ಶಿರೂರು ದುರಂತದಲ್ಲಿ ದೊರೆತ ಶ್ವಾನ; “ಪೃಥ್ವಿಯ” ಮ್ಯಾರಥಾನ್ ಓಟಕ್ಕೆ ಉತ್ತರಕನ್ನಡಿಗರು ಫಿಧಾ!

Spread the love

ಕಾರವಾರ: ಶಿರೂರು ಗುಡ್ಡ ಕುಸಿತದಲ್ಲಿ ಮಾಲೀಕರನ್ನು ಕಳೆದುಕೊಂಡು ಅನಾಥವಾಗಿದ್ದ ಶ್ವಾನ ‘ಪ್ರಥ್ವಿ’ ಇಂದು ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಮ್ಯಾರಥಾನ್ ನಲ್ಲಿ ಐದು ಕಿಲೋ ಮೀಟರ್ ಸಂಚರಿಸಿ ಜನಮೆಚ್ಚುಗೆಗೆ ಪಾತ್ರವಾಗಿದೆ.

ಹೌದು…ಜುಲೈ 16 ರಂದು ನಡೆದಿದ್ದ ಗುಡ್ಡ ಕುಸಿತ ಪ್ರಕರಣದಲ್ಲಿ ಲಕ್ಷ್ಮಣ್ ನಾಯ್ಕ ಕುಟುಂಬ ಸೇರಿ ಹನ್ನೊಂದು ಮಂದಿ ಮೃತಪಟ್ಟಿದ್ದರು,ದುರ್ಘಟನೆಯಲ್ಲಿ ಲಕ್ಷ್ಮಣ ನಾಯ್ಕ ಸಾಕಿದ ಶ್ವಾನ ಅನಾಥವಾಗಿ ಗುಡ್ಡ ಕುಸಿತ ದುರ್ಘಟನೆಯ ಸ್ಥಳದಲ್ಲಿ ಮಾಲೀಕರಿಗೆ ಕಾದು ಕುಳಿತಿರುವ ಶ್ವಾನದ ರೋಧನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಮಾಲೀಕರಿಗೆ ಹುಡುಕಾಡಿ ರೋದಿಸುತ್ತಿದ್ದ ಶ್ವಾನವನ್ನು ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ದತ್ತು ಪಡೆದಿದ್ದರು.ಅದಕ್ಕೆ ಪೃಥ್ವಿ ಎಂದು ಮರುನಾಮಕರಣ ಮಾಡಿ ಪೊಲೀಸ್ ತರಬೇತಿಯನ್ನು ಸಹ ನೀಡಲಾಗಿತ್ತು, ಅಂದು ಮಾಲೀಕರನ್ನು ಕಳೆದುಕೊಂಡು ಹವಹವಣಿಸುತ್ತಿದ್ದ ಶ್ವಾನ ಇಂದು ಎಸ್ಪಿ ಆಶ್ರಯದಲ್ಲಿ ಪೊಲೀಸ್ ರನ್ 2025 ಮ್ಯಾರಥಾನ್ ನಲ್ಲಿ ಭಾಗವಹಿಸಿ ಐದು ಕಿಲೋಮೀಟರ್ ಸಂಚರಿಸಿ ಜನಮೆಚ್ಚುಗೆಗೆ ಪಾತ್ರವಾಗಿದೆ.

ಮ್ಯಾರಥಾನ್ ನಲ್ಲಿ ಬಾಗವಹಿಸಿದ ಶ್ವಾನ ಪೃಥ್ವಿಗೆ ಶಾಸಕ ಸತೀಶ್ ಸೈಲ್ ಪದಕಹಾಕಿ ಗೌರವಿಸಿದರು.ಏನೇ ಇರಲಿ ಅನಾಥ ಶ್ವಾನವನ್ನು ದತ್ತು ಪಡೆದು ಉತ್ತಮ ತರಬೇತಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಅವರ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

ಮಾಧಕ ದ್ರವ್ಯ ಹಾಗೂ ಸೈಬರ್ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಪೊಲೀಸ್ ರನ್ 2025 5k ಮ್ಯಾರಥಾನ್ ಅಯೋಜಿಸಿದ್ದು,ಈ ಕಾರ್ಯಕ್ರಮದಲ್ಲಿ ಸರಿಸುಮಾರು ಎರಡು ಸಾವಿರ ಅಧಿಕ ಕ್ರೀಡಾಪಟುಗಳು ಬಾಗವಹಿಸಿ ಗುರಿ ಮುಟ್ಟಿದ್ದಾರೆ,ಅದರೊಂದಿಗೆ ನಮ್ಮ ‘ಪೃಥ್ವಿ’ಕೂಡ ಹೆಜ್ಜೆ ಹಾಕಿದ್ದು ಮತ್ತಷ್ಟು ಹುಮ್ಮಸ್ಸು ನೀಡಿದೆ-ಎಂ ನಾರಾಯಣ ಐಪಿಎಸ್,ಪೊಲೀಸ್ ವರಿಷ್ಠಾಧಿಕಾರಿ ಉತ್ತರ ಕನ್ನಡ ಜಿಲ್ಲೆ

Leave a Reply

Your email address will not be published. Required fields are marked *