ಕಾರವಾರ: ಗಾಳ ಹಾಕಿ ಮೀನು ಹಿಡಿಯುವ ಪದ್ದತಿ ಇತ್ತೀಚೆಗೆ ಮರೆಯಾಗತೊಡಗಿದೆ. ಎಲ್ಲೊ ಒಂದಿಷ್ಟು ಮಂದಿ ಹವ್ಯಾಸಕ್ಕಾಗಿ ಆಗಾಗ ಕೆರೆ, ನದಿದಂಡೆಗಳಲ್ಲಿ ಕುಳಿತು ಗಾಳ ಹಾಕಿ ಒಂದೋ ಎರಡೊ ಮೀನನ್ನು ಹಿಡಿಯುತ್ತಿರುತ್ತಾರೆ. ಆದರೆ ಈ ಪದ್ದತಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯುವ ಮೀನುಗಾರರ ಸಂಘರ್ಷ ಸಮಿತಿ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆ ಹಮ್ಮಿಕೊಂಡಿದ್ದು ಶ್ಲಾಘನೀಯ ಎಂದು ಮಾಜಿ ಶಾಸಕಿ ,ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಹೇಳಿದರು.

ಅವರು ತಾಲೂಕಿನ ಬೈತಖೋಲ ಬ್ರೇಕ್ ವಾಟರ್ ಬಳಿ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆಯನ್ನ ಆಯೋಜಿಸಲಾಗಿತ್ತು. ಇತ್ತೀಚಿಗೆ ತೆರೆಮರೆಗೆ ಸರಿಯುತ್ತಿರುವ ಗಾಳ ಮೀನುಗಾರಿಕೆ ಮತ್ತೆ ಪ್ರೋತ್ಸಾಹಿಸಬೇಕು ಎನ್ನುವ ನಿಟ್ಟಿನಲ್ಲಿ ಮೀನುಗಾರರ ಸಂಘರ್ಷ ಸಮಿತಿ ಆಯೋಜಿಸಿದ್ದ ಈ ವಿನೂತನ ಕಾರ್ಯಕ್ರಮಕ್ಕೆ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ ಪ್ರತಿವರ್ಷ ಈ ಕಾರ್ಯಕ್ರಮವನ್ನ ಆಯೋಜಿಸುವ ಮೂಲಕ ಮುಂದಿನ ದಿನಗಳಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧಾಳುಗಳು ಸಹ ಇದರಲ್ಲಿ ಪಾಲ್ಗೊಳ್ಳುವಂತಾಗಲಿ ಎಂದು ಶುಭಕೋರಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ರವಿರಾಜ್ ಅಂಕೋಲೆಕರ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ, ಪರ್ಬತ್ ನಾಯ್ಕ, ರೇಖಾ ನಾಯ್ಕ, ನಗರಸಭೆ ಸದಸ್ಯರಾದ ರಾಜೇಶ ಮಾಜಾಳಿಕರ, ಸ್ನೇಹಲ್ ಹರಿಕಂತ್ರ, ದೇವಿದಾಸ ನಾಯಕ, ಪ್ರಮೋದ ಬಾನಾವಳಿಕರ, ಮಂಜುನಾಥ ಟಾಕೇಕರ, ಮೀನುಗಾರಿಕೆ ಇಲಾಖೆ ಹಾಗೂ ಬಂದರು ಇಲಾಖೆ ಅಧಿಕಾರಿಗಳು, ಸಂಘಟಕರಾದ ವಿನಾಯಕ ಹರಿಕಂತ್ರ ಮುಂತಾದವರು ಉಪಸ್ಥಿತರಿದ್ದರು. ಈ ಸ್ಪರ್ಧೆಯಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 50ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು.


Leave a Reply