ಅಂಕೋಲಾ: ಜೀವನದಲ್ಲಿ ಉತ್ತಮ ಶಿಸ್ತು ಹೊಂದಿದ್ದರೆ ಮಾತ್ರ ಯಶಸ್ಸುಗಳಿಸಲು ಸಾಧ್ಯ ಎಂದು ಪುರಸಭೆ ಮಾಜಿ ಅಧ್ಯಕ್ಷ ಅರುಣ ನಾಡಕರ್ಣಿ ಹೇಳಿದರು.

ಅವರು ಗೆಳೆಯರ ಬಳಗ ಅಡ್ಲೂರು ಹಾಗೂ ಉರನಾಗರಿಕರ ಸಂಯುಕ್ತ ಆಶ್ರಯದಲ್ಲಿ ತೃತೀಯ ವರ್ಷದ ಜಿಲ್ಲಾ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂದಿನ ದಿನಗಳಲ್ಲಿ ಮಕ್ಕಳಿಗೆ ನೌಕರಿಯ ಉದ್ದೇಶದಿಂದ ಶಾಲೆಗೆ ಕಳುಹಿಸುತ್ತಿರುವುದರಿಂದ ಕ್ರೀಡೆಯಲ್ಲಿ ಸಾಧನೆ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ, ತಾಲೂಕಿಗೆ ಅಗಸೂರು ಗ್ರಾಪಂ ಕೊಡುಗೆ ಅಪಾರ ಈ ಬಾಗದ ಜನರ ತ್ಯಾಗದ ಫಲವಾಗಿ ಇಂದು ಅಂಕೋಲಾ ಕಾರವಾರ ತಾಲೂಕಿಗೆ ಕುಡಿಯಲು ನೀರು ದೊರೆಯುತ್ತಿದೆ.ಜನಪ್ರತಿನಿಧಿಗಳಾಗಿ ಕೆಲಸ ಸಿಕ್ಕಿದಾಗ ನಮ್ಮ ಜವಾಬ್ದಾರಿಯನ್ನು ಮೊದಲು ಅಭ್ಯಾಸ ಮಾಡುತ್ತಿದ್ದೆವು, ಚುನಾಯಿತ ಪ್ರತಿನಿಧಿಗಳ ಮೊದಲ ಕೆಲಸವೇ ಜನಸಾಮಾನ್ಯರಿಗೆ ಮೂಲಸೌಕರ್ಯಗಳನ್ನು ಒದಗಿಸುವ ದ್ಯೇಯ ಹೊಂದಿರಬೇಕು. ಸಾಮಾಜಿಕ ಒಳಿತಿಗಾಗಿ ಕೆಲಸ ಮಾಡಿದರೆ ಮಾತ್ರ ಜನಮಾನಸದಲ್ಲಿ ನೆಲೆಸಲು ಸಾಧ್ಯ ಎಂದರು.

ಅಂಕೋಲಾ ತಾಲೂಕಿಗೆ ನಾಯಕತ್ವದ ಕೊರತೆಯಿದೆ, ರಾಜ್ಯ ಮಟ್ಟದಲ್ಲಿ ಗುರುತಿಸಿ ಕೊಂಡಿರುವ ಹಾಗೂ ರಾಜ್ಯ ರಾಜಕಾರಣದಲ್ಲಿ ತನ್ನದೆಯಾದ ಸಾಮಾರ್ಥ್ಯ ಹೊಂದಿರುವ ಗೋಪಾಲಕೃಷ್ಣ ನಾಯಕ ಅತೀ ಚಿಕ್ಕವಯಸ್ಸಿನಲ್ಲೇ ಕೆಪಿಸಿಸಿ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸಿದ್ದರು, ಉತ್ತಮ ಮನೋಭಾವನೆಯನ್ನು ಹೊಂದಿರುವ ಇವರು,ಪ್ರತಿಯೊಬ್ಬರ ಸಮಸ್ಯೆಗಳಿಗೂ ಪಕ್ಷಭೇದವಿಲ್ಲದೆ ಸಹಕರಿಸುತ್ತಿದ್ದಾರೆ ಮುಂದಿನ ದಿನಗಳಲ್ಲಿ ಇವರಿಗೆ ಉತ್ತಮ ಗೌರವಗಳು ದೊರೆತು ದೊಡ್ಡಮಟ್ಟದ ನಾಯಕತ್ವಗಳು ಲಭಿಸಲಿ ಎಂದು ಹಾರೈಸುತ್ತೇನೆ ಎಂದರು.

