ಕಾರವಾರ: ಕಾರವಾರದಿಂದ ಬೆಂಗಳೂರಿಗೆ ತೆರಳಲು ಈ ಹಿಂದೆ ರಾಜಹಂಸ ಬಸ್ ಬಿಡುತ್ತಿದ್ದರು, ಆದರೆ ಕಳೆದ ಕೆಲ ತಿಂಗಳುಗಳಿಂದ ಬಸ್ ಸ್ಥಗಿತಗೊಳಿಸಲಾಗಿದೆ. ಅದನ್ನು ಪುನಃ ಬಿಡುವಂತೆ ಜಾತ್ಯಾತೀತ ಜನತಾದಳ ರಾಜ್ಯ ಕಾರ್ಯದರ್ಶಿ ಮೋಹಿನಿ ನಾಯ್ಕ ಆಗ್ರಹಿಸಿದ್ದಾರೆ.

ಹೌದು..ಸಂಜೆ 7 ಗಂಟೆಗೆ ಕಾರವಾರದಿಂದ ಹಾಗೂ 8 ಗಂಟೆಗೆ ಅಂಕೋಲದಿಂದ ಬೆಂಗಳೂರಿಗೆ ತೆರಳುತ್ತಿದ್ದ ರಾಜಹಂಸ ಬೆಂಗಳೂರು ಬಸ್ 1 ಕಳೆದ ಕೆಲ ತಿಂಗಳುಗಳಿಂದ ಸ್ಥಗಿತವಾಗಿದೆ.

ಈ ಕುರಿತು ಮಾತನಾಡಿದ ಅವರು ಕಳೆದ ಕೆಲ ವರ್ಷಗಳಿಂದ ಕಾರವಾರ-ಅಂಕೋಲಾ ಜನತೆಗೆ ನೆರವಾಗಿದ್ದ ರಾಜಹಂಸ ಬಸ್ ಸ್ಥಗಿತವಾಗಿದ್ದು,ಸ್ಥಳೀಯರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ,ರಾಜಧಾನಿಗೆ ತೆರಳಲು ತೊಂದರೆ ಅನುಭವಿಸುತ್ತಿದ್ದಾರೆ,ಖಾಸಗಿ ಬಸ್ಸುಗಳಲ್ಲಿ ಹಗಲು ದರೋಡೆ ನಡೆಯುತ್ತಿದ್ದು,ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳುತ್ತಿದೆ ಆದ್ದರಿಂದ ಕೂಡಲೇ ರಾಜಹಂಸ ಬಸ್ಸನ್ನು ಪುನಃ ಬಿಡಬೇಕೆಂದು ಜಾತ್ಯಾತೀತ ಜನತಾದಳದ ರಾಜ್ಯ ಕಾರ್ಯದರ್ಶಿ ಒತ್ತಾಯಿಸಿದ್ದಾರೆ.

ಈ ಕುರಿತು ಕೇಂದ್ರ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿಯವರ ಗಮನಕ್ಕೆ ತಂದ ಮೋಹಿನಿ ನಾಯ್ಕ, ಈ ಕೂಡಲೇ ಕ್ರಮ ಕೈಗೊಳ್ಳುವಂತೆ ಕೆ ಎಸ್ ಆರ್ ಟಿ ಸಿ ವ್ಯವಸ್ಥಾಪಕ ನಿರ್ದೇಶಕರಾದ ಅನ್ಬುಕುಮಾರ್ ಅವರಿಗೆ ಅದೇಶಿಸಿದ್ದಾರೆ.


Leave a Reply