ಅಂಕೋಲಾ:ಶಿರೂರು ಗುಡ್ಡ ಕುಸಿತ ಪ್ರಕರಣ ಮರೆಮಾಚುವ ಬೆನ್ನಲ್ಲೇ ಅದೇ ಪ್ರದೇಶದಲ್ಲಿ ಮತ್ತೊಂದು ಅವಘಡ ಸಂಭವಿಸಿದೆ.ಶಿರೂರು ಗುಡ್ಡ ಕುಸಿತದ ದುರಂತ ರಾಜ್ಯ ಕಂಡಂತಹ ಭೀಕರ ದುರಂತವಾಗಿದೆ. ಅದರ ತಿವೃತೆಗೆ ಕೇರಳ ಮೂಲದ ‘ಭಾರತ್ ಬೆಂಜ್’ ಲಾರಿ ಸಿಲುಕಿ ಲಾರಿ ಚಾಲಕ ಅರ್ಜುನ್ ಸಹಿತ 11 ಮಂದಿ ಮೃತಪಟ್ಟಿದ್ದರು ಆದರೆ ಅದೇ ಪ್ರದೇಶದಲ್ಲಿ ಮತ್ತೊಂದು ‘ಭಾರತ್ ಬೆಂಜ್’ ಲಾರಿ ಅವಘಡ ಸಂಭವಿಸಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಹೌದು… ಜುಲೈ 16 ಉತ್ತರ ಕನ್ನಡ ಜಿಲ್ಲೆಗೆ ಕರಾಳ ಮಂಗಳವಾರ,ಬೆಳ್ಳಂಬೆಳಗ್ಗೆ ಎದ್ದು ಜೀವನ ಸಾಗಿಸಬೇಕಿದ್ದ 11 ಕ್ಕೂ ಅಧಿಕ ಮಂದಿ ರಾಷ್ಟ್ರೀಯ ಹೆದ್ದಾರಿ 66 ರ ಶಿರೂರು ಬಳಿ ನಡೆದ ಭೀಕರ ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದರು. ಒಂದೇ ಕುಟುಂಬದ ಏನು ಅರಿಯದ ಇಬ್ಬರು ಪುಟ್ಟ ಕಂದಮ್ಮಗಳು ಸಹಿತ ನಾಲ್ವರು ಗಂಗಾವಳಿ ನದಿಯ ಒಡಲು ಸೇರಿದ್ದರು. ಹಾಗೆಯೇ ಕೇರಳ ಮೂಲದ ಭಾರತ್ ಬೆಂಜ್ ಲಾರಿ ಸಹಿತ ಚಾಲಕ ಅರ್ಜುನ್ ಕೂಡ ದುರ್ಘಟನೆಯಲ್ಲಿ ನಾಪತ್ತೆಯಾಗಿದ್ದ. ಎರಡು ತಿಂಗಳ ನಿರಂತರ ಕಾರ್ಯಾಚರಣೆಯ ಬಳಿಕ ಸೆ.25 ರಂದು ಡ್ರಜ್ಜಿಂಗ್ ಕಾರ್ಯಾಚರಣೆಯ ವೇಳೆ ಗಂಗಾವಳಿ ನದಿಯಲ್ಲಿ ಲಾರಿ ಸಹಿತ ಚಾಲಕ ಅರ್ಜುನ್ ಮೃತದೇಹದ ಕಳೆಬರಹ ಪತ್ತೆಯಾಗಿತ್ತು. ಆದರೆ ಅದೇ ಪ್ರದೇಶದಲ್ಲಿ ಮಹಾರಾಷ್ಟ್ರ ನೋಂದಣಿಯ ಎಂ ಎಚ್ 18 ಬಿಜಿ 6896 ನಂಬರಿನ 14 ಚಕ್ರದ ಭಾರತ್ ಬೆಂಜ್ ಲಾರಿ ಹೆದ್ದಾರಿಯ ಅಂಚಿಗೆ ಉರುಳಿದ್ದು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಮಂಗಳೂರಿನಿಂದ ಮಹಾರಾಷ್ಟ್ರ ಕಡೆ ತೆರಳುತ್ತಿದ್ದ MH 18 BG 6896 ನಂಬರಿನ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ 66 ಅಪಘಾತವಾಗಿದೆ.ಶಿರೂರು ಗುಡ್ಡ ಕುಸಿತದ ಪ್ರದೇಶದಲ್ಲೇ ಮತ್ತೊಂದು ‘ಭಾರತ್ ಬೆಂಜ್’ ಲಾರಿ ಉರುಳಿ ಬಿದ್ದು ಆತಂಕಕ್ಕೆ ಎಡೆಮಾಡಿಕೊಟ್ಟಿತ್ತು, ಹೆದ್ದಾರಿಯ ಅಂಚಿನಲ್ಲಿಯೇ ಹರಿಯುವ ಗಂಗಾವಳಿ ನದಿಯಿದ್ದು, ಸ್ವಲ್ಪದರಲ್ಲಿಯೇ ಬಚಾವ್ ಆಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಅಂಕೋಲಾ ಪೋಲಿಸರು ಆಗಮಿಸಿದ್ದು ಲಾರಿ ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ ಎನ್ನಲಾಗಿದೆ.


Leave a Reply