ಕಾರ್ಯಕ್ರಮದ ಉದ್ಗಾಟಕರಾಗಿ ಆಗಮಿಸಿ ಮಾತನಾಡಿದ ಮಾಜಿ ಜಿಪಂ ಸದಸ್ಯ ಜಿ ಎಂ ಶೆಟ್ಟಿ ಕ್ರೀಡೆಯಲ್ಲಿ ಅನುಭವಿಸುವಂತ ಅನೇಕ ವಿಷಯಗಳನ್ನು ಬದುಕಿನಲ್ಲಿಯೂ ಅಳವಡಿಸಿಕೊಂಡರೆ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ, ಉತ್ತಮ ನಾಯಕನಾಗಿ ಹೊರಹೊಮ್ಮಲು ಕ್ರೀಡೆ ಮುಖ್ಯ ಪಾತ್ರವಹಿಸುತ್ತದೆ. ಸೌಹಾರ್ದತೆಯನ್ನು ಹೆಚ್ಚಿಸಲು ಇಂತಹ ಕ್ರೀಡಾಕೂಟ ಸಹಕಾರಿ ಎಂದರು.

ಅಂಕಣ ಉದ್ಗಾಟಿಸಿ ಮಾತನಾಡಿದ ಜಿಪಂ ಮಾಜಿ ಸದಸ್ಯ ಪ್ರದೀಪ್ ನಾಯಕ ದೇವರಭಾವಿ ಅಡ್ಲೂರಿಂತಹ ಹಳ್ಳಿಯಲ್ಲಿ ಜಿಲ್ಲಾಮಟ್ಟದ ವಾಲಿಬಾಲ್ ಕ್ರೀಡಾಕೂಟವನ್ನು ಅಯೋಜಿಸುತ್ತಿರುವುದು ಶ್ಲಾಘನೀಯ, ಇಂತಹ ಕ್ರೀಡಾಕೂಟದಿಂದ ಗ್ರಾಮೀಣ ಬಾಗದ ಕ್ರೀಡಾಪಟುವಿನ ಪ್ರತಿಭೆಯನ್ನು ಹೊರಹಾಕಲು ಸಾಧ್ಯ ಎಂದರು. ಕ್ರೀಡೆ ಕೇವಲ ಮನರಂಜನೆಗಾಗಿ ಅಲ್ಲದೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗಲಿದೆ ಎಂದರು.ಮುಂದಿನ ದಿನಗಳಲ್ಲಿ ಸ್ಥಳೀಯ ಯುವಕರು ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳವಂತಾಗಲಿ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಉದ್ಯಮಿ ಮಂಗಲದಾಸ್ ಕಾಮತ್ ಮಾತನಾಡಿ ಕ್ರೀಡೆಯಲ್ಲಿ ಶ್ರದ್ಧೆಯಿದ್ದರೆ ಮಾತ್ರ ಉತ್ತಮ ಕ್ರೀಡಾಪಟುವಾಗಿ ಹೊರಹೊಮ್ಮಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಉತ್ತಮ ಕ್ರೀಡಾಂಗಣ ನಿರ್ಮಿಸಿ ಪಂದ್ಯಾವಳಿಯನ್ನು ಆಯೋಜಿಸಿದ ಸಂಘಟಕರ ಪಾತ್ರ ಶ್ಲಾಘನೀಯ. ಸ್ಥಳೀಯ ಯುವಕರ ಶ್ರಮವೇ ಇಂದಿನ ಪಂದ್ಯಾವಳಿಯ ಯಶಸ್ಸಿಗೆ ಕಾರಣವಾಗಿದೆ.ಮುಂದಿನ ದಿನಗಳಲ್ಲಿ ಇದೇ ಸ್ಥಳದಲ್ಲಿ ರಾಜ್ಯ ಮಟ್ಟದ ಪಂದ್ಯಾವಳಿ ಅಯೋಜನೆಗೊಳ್ಳುವುದು ಯಾವುದೇ ಸಂಶಯವಿಲ್ಲ ಎಂದರು.

ಪುರಸಭೆ ಅಧ್ಯಕ್ಷ ಸೂರಜ್ ನಾಯ್ಕ, ನಾಡುಮಾಸ್ಕೆರಿ ಗ್ರಾಪಂ ಅಧ್ಯಕ್ಷ ಈಶ್ವರ ಗೌಡ, ವಾಸರ ಕುದ್ರಿಗೆ ಗ್ರಾಪಂ ಅಧ್ಯಕ್ಷ ಪ್ರದೀಪ ನಾಯಕ,ಕೆಪಿಸಿಸಿ ಮಾಜಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ, ಶಿಕ್ಷಕ ಹರೀಶ ನಾಯಕ,ಅಗಸೂರು ಗ್ರಾಪಂ ಉಪಾಧ್ಯಕ್ಷ ಯಶವಂತ ಗೌಡ ಪ್ರಮುಖರಾದ ಶಂಕರ ಗೌಡ ಬೆಳಸೆ, ಜಿ ಡಿ ಗೋವಿಂದ ಕುಮಾರ್,ಮುದಗಾ, ರಾಮದಾಸ ನಾಯಕ,ಬಿರಣ್ಣ ನಾಯಕ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು.
ನಿವೃತ್ತ ಶಿಕ್ಷಕ ಬಿರಣ್ಣ ನಾಯಕ,ಶಿಕ್ಷಕ ಆನಂದು ನಾಯಕ ನಿರೂಪಿಸಿದರು, ಸಂತೋಷ ನಾಯಕ ವಂದಿಸಿದರು.


Leave a Reply