಮಿತ್ತ ಗ್ರಾಮದೇವಿ ಶಾಂತಾದುರ್ಗೆ ದೇಗುಲಕ್ಕೆ ತೆರಳಿದ ಸೈಲ್ ದಂಪತಿಗಳಿಗೆ ದೇವಸ್ಥಾನದ ಅಭಿವೃದ್ಧಿ ಸಮಿತಿಯಿಂದ ಸನ್ಮಾನಿಸಿ ಗೌರವಿಸಲಾಯಿತು ಈ ಸಂದರ್ಭದಲ್ಲಿ ಸದಸ್ಯರಾದ ಸುಭಾಷ್ ನಾರ್ವೆಕರ್ ಹಾಗೂ ಬಾಸ್ಕರ್ ನಾರ್ವೆಕರ್ ಹಾಗೂ ಅರ್ಚಕ ಗಣಪತಿ ಭಟ್ ಉಪಸ್ಥಿತರಿದ್ದರು.

ಪುಟಾಣಿ ಮಕ್ಕಳೊಂದಿಗೆ ಕೇಕ್ ಕತ್ತರಿಸಿದ ಶಾಸಕ!
ದೇವಸ್ಥಾನದ ಭೇಟಿಯ ವೇಳೆ ಅಲ್ಲಿಯೇ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದ ಪುಟಾಣಿ ಮಕ್ಕಳು ಹಾಗೂ ಅವರ ಪಾಲಕರು ಶಾಸಕರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು ನಂತರದಲ್ಲಿ ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಹುಟ್ಟುಹಬ್ಬದ ಸಂಭ್ರಮವನ್ನು ಹಂಚಿಕೊಂಡರು.

ಶಾಸಕರ ಹುಟ್ಟುಹಬ್ಬಕ್ಕೆ ಶುಭಕೋರಿದ ತಹಶೀಲ್ದಾರ್ & ಪಿಎಸೈ!
58 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಶಾಸಕ ಸತೀಶ್ ಸೈಲ್ ಅವರ ಹುಟ್ಟು ಹಬ್ಬಕ್ಕೆ ತಹಶೀಲ್ದಾರ್ ಚಿಕ್ಕಪ್ಪ ನಾಯಕ ಹಾಗೂ ಪಿಎಸೈ ಗುರುನಾಥ್ ಹಾದಿಮನಿ ಕೇಕ್ ಕತ್ತರಿಸುವ ಮೂಲಕ ಶುಭಕೋರಿದರು.

ಈ ಸಂದರ್ಭದಲ್ಲಿ ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಜಾತಾ ಗಾಂವ್ಕರ್,ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಪಾಂಡುರಂಗ ಗೌಡ,ಜಿಪಂ ಮಾಜಿ ಸದಸ್ಯರಾದ ವಿನೋದ ನಾಯಕ,ಜಿ ಎಂ ಶೆಟ್ಟಿ, ತಾಪಂ ಮಾಜಿ ಸದಸ್ಯೆ ಮಂಜುಳಾ ವೆರ್ಣೇಕರ್,ಅಲಗೇರಿ ಗ್ರಾಪಂ ಅಧ್ಯಕ್ಷ ಸಂತೋಷ ನಾಯ್ಕ,ಪುರಸಭೆ ಸದಸ್ಯರಾದ ಜಯಪ್ರಕಾಶ್ ನಾಯ್ಕ, ರೇಖಾ ಗಾಂವ್ಕರ್ ಪ್ರಮುಖರಾದ ಉದ್ಯಮಿ ಸುರೇಶ ನಾಯಕ ಅಲಗೇರಿ,ರಾಮಚಂದ್ರ ನಾಯ್ಕ ಅಗಸೂರು, ಪುರುಷೋತ್ತಮ ನಾಯ್ಕ,ಗೋಪು ಅಡ್ಲೂರು,ನ್ಯಾಯವಾದಿ ಭೈರವ ನಾಯ್ಕ, ರಾಜೇಶ ನಾಯ್ಕ,ದೇವಿದಾಸ ನಾಯ್ಕ, ಮಹಾಬಲೇಶ್ವರ್ ನಾಯ್ಕ ಮಂಜುಗುಣಿ, ಮಂಜುನಾಥ್ ನಾಯ್ಕ ಬೆಳಂಬಾರ್,ಸುರೇಶ್ ನಾಯ್ಕ ಅಸ್ಲಗದ್ದೆ,ಮುಂತಾದವರು ಉಪಸ್ಥಿತರಿದ್ದರು.


