ಬಳ್ಳಾರಿ : ರಾಜ್ಯಾದ್ಯಂತ ಹಕ್ಕಿ ಜ್ವರದ ಆತಂಕ ಹೆಚ್ಚಿದ್ದು,ಸರ್ಕಾರಿ ಪೌಲ್ಟ್ರಿ ಫಾರ್ಮ್ ನಲ್ಲಿ 2400 ಕೋಳಿಗಳು ಸಾವನ್ನಪ್ಪಿದ್ದು, ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

ಹೌದು… ರಾಜ್ಯದಲ್ಲಿ ಹಕ್ಕಿ ಜ್ವರದ ಆತಂಕ ಹೆಚ್ಚುತ್ತಿದ್ದು ಬಳ್ಳಾರಿಯ ಕುರೇಕುಪ್ಪ ಗ್ರಾಮದ ಸರ್ಕಾರಿ ಪೌಲ್ಟ್ರಿ ಫಾರ್ಮ್ ನಲ್ಲಿ 2400 ಕೋಳಿಗಳು ಸಾವನ್ನಪ್ಪಿದ್ದು, ಜನರಲ್ಲಿ ಹಕ್ಕಿ ಜ್ವರದ ಭೀತಿ ಎದುರಾಗಿದೆ. ದರೋಜಿ, ದೇವಲಾಪುರ ಹಾಗೆಯೇ ಇನ್ನಿತರ ಗ್ರಾಮದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಹಕ್ಕಿ ಜ್ವರದಿಂದಲೇ ಕೋಳಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಆಂದ್ರಪ್ರದೇಶ, ತೆಲಂಗಾಣ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ರಾಯಚೂರಿನಲ್ಲಿ ಪಕ್ಷಿಗಳು ನಿಗೂಢವಾಗಿ ಸಾವನ್ನಪ್ಪುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ.

ರಾಯಚೂರಿನ ಮಾನ್ವಿ ಸೇರಿದಂತೆ ಹಲವು ಕಡೆ ಹಕ್ಕಿಗಳು ಸಾವನ್ನಪ್ಪುತ್ತಿದೆ. ಕಾಗೆ, ಪಾರಿವಾಳ ಸೇರಿದಂತೆ ಹಲವು ಪಕ್ಷಿಗಳು ಸಾವನ್ನಪ್ಪುತ್ತಿದೆ.ನೆರೆಯ ರಾಜ್ಯಗಳಲ್ಲಿ ಹಕ್ಕಿಜ್ವರ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆ ರಾಯಚೂರಿನ ಜನತೆಯಲ್ಲಿ ಆತಂಕ ಮನೆ ಮಾಡಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಸಹ ಹೊರ ಜಿಲ್ಲೆಗಳಿಂದ ಬರುತ್ತಿರುವ ಕೋಳಿಗಳ ಮೇಲೆ ನಿಗಾ ವಹಿಸಲಾಗಿದ್ದು,ಹಕ್ಕಿ ಜ್ವರದಿಂದ ಮಾಂಸ ಪ್ರಿಯರಿಗೆ ಆತಂಕ ಎದುರಾಗಿದೆ.


Leave a Reply