ANKOLA|ಸಹಕಾರ ಭಾರತಿಗೆ ಮುಖಭಂಗ; ಅಗಸೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಗೋಪಾಲಕೃಷ್ಣ ನಾಯಕ ಅವಿರೋಧ ಆಯ್ಕೆ

Spread the love

ಅಂಕೋಲಾ: ಸಹಕಾರ ಭಾರತಿಗೆ ಸೋಲುಣಿಸುವ ಮೂಲಕ ಅಗಸೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಹೌದು… ಅಗಸೂರು ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಅಧ್ಯಕ್ಷ ಗದ್ದುಗೆಗೆ ನಡೆದ ಚುನಾವಣೆಯಲ್ಲಿ ಗೋಪಾಲಕೃಷ್ಣ ನಾಯಕ ಅವಿರೋಧವಾಗಿ ಆಯ್ಕೆಯಾಗಿದ್ದು,ಉಪಾಧ್ಯಕ್ಷರಾಗಿ ಮೋಹನ ನಾಯಕ ಶಿರಗುಂಜಿ ಆಯ್ಕೆಯಾಗಿದ್ದಾರೆ.

ಒಟ್ಟು 12 ಸ್ಥಾನಗಳೊಳಗೊಂಡ ಅಗಸೂರು ವ್ಯವಸಾಯ ಸಹಕಾರಿ ಸಂಘ ಒಂದು ಸ್ಥಾನ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಲ್ಲದೆ ತೆರವಾಗಿದೆ. ಉಳಿದ 11 ಸ್ಥಾನಗಳಲ್ಲಿ 8 ನಿರ್ದೇಶಕರುಗಳು ಗೋಪಾಲಕೃಷ್ಣ ನಾಯಕರವರ ಪರವಾಗಿ ಬ್ಯಾಟ್ ಬಿಸಿದ್ದು,ಯಾರೊಬ್ಬರೂ ಕೂಡ ವಿರೋಧಿಸಿರಲಿಲ್ಲ.

ಯಾರು ಕೂಡ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿಲ್ಲದ್ದರಿಂದ ಗೋಪಾಲಕೃಷ್ಣ ನಾಯಕ  8 ನಿರ್ದೇಶಕರ ಬೆಂಬಲದೊಂದಿಗೆ ಅವಿರೋಧವಾಗಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ. ಗೋಪಾಲಕೃಷ್ಣ ನಾಯಕರನ್ನು ಸೋಲಿಸಲೇ ಬೇಕೆಂದು ಜಿಲ್ಲೆಯ ಕೆಲ ಪ್ರಮುಖರು ಹರಸಾಹಸ ಪಟ್ಟು,ನಿರ್ದೇಶಕರಿಗೆ ಅಮಿಷವು ಒಡ್ಡಿದ್ದರು ಎನ್ನಲಾಗಿದೆ.

ಇದಾವುದನ್ನು ಲೆಕ್ಕಿಸದ ಗೋಪಾಲಕೃಷ್ಣ ನಾಯಕ ತನ್ನೊಂದಿಗಿರುವ  8 ನಿರ್ದೇಶಕರ  ಜೊತೆಯಲ್ಲಿಯೇ ಇದ್ದು  ಚುನಾವಣೆಯೇ ಆಗದೆ ಅವಿರೋಧ ಆಯ್ಕೆ ಮಾಡಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಹಲವು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ತಾಲೂಕಿನೆಲ್ಲೆಡೆ ಜನಪ್ರಿಯತೆಗಳಿಸಿರುವ ರಾಜ್ಯ,ರಾಷ್ಟ್ರ ಮಟ್ಟದ ರಾಜಕೀಯ ಪ್ರಭಾವಿಗಳೊಂದಿಗೆ ಆತ್ಮೀಯ ಸಂಬಂಧವನ್ನು ಹೊಂದಿರುವ ಗೋಪಾಲಕೃಷ್ಣ ನಾಯಕ ಸಹಕಾರಿ ಸಂಘಕ್ಕೆ ಅವಿರೋಧ ಆಯ್ಕೆಯಾಗಿರುವುದು ಸಹಸ್ರಾರು ಅಭಿಮಾನಿಗಳಿಗೆ ಹಾಗೂ ಹಿತೈಷಿಗಳಿಗೆ ಸಂತಸ ತಂದಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *