ಅಂಕೋಲಾ: ಮುಂದಿನ ದಿನಗಲ್ಲಿ ಮೊಗಟಾದಲ್ಲಿ (mogata) ರಾಜ್ಯ ಮಟ್ಟದ ಪಂದ್ಯಾವಳಿಗಳು ಅಯೋಜನೆಗೊಳ್ಳಲಿ ಎಂದು ಮಾಜಿ ಜಿಪಂ ಸದಸ್ಯ ಜಗದೀಶ ನಾಯಕ ಮೊಗಟಾ ಹೇಳಿದರು.

ಅವರು ತಾಲೂಕಿನ ಮೊಗಟಾ ಗ್ರಾಪಂ ವ್ಯಾಪ್ತಿಯ ಭಜನಾ ಮಂದಿರ ಕ್ರೀಡಾಂಗಣದಲ್ಲಿ ಎಂ ಸಿ ಸಿ(mcc) ಟ್ರೋಫಿ ಇವರ ಆಶ್ರಯದಲ್ಲಿ ತೃತೀಯ ವರ್ಷದ ಹೊನಲು ಬೆಳಕಿನ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಗಾಟಿಸಿ ಮಾತನಾಡಿ ಮೊಗಟಾ ಗ್ರಾಪಂ ವ್ಯಾಪ್ತಿಯಲ್ಲಿ ಅನೇಕಾರು ಕ್ರೀಡಾಪಟುಗಳು ಇದ್ದು ಅವರ ಪ್ರತಿಭೆಯನ್ನು ವ್ಯಕ್ತಪಡಿಸಲು ಈ ಪಂದ್ಯಾವಳಿ ರಾಜ್ಯಮಟ್ಟದ ಪಂದ್ಯಾವಳಿಯಾಗಿ ಬದಲಾಗಬೇಕು ಹಾಗೆಯೇ ಸ್ಥಳೀಯವಾಗಿ ಪರಿಶಿಷ್ಟ ಜಾತಿಯವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದುದರಿಂದ ಅವರ ಏಳ್ಗೆಗೆ ಒಳಾಂಗಣ ಮೈದಾನ ಮಾಡಿಕೊಡುವಂತೆ ಸರಕಾರಕ್ಕೆ ಮನವಿ ಮಾಡುವಂತೆ ತಾಪಂ ಕಾರ್ಯನಿರ್ವಹಣಾಧಿಕಾರಿ ಸುನೀಲ್ ಎಂ ಅವರಿಗೆ ವಿನಂತಿಸಿದರು.

ಪಾರಿತೋಷಕಗಳನ್ನು ಉದ್ಗಾಟಿಸಿ ಮಾತನಾಡಿದ ತಾಪಂ ಕಾರ್ಯನಿರ್ವಹಣಾಧಿಕಾರಿ ಸುನೀಲ್ ಎಂ ಗ್ರಾಮ ಮಟ್ಟದಲ್ಲಿ ಅಯೋಜನೆಗೊಳ್ಳುವ ಪಂದ್ಯಾವಳಿಗಳಿಂದ ಸ್ಥಳೀಯ ಯುವಕರ ಪ್ರತಿಭೆಗಳನ್ನು ಗುರುತಿಸಲು ಸಾಧ್ಯ,ಮುಂದಿನ ದಿನಗಳಲ್ಲಿ ಇದೇ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ ನೆರವೇರಲಿ ಇದಕ್ಕೆ ನಮ್ಮ ಸಂಪೂರ್ಣ ಸಹಕಾರವಿದೆ ಎಂದರು.

ಕ್ರೀಡಾಂಗಣ ಉದ್ಗಾಟಕರಾಗಿ ಆಗಮಿಸಿದ ಮೊಗಟಾ ಗ್ರಾಪಂ ಸದಸ್ಯ ಗಜಾನನ ಗಾಂವ್ಕರ್ ಪಂದ್ಯಾವಳಿಯ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸದ್ದ ಮೊಗಟಾ ಗ್ರಾಪಂ ಅಧ್ಯಕ್ಷೆ ಸುಮನಾ ನಾಯಕ, ಮೊಗಟಾ ಗ್ರಾಪಂ ಸದಸ್ಯರಾದ ಹರೀಶ್ ನಾಯಕ,ದೇವಾನಂದ ನಾಯಕ,ಆಂದ್ಲೇ ಸೊಸೈಟಿ ಉಪಾಧ್ಯಕ್ಷ ಜಗದೀಶ ನಾಯಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.


Leave a Reply