ಕಾರವಾರ: ಅಂಕೋಲಾ ಅಬಕಾರಿ ಕಚೇರಿಯಲ್ಲಿ ಉಪ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇಎಸೈ ಓರ್ವರು ಕಾರವಾರದಲ್ಲಿರುವ ಸ್ವಗೃಹದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಹೌದು…ಅಂಕೋಲಾ ತಾಲ್ಲೂಕಿನ ಅಬಕಾರಿ ಇಎಸೈಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪುರುಷೋತ್ತಮ ಕೆ ಹಳದನಕರ್ (58). (PK HALDANKAR) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಸೋಮವಾರ ಅಂಕೋಲಾ ತಾಲೂಕಿನಲ್ಲಿರುವ ಅಬಕಾರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಿ ಸಾಯಂಕಾಲ 5 ಗಂಟೆಗೆ ಕಾರವಾರದ ದೇವಳಿವಾಡದಲ್ಲಿರುವ ಮನೆಗೆ ತೆರಳಿದ್ದರು ಎನ್ನಲಾಗಿದೆ. ಎಂದಿನಂತೆ ಬೆಳಿಗ್ಗೆ ಸ್ನಾನಗೃಹಕ್ಕೆ ತೆರಳಿದ್ದಾಗ ಅಲ್ಲಿಯೇ ಕುಸಿದು ಬಿದ್ದಿದ್ದು, ಬಳಿಕ ಕಾರವಾರದ ಜಿಲ್ಲಾಸ್ಪತ್ರೆಗೆ ಕರೆತರಲಾಗಿದೆ. ಆ ಬಳಿಕ ಹೃದಯಾಘಾತವಾಗಿ ಸಾವನ್ನಪ್ಪಿರುವ ಬಗ್ಗೆ ವೈದ್ಯರು ದೃಢಪಡಿಸಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತಕ್ಷಣ ಧಾವಿಸಿದ ಅಬಕಾರಿ ಉಪ ಆಯುಕ್ತ ಅಮನ್ ಉಲ್ಲಾ ಖಾನ್ ಹಾಗೂ ಅಂಕೋಲಾ ಅಬಕಾರಿ ನಿರೀಕ್ಷಕರಾದ ಚಾಲುಕ್ಯ ಶಹಾಪುರ ಮೃತರಿಗೆ ಸರಕಾರದಿಂದ ಸಿಗುವ ಸಕಲ ಗೌರವಗಳನ್ನು ನೀಡಿ,ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದರು.


Leave a Reply