ಹಳಿಯಾಳ: ಮೀಟರ್ ಬಡ್ಡಿ ದಂಧೆ ಸಂಪೂರ್ಣ ನಿರ್ಣಾಮಮಾಡಲು ಉತ್ತರ ಕನ್ನಡ ಜಿಲ್ಲೆಯ ಖಡಕ್ ಎಸ್ಪಿ ಎಂ ನಾರಾಯಣ ಹಲವಾರು ಆಯಾಮಗಳ ಮೂಲಕ ದಂಧೇಕೋರರಿಗೆ ಬಿಸಿ ಮುಟ್ಟಿಸುತ್ತಿದ್ದು, ಆದರೂ ಹಳಿಯಾಳದಲ್ಲಿ ಬಡ್ಡಿ ಸಾಲದವರ ಕಿರುಕುಳಕ್ಕೆ ಕುಟುಂಬವೊಂದು ನಲುಗಿಹೋಗಿದೆ ಎನ್ನಲಾಗಿದೆ.

ಹೌದು…ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಲಿಯಾಕತ್ ಎನ್ನುವ ಕೂಲಿ ಕಾರ್ಮಿಕ 2023 ರಲ್ಲಿ ಮಗಳ ಮದುವೆಗೆ ರೇಣುಕಾ ಎನ್ನುವ ಮಹಿಳೆಯಿಂದ 3 ಲಕ್ಷ ಹಣ ಸಾಲ ಪಡೆದುಕೊಂಡಿದ್ದರು.

ಪ್ರತಿ ತಿಂಗಳು 15% ಬಡ್ಡಿಯೊಂದಿಗೆ 45 ಸಾವಿರ ತುಂಬುತ್ತಿದ್ದ ಲಿಯಾಕತ್,ಒಟ್ಟಾರೆ 6.50 ಲಕ್ಷ ಹಣ ತುಂಬಿದ್ದರು ಎನ್ನಲಾಗಿದೆ.ಆದರೂ ಬಿಡದ ದಂಧೆ ಕೋರರು ನಿರಂತರ ಕಿರುಕುಳ ನೀಡುತ್ತಿದ್ದರಿಂದ ಅವರ ಕಾಟಕ್ಕೆ ಹಾಸಿಗೆ ಹಿಡಿದ ಲಿಯಾಕತ್ ಎರಡು ಕಾಲುಗಳ ಸ್ವಾದೀನ ಕಳೆದುಕೊಂಡಿದ್ದರು.

ಆದರೂ ದಂಧೇಕೋರರು ಮನೆಗೆ ಬಂದು ದಾಂದಲೆ ನಡೆಸುತ್ತಿದ್ದು,ಇದರಿಂದ ಬಡ್ಡಿ ಹಣ ತೀರಿಸಲು ಶಾಲೆಗೆ ಹೋಗುತ್ತಿದ್ದ ಮಗನನ್ನ ಕೂಲಿಗೆ ಕಳಿಸಿದ್ದಾರೆ ಎನ್ನಲಾಗಿದೆ.ಮಗನ ಕೂಲಿ ಹಣವು ಬಡ್ಡಿ ಸಾಲ ತುಂಬಲು ಸಾಧ್ಯವಾಗದೆ ಕುಟುಂಬ ರೋಸಿಹೋಗಿದೆ ಎನ್ನಲಾಗಿದೆ.

ಈ ಕುರಿತು ನ್ಯಾಯ ಕೊಡಿಸುವಂತೆ ಮನವಿ ಮಾಡಿಕೊಂಡ ಲಿಯಾಕತ್ ಕುಟುಂಬ ಕಣ್ಣಿರಲ್ಲಿ ಕೈ ತೋಳಿಯುತ್ತಿದೆ.ಒಂದೆಡೆ ಸ್ವಾದಿನವಿಲ್ಲದ ಕಾಲುಗಳು,ಇನ್ನೊಂದೆಡೆ ಶಾಲೆಗೆ ತೆರಳಬೇಕಿದ್ದ ಮಗ ಕೂಲಿಗೆ ಹೋಗಬೇಕಾದ ಅನಿವಾರ್ಯತೆ ಈ ಕುರಿತು ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಗಮನ ಹರಿಸಿ ಮತ್ತಷ್ಟು ಮೀಟರ್ ಬಡ್ಡಿ ದಂಧೇಕೋರರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.


Leave a Reply