ಹೊನ್ನಾವರ: ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 66 ರ ಗುಣವಂತೆ ಬಳಿ ಗುಜರಿ ಅಡ್ಡೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು,ದಟ್ಟಣೆಯ ಹೊಗೆ ಮುಗಿಲು ಮುಟ್ಟಿದ್ದು,ಅಗ್ನಿಶಾಮಕದಳ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.

ಹೌದು…ಕರಾವಳಿ ಭಾಗದಲ್ಲಿ ಹೆಚ್ಚಿರುವ ಬಿಸಿಲಿನ ತಾಪಮಾನಕ್ಕೆ ಗುಜರಿ ಅಡ್ಡೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ನೋಡ ನೋಡುತ್ತಿದ್ದಂತೆಯೇ ಬೆಂಕಿ ವ್ಯಾಪಿಸುತ್ತಲೇ ಇದ್ದು,ಹೊಗೆ ಮುಗಿಲು ಮುಟ್ಟಿದೆ.
ಹೊನ್ನಾವರ ಅಗ್ನಿಶಾಮಕ ಠಾಣೆಯಲ್ಲಿ ಕಡಿಮೆ ಸಾಮರ್ಥ್ಯದ ಬೆಂಕಿ ನಂದಿಸುವ ವಾಹನದಿಂದ ಅಗ್ನಿ ಅವಘಡ ನಿಯಂತ್ರಿಸಲು ಪರದಾಟಮಾಡಿದ್ದು,ನೆರೆಯ ಭಟ್ಕಳ ತಾಲೂಕಿನ ಅಗ್ನಿಶಾಮಕದಳದಿಂದ ಬೆಂಕಿ ನಂದಿಸುವ ಕಾರ್ಯಭರದಿಂದ ಸಾಗಿದ್ದು ಹೊನ್ನಾವರದಲ್ಲಿ ಅಗ್ನಿಶಾಮಕದಳದಿಂದ ತರಲಾಗಿದ್ದ ಸಣ್ಣ ವಾಹನ ಬೆಂಕಿ ನಂದಿಸಲು ವಿಫಲವಾಗಿದ್ದು,ಅಧಿಕಾರಿಗಳು ಹರಸಾಹಸ ಪಟ್ಟಿದ್ದರು ಆದರೂ ಪ್ರಯತ್ನ ಫಲಪ್ರದವಾಗಿರಲಿಲ್ಲ.ಆದ್ದರಿಂದ ಕುಪಿತಗೊಂಡ ಸ್ಥಳೀಯರು ದೊಡ್ಡ ದೊಡ್ಡ ಅಗ್ನಿ ಅವಘಡ ಸಂಭವಿಸಿದರೆ ಏನು ಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಂಕಿ ನಂದಿಸಲು ವಿಳಂಬವಾದುದ್ದರಿಂದ ಹೆದ್ದಾರಿ ಸಂಚಾರದಲ್ಲಿ ಕೆಲಕಾಲ ವ್ಯತ್ಯಯವುಂಟಾಗಿದ್ದು,ಸುದೀರ್ಘ ಕಾರ್ಯಾಚರಣೆಯ ಬಳಿಕ ಬೆಂಕಿ ನಿಯಂತ್ರಣಕ್ಕೆ ಬಂದಿದೆ.


Leave a Reply