ಅಂಕೋಲಾ:ಕೇಶವ ಫೌಂಡೇಷನ್ ಬೆಂಗಳೂರು ವತಿಯಿಂದ ಮಾರ್ಚ್ 2 ರವಿವಾರದಂದು ಮಹಾ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದ್ದು,ಕಸ್ತೂರಬಾ ಆಸ್ಪತ್ರೆ ಮಣಿಪಾಲದ 25 ತಜ್ಞ ವೈದ್ಯರ ತಂಡದಿಂದ ತಪಾಸಣೆ ಸಲಹೆ ಹಾಗೂ ಉಚಿತ ಕಣ್ಣಿನ ಪೊರೆ ಚಿಕಿತ್ಸೆ ನೀಡಲಾಗುವುದು ಎಂದು ಕೇಶವ ಫೌಂಡೇಷನ್ ಅಧ್ಯಕ್ಷ ಹರೀಶ್ ನಾಯ್ಕ ಹೇಳಿದರು.

ಅವರು ತಾಲೂಕಿನ ಖಾಸಗಿ ಹೋಟೆಲ್ ಒಂದರಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ನಮ್ಮ ಉತ್ತರ ಕನ್ನಡ ಜಿಲ್ಲೆ ಭೌಗೋಳಿಕ ಸೌಂದರ್ಯವನ್ನು ಹೊಂದಿದ್ದರು ಶಾಪಗ್ರಸ್ಥ ಜಿಲ್ಲೆಯಾಗಿದೆ,ಬೆಳವಣಿಗೆ ಮಾತ್ರ ಅತೀ ಕುಂಠಿತವಾಗಿದ್ದು ವೈದ್ಯಕೀಯ ಕ್ಷೇತ್ರವಂತೂ ಶೂನ್ಯಸಾಧನೆ ಸಂಪಾದಿಸಿದೆ. ಸಣ್ಣ ಚಿಕಿತ್ಸೆ ಬೇಕೆಂದರು ಪಕ್ಕದ ಜಿಲ್ಲೆಗೆ ತೆರಳಬೇಕಾದ ಅನಿವಾರ್ಯತೆ ನಮ್ಮ ಜಿಲ್ಲೆಯದ್ದಾಗಿದೆ.ನಮ್ಮ ಜಿಲ್ಲೆಯ ಜನರ ಇಚ್ಛಾಶಕ್ತಿಯ ಕೊರತೆ ಎದ್ದುಕಾಣುತ್ತಿದೆ,ನಿನ್ನೆ ಮೊನ್ನೆ ಉದಯವಾದ ಉಡುಪಿ ಜಿಲ್ಲೆಯನ್ನು ನಂಬಿ ನಮ್ಮ ಜಿಲ್ಲೆಯ ಜನರು ಬದುಕಿದ್ದಾರೆ, ನಮ್ಮ ಮಹಾ ಆರೋಗ್ಯ ಶಿಬಿರದ ಮೂಲಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಪುಟ್ಟ ಹೆಜ್ಜೆಯನ್ನಿಟ್ಟಿದ್ದೇವೆ,ನಿರಂತರವಾಗಿ ತಜ್ಞ ವೈದ್ಯರು ಜಿಲ್ಲೆಯ ಜನರ ಆರೋಗ್ಯ ತಪಾಸಣೆ ಕೈಗೊಳ್ಳುವಂತೆ ಮಾಡಲಿದ್ದೇವೆ.ಪ್ರಸೂತಿ ಹಾಗೂ ಮಹಿಳೆಯರ ಸಂಬಂಧಿ ಖಾಯಿಲೆ,ಪಂಚೇಂದ್ರಿಯ,ಮೂಳೆ ಹೀಗೆ ಅನೇಕಾರು ವಿಷಯಗಳಲ್ಲಿ ಪರಿಣಿತಿ ಹೊಂದಿದ ವೈದ್ಯರನ್ನು ಕರೆತಂದು ಪರೀಕ್ಷಿಸಿ ಚಿಕಿತ್ಸೆ ನೀಡಿ ಸಾರ್ವಜನಿಕರ ಸೇವೆಯ ಗುರಿಯನ್ನು ಹೊತ್ತು ನಮ್ಮ ಸಂಸ್ಥೆ ಈ ಕಾರ್ಯಕ್ರಮ ಕೈಗೊಂಡಿದ್ದು,ಈ ಕಾರ್ಯಕ್ರಮಕ್ಕೆ ತಮ್ಮೆಲ್ಲರ ಸಹಕಾರದ ನಿರೀಕ್ಷೆಯಲ್ಲಿದ್ದೇವೆ ಎಂದರು.
