ಅಂಕೋಲಾ: ಕರ್ತವ್ಯನಿರತ ಮಹಿಳಾ ಪೇದೆಯೊಂದಿಗೆ ಹವಾಲ್ದಾರ್ ಕಿರಿಕ್ ಮಾಡಿದ್ದು,ಸ್ಥಳಕ್ಕೆ ಬಂದ ಪಿಎಸೈನಿಂದ ಹವಾಲ್ದಾರ್ ಗೆ ಕಪಾಳಮೋಕ್ಷ ಮಾಡಿದ ಘಟನೆ ಗೋಕರ್ಣದಲ್ಲಿ ನಡೆದಿದೆ.

ಹೌದು…ಮಹಾಶಿವರಾತ್ರಿಯ ಅಂಗವಾಗಿ ಗೋಕರ್ಣದ ಮಹಾಬಲೇಶ್ವರ ದೇಗುಲದಲ್ಲಿ ಹರಿದು ಬಂದ ಭಕ್ತಸಾಗರವನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದರು,ಅದರಂತೆಯೇ ಭಕ್ತನಾಗಿ ಬಂದ ಸ್ಥಳೀಯನೂ ಆಗಿದ್ದ ಭಟ್ಕಳ ನಗರ ಠಾಣೆಯ ಹವಾಲ್ದಾರ್ ಜೈರಾಮ್ ಹೊಸಕಟ್ಟ,ಅಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದ ಪೂರ್ಣಿಮಾ ಎನ್ನುವ ಮಹಿಳಾ ಪೇದೆಯೊಂದಿಗೆ ಸರತಿ ಸಾಲಿನಲ್ಲಿ ಬೇಗನೆ ಬಿಡು ಎಂದು ಏಕವಚನದಲ್ಲೇ ಮಾತನಾಡಿ ಕಿರಿಕ್ ಮಾಡಿದ್ದಾರೆ ಎಂದು ಆರೋಪಿಸಿದ ಪೂರ್ಣಿಮಾ ತಕ್ಷಣ ಪಿಎಸೈ ಖಾದರ್ ಪಾಷಾ ಗೆ ಕರೆ ಮಾಡಿದ್ದಾರೆ, ತಕ್ಷಣ ಘಟನಾ ಸ್ಥಳಕ್ಕೆ ಬಂದ ಪಿಎಸೈ ಮಹಿಳಾ ಪೇದೆಯೊಂದಿಗೆ ಕಿರಿಕ್ ಮಾಡಿಕೊಂಡ ಹವಾಲ್ದಾರ್ ಜೈರಾಮ್ ಅವರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ,ಮಾತಿಗೆ ಮಾತು ಬೆಳೆಯುತ್ತಿದ್ದಂತೆ ಆವೇಶಗೊಂಡ ಪಿಎಸೈ ಆತನಮೇಲೆ ಗರಂ ಆಗಿ ಕಪಾಳಮೋಕ್ಷ ಮಾಡಿದ್ದಾರೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಪರ-ವಿರೋಧ ಚರ್ಚೆಯತ್ತ ಸಾಗುತ್ತಿದೆ.

ಗಲಾಟೆಗಳನ್ನು ಹತೋಟಿಗೆ ತರುವ ಪೊಲೀಸರೇ ಈ ರೀತಿಯಲ್ಲಿ ಕಚ್ಚಾಡುತ್ತಿದ್ದು ಸಾರ್ವಜನಿಕ ವಲಯದಲ್ಲಿ ನಗೆಪಾಟಲಿಗೆ ಎಡೆಮಾಡಿಕೊಟ್ಟಿದೆ. ತನ್ನ ಸಿಬ್ಬಂದಿಯೊಂದಿಗೆ ಅನುಚಿತ ವರ್ತನೆ ಮಾಡಿದವನಿಗೆ ಪಿಎಸೈ ಏಕಾಏಕಿ ಕಪಾಳಮೋಕ್ಷ ಮಾಡಿದ್ದು ತಪ್ಪು,ಅತ್ತ ಹವಾಲ್ದಾರ್ ಜೈರಾಮ್ ಕೂಡ ಕರ್ತವ್ಯನಿರತ ಮಹಿಳಾ ಪೇದೆಯೊಂದಿಗೆ ಕಿರಿಕ್ ಮಾಡಿಕೊಂಡಿದ್ದು ತಪ್ಪು ಎನ್ನುತ್ತಾರೆ ಸ್ಥಳೀಯರು.

