ಅಂಕೋಲಾ:ನನ್ನ ಪರಿಸ್ಥಿತಿ ಯಾರಿಗೂ ಬರುವುದು ಬೇಡ,ಸಾರಿ ಅಮ್ಮ,ನನ್ನ ಹತ್ರ ಆಗುದಿಲ್ಲ ಎಂದು ಲೇಟರ್ ಬರೆದಿಟ್ಟು ಭಗ್ನಪ್ರೇಮಿಯೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಅಂಕೋಲಾ ತಾಲೂಕಿನ ಬೆಳೆಸೆಯಲ್ಲಿ ನಡೆದಿದೆ.

ಹೌದು…ನಾನು ಲವ್ ಮಾಡಿದ್ದ ಇಂದ್ರಿಕಾ(ಹೆಸರು ಬದಲಾಯಿಸಲಾಗಿದೆ) 8 ವರ್ಷದಿಂದ ಲವ್ ಮಾಡ್ತಇದ್ವಿ ಆದ್ರೆ ನಂಗೆ ಈಗ ಬಿಟ್ಟಿದ್ದಾಳೆ.

ಅಮ್ಮ ನನ್ನನ್ನು ಕ್ಷಮಿಸಿ ಎಂದು ಎಂದು ಪತ್ರ ಬರೆದಿಟ್ಟು ಮನನೊಂದು ವಾಸರಕುದ್ರಿಗೆ ಗ್ರಾಪಂ ವ್ಯಾಪ್ತಿಯ ಮೇಲಿನಗುಳಿ ಯುವಕ ಸಂತೋಷ ರೂಪಾ ಗೌಡ (31) ಮಾವಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಬೆಳಸೆಯಲ್ಲಿ ನಡೆದಿದೆ.

ಕಳೆದ 8 ವರ್ಷಗಳಿಂದ ನಿರಂತರವಾಗಿ ಪ್ರೀತಿಸುತ್ತಿದ್ದ ಹುಡುಗಿ 20 ದಿನಗಳಿಂದ ದೂರಮಾಡುತ್ತಿದ್ದು, ನನಗೆ ಬದುಕಲು ಆಗುತ್ತಿಲ್ಲ,ಸಾರಿ ಅಮ್ಮ.. ನನ್ನನ್ನು ಕ್ಷಮಿಸು..ನನಗೆ ಊಟಾನು ಸೇರುತಿಲ್ಲ,ನಿದ್ದೇನೂ ಬರುತ್ತಿಲ್ಲ..ನಾವಿಬ್ಬರು ಲವ್ ಮಾಡುವ ಇಡೀ ವಿಷಯ ಊರಿನವರಿಗೂ ಗೊತ್ತು..ಎಂದೆಲ್ಲ ಬರೆದುಕೊಂಡು ಪ್ರೀತಿಸಿದ ಹುಡುಗಿಯ ಮನೆಯ ಹತ್ತಿರವೇ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.


Leave a Reply