ಮುಂಡಗೋಡ : ತಾಲೂಕಿನ ಬಂಕಾಪುರ ರಸ್ತೆಯಲ್ಲಿರುವ ಎಚ್ ಪಿ (HP) ಪೆಟ್ರೋಲ್ ಬಂಕ್ ಪಕ್ಕದಲ್ಲಿರುವ ಖಾಲಿ ಪ್ರದೇಶದಲ್ಲಿ ‘ಕಾಂಡಮ್’ ಪ್ಯಾಕ್ (condom) ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಅವಧಿ ಮುಗಿದ ನಿರೋಧ (ಕಾಂಡಮ್) ರಾಶಿ ರಾಶಿಯಾಗಿ ಬಿದ್ದಿರುವುದರಿಂದ ಕೆಲವರು ಬಳಕೆಮಾಡುತ್ತಿದ್ದು, ಆರೋಗ್ಯಕ್ಕೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ. ಉಪಯೋಗದ ಅವಧಿ ಮುಗಿದ ಕಾಂಡಮ್ ಅನ್ನು ಸಂಬಂಧ ಪಟ್ಟ ಅಧಿಕಾರಿ ತಮ್ಮ ವಶ ಪಡೆದುಕೊಂಡು ಎಸೇದರವರ ಮೇಲೆ ಸೂಕ್ತ ಕ್ರಮ ಕೈಗೋಳ್ಳಬೇಕು ಎಂಬುವುದು ಸ್ಥಳೀಯರ ಆಗ್ರಹವಾಗಿದೆ.

ಕಾಂಡಮ್ ಎಸೆಯುವವರು ಯಾರು??
ಈ ಹಿಂದಿನಿಂದಲೂ ಈ ಪ್ರದೇಶದಲ್ಲಿ ನಿರೋಧ (ಕಾಂಡಮ್) ಅನ್ನು ಪದೇ ಪದೇ ಎಸೆಯಲಾಗುತ್ತಿದೆ ಆದರೆ ಎಸೆಯುವರು ಮಾತ್ರ ಯಾರೆಂಬುದು ಇನ್ನು ಪತ್ತೆಯಾಗಿಲ್ಲ, ಪತ್ತೆ ಕಾರ್ಯಕ್ಕೆ ಜನರೇ ಕಾಯುತ್ತ ಕುಳಿತ್ತಿದ್ದು ಇಲ್ಲಿವರೆಗೆ ಯಾರೆಂಬುದು ಮಾತ್ರ ತಿಳಿದು ಬಂದಿಲ್ಲ.ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಕಾಂಡಮ್ ಪಕ್ಕದಲ್ಲೇ ರಶೀದಿ ದೊರೆತಿದ್ದು ಈ ರಶೀದಿ ಆಧರಿಸಿ ಕಾಂಡಮ್ ಎಸೆದಿರುವವರ ಬಗ್ಗೆ ಕ್ರಮ ಕೈಗೊಳ್ಳಬೇಕು ಎನ್ನುವುದು ಇಲ್ಲಿಯ ಒತ್ತಾಯವಾಗಿದೆ.

ಮಕ್ಕಳಿಗೆ ಬಲೂನ್ ಆದ ಕಾಂಡಮ್?
ಪಟ್ಟಣದ ಶಾಸಕರ ಮಾದರಿ ಶಾಲೆ, ರೋಟರಿ ಶಾಲೆ, ತಾಲೂಕಾ ಕ್ರೀಡಾಂಗಣದ ಹಲವು ಕಡೆಗಳಲ್ಲಿ ಹಾಗೂ ಶಾಲಾ ಮಕ್ಕಳು ಹೆಚ್ಚು ಸಂಚರಿಸುವ ಸ್ಥಳದಲ್ಲಿ ಎಸೆಯಲಾಗಿತ್ತಿದ್ದರಿಂದ ಶಾಲಾ ವಿದ್ಯಾರ್ಥಿಗಳು ‘ಬಲೂನ್’ ತರಹ ಆಟವಾಡುತ್ತಿದ್ದಾರೆ ಎನ್ನಲಾಗಿದೆ ಈ ಬಗ್ಗೆ ತಕ್ಷಣ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.


Leave a Reply