ಅಂಕೋಲಾ:ಬೊಬ್ರುವಾಡ ಗ್ರಾಮ ನಾಮಧಾರಿ ಸಮಾಜದ ಸುಗ್ಗಿ ಉತ್ಸವವು ಮಾರ್ಚ್ 7 ಶುಕ್ರವಾರದಿಂದ ಮಾರ್ಚ್ 13 ಗುರುವಾರ ಹೋಳಿ ಹುಣ್ಣಿಮೆಯವರೆಗೆ ಸುಗ್ಗಿ ಉತ್ಸವವು ನಡೆಯಲಿದೆ ಎಂದು ಆರ್ಯ (ಈಡಿಗ) ನಾಮಧಾರಿ ಸಮಾಜ ಶ್ರೀ ಕೇದಗಿಯಮ್ಮಾ ದೇವಸ್ಥಾನ ಅಭಿವೃದ್ಧಿ ಕಮಿಟಿ ಕಾರ್ಯದರ್ಶಿ ಸುರೇಶ್ ನಾಯ್ಕ ಹೇಳಿದರು.

ಅವರು ತಾಲೂಕಿನ ಖಾಸಗಿ ಹೋಟೆಲ್ ಒಂದರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಇದೆ ಬರುವ ಮಾರ್ಚ್ 07 ಶುಕ್ರವಾರ ನವಮಿಯಂದು ಸಾಯಂಕಾಲ 5-00 ಘಂಟೆಗೆ ಶ್ರೀ ಶಾಂತಾದುರ್ಗಾದೇವಿ ರಥೋತ್ಸವದೊಂದಿಗೆ ಶ್ರೀ ಶಂಕರ ನಾರಾಯಣ ದೇವಸ್ಥಾನಕ್ಕೆ ಮೆರವಣಿಗೆ ಹೊರಡಲಿದ್ದು,ಮಾರನೆಯ ದಿನ ಮಾರ್ಚ್ 08 ಶನಿವಾರ ಬೆಳಿಗ್ಗೆಯಿಂದ ತಾಲೂಕಿನ ವಿವಿದೆಡೆಯಲ್ಲಿ ಹಾಗೂ ಆಹ್ವಾನವಿತ್ತ (ಆಮಂತ್ರಣ) ಪ್ರತಿಯೊಂದು ಗ್ರಾಮಕ್ಕೂ ಮತ್ತು ಮನೆಗಳಿಗೆ ಹೋಗಿ ನಮ್ಮ ಸುಗ್ಗಿ ತಂಡ ಕುಣಿಯಲಿದೆ. ತಾವೆಲ್ಲರೂ ನಮ್ಮ ಸುಗ್ಗಿ ತಂಡವನ್ನು ಪ್ರೋತ್ಸಾಹಿಸಿ ಸಹಕರಿಸಬೇಕಾಗಿ ಎಂದು ವಿನಂತಿಸಿಕೊಂಡರು.

ಈ ಸಂದರ್ಭದಲ್ಲಿ ಪ್ರಭಾಕರ್ ನಾಯ್ಕ ಮಾತನಾಡಿ ಬೊಬ್ರುವಾಡ ನಾಮಧಾರಿ ಸಮಾಜ ಸುಗ್ಗಿ ಉತ್ಸವ ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟಕಾರಾಗಿ ಶಿರಸಿ ಸಿದ್ದಾಪುರ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ ಬಾಗವಹಿಸಲಿದ್ದಾರೆ, ಹಾಗೆಯೇ ಮುಖ್ಯ ಅತಿಥಿಗಳಾಗಿ ನಾಮಧಾರಿ ಸಮಾಜದ ಜಿಲ್ಲಾಧ್ಯಕ್ಷ ಮಂಜುನಾಥ್ ಎಲ್ ನಾಯ್ಕ,ಉದ್ದಿಮೆದಾರ ಸೂರಜ್ ನಾಯ್ಕ ಸೋನಿ,ವಲಯ ಅರಣ್ಯಾಧಿಕಾರಿ ಸುರೇಶ ನಾಯ್ಕ,ನಾಮಧಾರಿ ಅಭಿವೃದ್ಧಿ ಒಕ್ಕೂಟದ ಅಧ್ಯಕ್ಷ ನಾಗೇಶ ನಾಯ್ಕ ಆಚಾ,ಗುತ್ತಿಗೆದಾರ ಬಾಲಕೃಷ್ಣ ನಾಯ್ಕ ಉಪಸ್ಥಿತರೀರಲಿದ್ದಾರೆ ಎಂದರು.

ಈ ವೇಳೆಯಲ್ಲಿ ಆರ್ಯ (ಈಡಿಗ) ನಾಮಧಾರಿ ಸಮಾಜ ಶ್ರೀ ಕೇದಗಿಯಮ್ಮಾ ದೇವಸ್ಥಾನ ಅಭಿವೃದ್ಧಿ ಕಮಿಟಿ ಅಧ್ಯಕ್ಷ ವೆಂಕಪ್ಪ ಟಿ. ನಾಯ್ಕ,ಪ್ರಭಾಕರ್ ನಾಯ್ಕ,ಶ್ರೀಪಾದ ನಾಯ್ಕ, ಕೃಷ್ಣ ನಾಯ್ಕ,ಸಂತೋಷ್ ನಾಯ್ಕ,ರಾಜು ನಾಯ್ಕ,ಉದಯ್ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.


Leave a Reply