ಅಂಕೋಲಾ: ತಾಲೂಕಿನಲ್ಲಿ ಬಹುದಿನಗಳ ಬೇಡಿಕೆಯಾದ ರಾಜಧಾನಿ ಬೆಂಗಳೂರಿಗೆ ತೆರಳಲು ಮಹಿಳೆಯರು ಶಕ್ತಿ ಯೋಜನೆಯ ಲಾಭವನ್ನು ಪಡೆಯಲಿ ಎನ್ನುವ ಸದುದ್ದೇಶದಿಂದ ಬೆಂಗಳೂರಿಗೆ ನೂತನ ಬಸ್ ಬಿಡಲಾಗಿದೆ ಎಂದು ಶಾಸಕ ಸತೀಶ್ ಸೈಲ್ ಹೇಳಿದರು.

ಅವರು ತಾಲೂಕಿನ ಬಸ್ ನಿಲ್ದಾಣದಲ್ಲಿ ಅಂಕೋಲದಿಂದ ಬೆಂಗಳೂರಿಗೆ ತೆರಳುವ ನೂತನ ಬಸ್ ಗೆ ಚಾಲನೆ ನೀಡಿ ಮಾತನಾಡಿ ಮುಂದಿನ ದಿನಗಳಲ್ಲಿ ಒಂದು ಪಲ್ಲಕ್ಕಿ ಹಾಗೂ ಒಂದು ರಾಜಹಂಸ ಬಸನ್ನು ಬಿಡಲು ರಾಜ್ಯಸರ್ಕಾರಕ್ಕೆ ಮನವಿ ಮಾಡಿದ್ದೇನೆ ಅತೀ ಶೀಘ್ರದಲ್ಲಿ ಕಾರ್ಯರೂಪಕ್ಕೆ ಬರಲಿದೆ.ಕಳೆದ ಐದು ವರ್ಷಗಳ ಬಿಜೆಪಿ ಸರಕಾರದ ಅವಧಿಯಲ್ಲಿ ತಾಲೂಕಿಗೆ ಒಂದು ನೂತನ ಬಸ್ ಕೂಡ ಬಿಡಲಾಗಲಿಲ್ಲ,ಆದರೆ ಸಿದ್ದರಾಮಯ್ಯ ನೇತೃತ್ವದ ನಮ್ಮ ಕಾಂಗ್ರೆಸ್ ಸರಕಾರ ನಮ್ಮ ತಾಲೂಕಿಗೆ ಹತ್ತು ನೂತನ ಬಸ್ ನೀಡಿದೆ ಎಂದರು.

ಈ ಸಂದರ್ಭದಲ್ಲಿ ಕೆ ಎಸ್ ಆರ್ ಟಿ ಸಿ ವಿಬಾಗ ವ್ಯವಸ್ಥಾಪಕಿ ಚೈತನ್ಯಾ ಅಗಳಗಟ್ಟಿ ಮಾತನಾಡಿ ಶಾಸಕ ಸತೀಶ್ ಸೈಲ್ ಪ್ರಯತ್ನದಿಂದ ಒಟ್ಟಾರೆ 10 ನೂತನ ಬಸ್ ಬಿಡಲಾಗಿದ್ದು,ಬೆಂಗಳೂರಿಗೂ ಸಹ ಒಂದು ಬಸ್ ಇಂದಿನಿಂದ ಪ್ರಾರಂಭವಾಗಿದೆ. ಅಂಕೋಲದಿಂದ ಪ್ರತಿನಿತ್ಯ 4 ಗಂಟೆಯಿಂದ ಬಸ್ ಹೊರಡಲಿದ್ದು ನಂತರ ಅದು ಗೋಕರ್ಣಕ್ಕೆ ತಲುಪಿ 5.15 ಕ್ಕೆ ಬಿಡಲಾಗುವುದು. ಶಿರಸಿ,ಹಾವೇರಿ,ದಾವಣಗೆರೆ ಮಾರ್ಗವಾಗಿ ಬೆಂಗಳೂರಿಗೆ ತೆರಳಿದೆ ಸಾರ್ವಜನಿಕರು ಈ ಬಸ್ಸುಗಳ ಲಾಭವನ್ನು ಪಡೆಯಬೇಕು ಎಂದರು.
ನೂತನ ಬಸ್ಸನ್ನು ಚಾಲನೆಗೊಳಿಸಿದ ಶಾಸಕ ಸತೀಶ್ ಸೈಲ್ ಪಕ್ಷದ ಪ್ರಮುಖರು ಹಾಗೂ ಅಧಿಕಾರಿಗಳ ಜೊತೆ ಬಸ್ಸಲ್ಲಿ ಕುಳಿತು ನಗರದ ಪ್ರಮುಖ ರಸ್ತೆಯಲ್ಲಿ ಸಂಚರಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ ಎಚ್ ಗೌಡ,ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುಜಾತಾ ಗಾಂವ್ಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾಂಡುರಂಗ ಗೌಡ, ಮಾಜಿ ಜಿಪಂ ಸದಸ್ಯ ವಿನೋದ ನಾಯಕ ಮುಂತಾದವರು ಉಪಸ್ಥಿತರಿದ್ದರು.


Leave a Reply