Namadhari Suggi|ಕೋಮು ಸೌಹಾರ್ದತೆಗೆ ಸಾಕ್ಷಿಯಾದ ಬೊಬ್ರುವಾಡ ನಾಮಧಾರಿ ಸುಗ್ಗಿ ಉತ್ಸವ

Spread the love

ಅಂಕೋಲಾ: ಇಂದು ಅದ್ದೂರಿಯಿಂದ ಚಾಲನೆಗೊಂಡ ನಾಮಧಾರಿ ಸಮಾಜದ ಸುಗ್ಗಿ ಉತ್ಸವವು ಬೊಬ್ರುವಾಡ ಗ್ರಾಮದ ಉರ್ದು ಶಾಲೆಯ ಹಿಂಬಾಗದ ದರ್ಗಾಕ್ಕೆ (ಪಳ್ಳಿ) ಗೌರವಸಲ್ಲಿಸಿ ಸುಗ್ಗಿ ಕುಣಿತ ಪ್ರದರ್ಶಿಸುವ ಮೂಲಕ ಕೋಮು ಸೌಹಾರ್ದತೆಗೆ ಸಾಕ್ಷಿಯಾಯಿತು.

ಹೌದು… ತಾಲೂಕಿನ ಪಾರಂಪರಿಕ ಆಚರಣೆ ಹಾಗೂ ಧಾರ್ಮಿಕ ಹಿನ್ನೆಲೆಯುಳ್ಳ  ನಾಮಧಾರಿ ಸಮಾಜದ ಸುಗ್ಗಿ ಉತ್ಸವವು ಬೊಬ್ರುವಾಡ ಗ್ರಾಮದ ಕೆದಗಿಯಮ್ಮ(ಕೋಲುಮಂಡ) ದೇವಸ್ಥಾನದಲ್ಲಿ ಅದ್ದೂರಿಯಿಂದ ಚಾಲನೆಗೊಂಡಿತು.

ಸುಗ್ಗಿಯ ಪ್ರಪ್ರಥಮ ದಿನವಾದ ಇಂದು ಸ್ಥಳೀಯ ದೇವರಾದ ಬೊಬ್ರುದೇವಸ್ಥಾನ ಹಾಗೂ ಗ್ರಾಮದ ಉರ್ದು ಶಾಲೆಯ ಹಿಂಬಾಗವಿರುವ ದರ್ಗಾದ ಮುಂದೆ ನೃತ್ಯ ಪ್ರದರ್ಶಿಸುವ ಮೂಲಕ ಕೋಮು ಸೌಹಾರ್ದತೆಗೆ ಸಾಕ್ಷಿಯಾಯಿತು.ಇಸ್ಲಾಮ್ ಧರ್ಮದ ರಂಜಾನ್ ತಿಂಗಳು ಪ್ರಾರಂಭವಾಗಿದ್ದು,ಪ್ರಾರ್ಥನೆಗೆ ಬಂದಿದ್ದ  ಮುಸ್ಲಿಮರು ಸುಗ್ಗಿ ಕುಣಿತವನ್ನು ಕುಣಿತವನ್ನು ವೀಕ್ಷಿಸಿ ಗೌರವಿಸಿದರು.

ನಂತರದಲ್ಲಿ ಶಾಂತಾದುರ್ಗಾ ದೇವಸ್ಥಾನದಲ್ಲಿ ಸುಗ್ಗಿ ಕುಣಿಯ ಪ್ರದರ್ಶಿಸಿ ಶಾಂತಾದುರ್ಗಾ ದೇವರ ರಥದೊಂದಿಗೆ ತೆಂಕಣಕೇರಿಯ ಶಂಕರನಾರಾಯಣ ದೇವಸ್ಥಾನಕ್ಕೆ ತೆರಳಿ ಅಲ್ಲಿಯೂ ಸುಗ್ಗಿ ಕುಣಿತ ಪ್ರದರ್ಶಿಸಿ ಮರಳಿ ಕುಂಬಾರಕೇರಿ,ಕದಂಬೇಶ್ವರ,ಬಂಡಿಕಟ್ಟೆ, ಗಣಪತಿ ದೇವಾಸ್ಥಾನ ಹಾಗೂ ತಾಲೂಕಿನ ದೊಡ್ಡ ದೇವರಾದ ವೆಂಕಟರಮಣ ದೇವಸ್ಥಾನದ ಮುಂದೆ ಸುಗ್ಗಿ ಕುಣಿತ ಪ್ರದರ್ಶಿಸಲಾಯಿತು.

ಈ ಸಂದರ್ಭದಲ್ಲಿ ನಾಮಧಾರಿ ಸಮಾಜದ ಹಲವರು ಬಣ್ಣ,ಬಣ್ಣದ ಉಡುಗೆ-ತೊಡುಗೆಗಳನ್ನು ತೊಟ್ಟು,ಆಕರ್ಷಣೀಯ ತುರಾಯಿಗಳನ್ನು ಧರಿಸಿ ನೋಡುಗರ ಕಣ್ಣಿಗೆ ರಸದೌತಣವನ್ನು ನೀಡಿದರು.

Leave a Reply

Your email address will not be published. Required fields are marked *