ಮಾರ್ಚ್ 2 ರವಿವಾರ ಬೆಳಿಗ್ಗೆ 9 ಗಂಟೆಯಿಂದ ತಾಲೂಕಿನ ಪಿ. ಎಂ ಜ್ಯುನಿಯರ್ ಕಾಲೇಜು ಆವರಣದಲ್ಲಿ ಬೃಹತ್ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದ್ದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ, ಮೀನುಗಾರಿಕೆ ಹಾಗೂ ಬಂದರು ಒಳನಾಡು ಸಾರಿಗೆ ಸಚಿವ ಮಂಕಾಳು ವೈದ್ಯ ಉದ್ಗಾಟಿಸಲಿದ್ದು,ಮುಖ್ಯ ಅತಿಥಿಗಳಾಗಿ ಸ್ಥಳೀಯ ಶಾಸಕ ಸತೀಶ್ ಸೈಲ್ ಆಗಮಿಸಲಿದ್ದಾರೆ,ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಶವ ಫೌಂಡೇಷನ್ ಅಧ್ಯಕ್ಷ ಹರೀಶ್ ನಾಯ್ಕ ವಹಿಸಲಿದ್ದು, ಕೆನರಾ ವೇಲ್ಪರ್ ಟ್ರಸ್ಟಿನ ಆಡಳಿತಾಧಿಕಾರಿ ರವೀಂದ್ರ ಕೇಣಿ,ಪಿಎಂ ಪಿಯು ಕಾಲೇಜು ಪ್ರಾಂಶುಪಾಲ ಪಾಲ್ಗುಣ ಗೌಡ,ಧಾರ್ಮಿಕ ದತ್ತಿ ಸದಸ್ಯ ದಾಮೋದರ ನಾಯಕ, ಆದರ್ಶ ಪ್ರೌಡಶಾಲೆ ಅಧ್ಯಕ್ಷ ನಿತ್ಯಾನಂದ ನಾಯ್ಕ, ಸಿವಿಲ್ ಇಂಜಿನಿಯರ್ ಸಂಜಯ ನಾಯ್ಕ,ಕೆನರಾ ನ್ಯೂಸ್ ಸಂಪಾದಕ ಮಂಜುನಾಥ ನಾಯ್ಕ, ಸಾಮಾಜಿಕ ಕಾರ್ಯಕರ್ತ ರಾಜೇಶ ಮಿತ್ರಾ ನಾಯ್ಕ ಉಪಸ್ಥಿತರಿರಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಅರುಣ್ ಶೆಟ್ಟಿ,ಗೌರವಾಧ್ಯಕ್ಷ ರಾಘು ಕಾಕರಮಠ, ಕೇಶವ ಫೌಂಡೇಷನ್ ಅಧ್ಯಕ್ಷ ಹರೀಶ ನಾಯ್ಕ,ಪಿಎಂ ಜ್ಯುನಿಯರ್ ಕಾಲೇಜು ಪ್ರಾಂಶುಪಾಲ ಪಾಲ್ಗುಣ ಗೌಡ,ಧಾರ್ಮಿಕ ದತ್ತಿ ಸದಸ್ಯ ದಾಮೋದರ ನಾಯ್ಕ,ಕೆನಾರಾನ್ಯೂಸ್ ಸಂಪಾದಕ ಮಂಜುನಾಥ್ ನಾಯ್ಕ,ಆದರ್ಶ ಪ್ರೌಡಶಾಲೆ ಅಧ್ಯಕ್ಷ ನಿತ್ಯಾನಂದ ನಾಯ್ಕ,ಈಶ್ವರ್ ನಾಯ್ಕ ಉಪಸ್ಥಿತರಿದ್ದರು.


Leave a Reply