ಏನಿದು ಪ್ರಕರಣ?
ಪ್ರತಿವರ್ಷದಂತೆ ಈ ವರ್ಷವೂ ಕೂಡ ಶಿವರಾತ್ರಿಯಂದು ಸಹಸ್ರ ಸಂಖ್ಯೆಯಲ್ಲಿ ಭಕ್ತರು ಗೋಕರ್ಣಕ್ಕೆ ಆಗಮಿಸಿದ್ದರು.ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಮಾತ್ರ ವಿವಿಐಪಿ ಸರತಿ ಸಾಲಿನಲ್ಲಿ ದರ್ಶನಕ್ಕೆ ವ್ಯವಸ್ಥೆಯಲ್ಲಿ ಮಾಡಲಾಗಿತ್ತು. ಅದರಂತೆಯೇ ಗೋಕರ್ಣದ ಸುತ್ತಮುತ್ತಲಿನ ಭಕ್ತರಿಗೆ ಪ್ರತ್ಯೇಕವಾಗಿ ದೇವಾಲಯದೊಳಗೆ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿತ್ತು.ಸ್ಥಳೀಯರ ಸಾಲಿನಲ್ಲಿ ದೇವರ ದರ್ಶನಕ್ಕೆ ಬಂದಿದ್ದ ಪೊಲೀಸ್ ಕುಟುಂಬ ಸ್ಥಳೀಯರೇ ಆಗಿರುವ ಕಾರಣ ಸ್ಥಳೀಯ ಸರತಿ ಸಾಲಿನಲ್ಲಿ ಬರುತ್ತಿದ್ದರು,ಈ ವೇಳೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪೇದೆ ಪೂರ್ಣಿಮಾ ನೂಕುನುಗ್ಗಲಿನಿಂದ ಕೂಡಿದ್ದ ಸಾಲನ್ನು ನಿಧಾನವಾಗಿ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಡುತ್ತಿದ್ದರು,ಈ ವೇಳೆಯಲ್ಲಿ ಕುಪಿತಗೊಂಡ ಹವಾಲ್ದಾರ್ ಜೈರಾಮ್ ಹೊಸಕಟ್ಟ ಬೇಗ ಬೇಗನೇ ಬಿಡುವಂತೆ ಪೇದೆಗೆ ಆವಾಜ್ ಹಾಕಿದ್ದಾರೆ ಎನ್ನಲಾಗಿದೆ. ಮಹಿಳಾ ಪೇದೆ ಮತ್ತು ಹವಾಲ್ದಾರ್ ಜೈರಾಮ್ ಅವರ ಟಾಕ್ ಫೈಟ್ ಜೋರಾಗುತ್ತಿದ್ದಂತೆ ಪೇದೆ ಪೂರ್ಣಿಮಾ ಪಿಎಸೈ ಖಾದರ್ ಪಾಷಾ ಗೆ ಕಾಲ್ ಮಾಡಿದ್ದಾರೆ.ತಕ್ಷಣ ಆಗಮಿಸಿದ ಪಿಎಸ್‌ಐ ತನ್ನ ಇಲಾಖೆಯ ಸಿಬ್ಬಂದಿಯನ್ನೇ ದೇವಾಲಯದ ಆವರಣದಲ್ಲೇ ಕಪಾಳ ಮೋಕ್ಷ ಮಾಡಿದ್ದಾರೆ.

ಏನೇ ಇರಲಿ ಸರತಿ ಸಾಲಿನಲ್ಲಿ ಗಂಭೀರವಾಗಿ ತೆರಳುತ್ತಿದ್ದ ಭಕ್ತರಿಗೆ ತಾಳ್ಮೆ ಇಲ್ಲದ ಪೊಲೀಸರ ಗಲಾಟೆಗಳನ್ನು ನೋಡುತ್ತಾ ಸಖತ್ ಎಂಜಾಯ್ ಮಾಡಿದ್ದಾರೆ ಎನ್ನಲಾಗಿದೆ.


Leave a Reply