Spread the love

ಶಿರಸಿ: ಶೈಕ್ಷಣಿಕ ಪ್ರವಾಸಕ್ಕೆಂದು ಬಂದಿದ್ದ ಖಾಸಗಿ ಬಸ್ಸೊಂದು ಪಲ್ಟಿಯಾಗಿ 19 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾದ ಘಟನೆ ಶಿರಸಿ ತಾಲೂಕಿನ ನುಜ್ಜಗಿ ಕ್ರಾಸ್ ಬಳಿ ನಡೆದಿದೆ.


ಹೌದು…ದಾವಣಗೆರೆಯ ಜೈನ್ ಪಿಯು ಕಾಲೇಜಿನ  ಶಿಕ್ಷಕರು ಸೇರಿ 52 ವಿದ್ಯಾರ್ಥಿಗಳು ಡಿಸೆಂಬರ್ 28 ರಂದು ದಾಂಡೇಲಿ ಪ್ರವಾಸಕ್ಕೆಂದು KA 19 AE 6819 ನಂಬರಿನ ಖಾಸಗಿ ಬಸ್ಸಿನಲ್ಲಿ ಡಿಸೆಂಬರ್ 28 ರಂದು ಆಗಮಿಸಿದ್ದರು. ದಾಂಡೇಲಿ ಪ್ರವಾಸ ಮುಗಿಸಿ ಶಿರಸಿ ಮಾರ್ಗವಾಗಿ ಯಾಣಕ್ಕೆ ಪ್ರವಾಸಕ್ಕೆಂದು ತೆರಳುತ್ತಿದ್ದ ಸಂದರ್ಭದಲ್ಲಿ ನುಜ್ಜಗಿ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದ್ದು 19 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.

ಗಾಯಾಳುಗಳನ್ನ ಅಂಕೋಲ ಹಾಗೂ ಶಿರಸಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರ ಸ್ವರೂಪದ ಗಾಯಗೊಂಡ ವಿದ್ಯಾರ್ಥಿಗಳನ್ನು ಕಾರವಾರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಸಂಬಂಧ ಶಿರಸಿ ಗ್ರಾಮಿಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದ ಸುದ್ದಿ ತಿಳಿದ ತಕ್ಷಣ ತಾಲೂಕಾಸ್ಪತ್ರೆಗೆ ಆಗಮಿಸಿದ ಅಂಕೋಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಶ್ವರ ನಾಯಕ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು.

ಅಂಕೋಲಾ ತಾಲೂಕಾಸ್ಪತ್ರೆಯಲ್ಲಿ ಕೇರ್ ಲೆಸ್ ಟ್ರೀಟ್ಮೆಂಟ್!

ಅಪಘಾತದಿಂದ ಗಾಯಗೊಂಡ ವಿದ್ಯಾರ್ಥಿಗಳನ್ನು ಅಂಕೋಲಾ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ನೋವಿನಿಂದ ಬಳಲುತ್ತಿದ್ದ ವಿದ್ಯಾರ್ಥಿಗಳಿಗೆ ಸರಿಯಾದ  ಸ್ಪಂದನೆ ದೊರೆತಿಲ್ಲ, ಸರಿಯಾದ ಪ್ರಥಮ ಚಿಕಿತ್ಸೆ ನೀಡಿಲ್ಲ, ಕೆಲವರಿಗೆ ಪ್ರಥಮ ಚಿಕಿತ್ಸೆ ನೀಡಿ ಕೈಬಿಡಲಾಗಿದ್ದು ಅವರ ಊಟೋಪಚಾರದ ಕಾಳಜಿ ವಹಿಸಿಲ್ಲ, ಎಲ್ಲದಕ್ಕೂ ಕಾರವಾರದ ಕಡೆ ಮುಖ ಮಾಡಿಸುವ ಇಲ್ಲಿಯ ವೈದ್ಯರು,ಅಲ್ಪ-ಸ್ವಲ್ಪ ಪ್ರಮಾಣದ ಗಾಯಗಳಿಗೂ ಕಾರವಾರ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡುವ ಈ ಆಸ್ಪತ್ರೆ ಇದ್ದರೆಷ್ಟು, ಬಿಟ್ಟರೆಷ್ಟು ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

Leave a Reply

Your email address will not be published. Required fields are marked *