ಅಂಕೋಲಾ: ತಾಲೂಕಿನ ವಂದಿಗೆ ಗ್ರಾಪಂ ವ್ಯಾಪ್ತಿಯ ಬೊಳೆಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಅಮೃತ ಮಹೋತ್ಸವದ ಲಾಂಛನವನ್ನು ಸ್ವಾಗತ ಸಮಿತಿಯ ಅಧ್ಯಕ್ಷ ಹಾಗೂ ವಂದಿಗೆ ಗ್ರಾಪಂ ಅಧ್ಯಕ್ಷ ಸತೀಶ ವೆಂಕಣ್ಣ ನಾಯಕ (ಪುಟ್ಟು) ಬಿಡುಗಡೆಗೊಳಿಸಿ ಕಾರ್ಯಕ್ರಮದ ಯಶಸ್ಸಿಗೆ ಸರ್ವರ ಸಹಕಾರವನ್ನು ಕೋರಿದರು.

ಬೊಳೆ ಶಾಲೆಯ ಹಿರಿಯ ವಿದ್ಯಾರ್ಥಿ ವಿಮಲಾ ಬೀರಣ್ಣ ನಾಯಕರವರು ತಮ್ಮ ಶಾಲಾ ಅನುಭವಗಳನ್ನು ಹಂಚಿಕೊಂಡರು. ಗ್ರಾಮ ಪಂಚಾಯಿತಿ ನಿಕಟ ಪೂರ್ವ ಅಧ್ಯಕ್ಷೆ ಪುಷ್ಪಲತಾ ಆರ್ ನಾಯಕ, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷೆ ಶ್ವೇತಾ ಪ್ರಶಾಂತ ಆಗೇರ, ವಿಶ್ರಾಂತ ಪ್ರಾಚಾರ್ಯ ಗೋಪಾಲಕೃಷ್ಣ ರಾಮ ನಾಯಕ, ಹಿರಿಯರಾದ ಚಂದ್ರಹಾಸ ಕೃಷ್ಣ ನಾಯಕ, ಗೋವಿಂದ ನಾಯಕ, ಉದಯ ನಾಯಕ, ವಿಶ್ರಾಂತ ಶಿಕ್ಷಕಿಯರಾದ ನಾಗವೇಣಿ ಬಿ ನಾಯಕ, ನಯನಾ ವೆಂಕಟರಮಣ ನಾಯಕ, ಶಾಲಾ ಎಸ್‌ಡಿಎಂಸಿ ಸದಸ್ಯರಾದ ಸುಭಾಷ ಗುನಗಾ, ಪ್ರಶಾಂತ ನಾಯ್ಕ ಮುಂತಾದವರು ಉಪಸ್ಥಿತರಿದ್ದರು. ಶಾಲಾ ಮುಖ್ಯಾಧ್ಯಾಪಕ ಜಗದೀಶ ಜಿ ನಾಯಕ ಹೊಸ್ಕೇರಿ ಸ್ವಾಗತಿಸಿದರು. ಶಿಕ್ಷಕಿ ಸವಿತಾ ಆನಂದು ನಾಯ್ಕವಂದಿಸಿದರು. ಶಾಲಾ ಅಮೃತ ಮಹೋತ್ಸವದ ಲಾಂಛನವನ್ನು ಇತಿಹಾಸ ಸಂಶೋಧಕ ಶ್ಯಾಮಸುಂದರ ಗೌಡ ಸುಂದರವಾಗಿ ವಿನ್ಯಾಸಗೊಳಿಸಿದ್ದರು.


Leave a Reply