ಆರ್ ವಿ ದೇಶಪಾಂಡೆಯವರ 78 ನೇ ಜನ್ಮದಿನ ಆಚರಣೆ. 

Spread the love

ಅಂಕೋಲಾ:ಹಳಿಯಾಳ ಶಾಸಕ ಕರ್ನಾಟಕ ರಾಜ್ಯದ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್ ವಿ ದೇಶಪಾಂಡೆಯವರ 78 ನೇ ಹುಟ್ಟುಹಬ್ಬವನ್ನು ತಾಲೂಕಾಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು -ಹಂಪಲನ್ನು ನೀಡುವುದರ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾಂಡುರಂಗ ಗೌಡ ಮಾತನಾಡಿ ಸಜ್ಜನ ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ದೇಶಪಾಂಡೆ ಸಾಹೇಬರು ಸತತವಾಗಿ 8 ಬಾರಿ ಶಾಸಕರಾಗಿ ಆಯ್ಕೆಯಾಗಿ,ಸರಕಾರದ ವಿವಿಧ ಖಾತೆಯ ಸಚಿವರಾಗಿ ಹಾಗೆಯೇ ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನು ಸಮರ್ಥವಾಗಿ ನಿಬಾಯಿಸಿ ಇಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿರುವ ಮುತ್ಸದ್ದಿ ರಾಜಕಾರಣಿಯಾಗಿದ್ದಾರೆ. ವಿ ಆರ್ ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಸ್ಥಾಪಿಸಿ ಅದರ ಮೂಲಕ ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗ ತರಬೇತಿಯನ್ನು ನೀಡಿ ಜೀವನ ಕಲ್ಪಿಸಿದವರು ಅವರಿಗೆ ದೇವರು ಮತ್ತಷ್ಟು ಆರೋಗ್ಯ ಆಯಸ್ಸನ್ನು ನೀಡಿ ಕಾಪಾಡಲಿ ಎಂದು ಹಾರೈಸಿದರು.

ನಂತರದಲ್ಲಿ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಣ್ಣು ಹಂಪಲನ್ನು ವಿತರಿಸಿ, ಕೇಕ್ ಕತ್ತರಿಸಿ ಸಿಹಿ ಹಂಚಿ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಈ ಸಂದರ್ಭದಲ್ಲಿ  ಪ್ರಮುಖರಾದ ರಮಾನಂದ ನಾಯಕ್, ಸುಜಾತಾ  ಗಾಂವಕರ, ವಿನೋದ್ ಬಾಸ್ಕೋಡ್,ಉದಯ ನಾಯಕ, ಬಿಡಿ ನಾಯ್ಕ, ನವಾಜ್ ಶೇಖ್,ಸಂತೋಷ್ ನಾಯ್ಕ ಲೀಲಾವತಿ ನಾಯ್ಕ, ಜಿಎಂ ಶೆಟ್ಟಿ, ಶಂಕರ್ ಗೌಡ,  ಶಾಂತಿ  ಆಗೇರ ದೀಪಾ ನಾಯಕ್,ಸುರೇಶ್ ನಾಯ್ಕ  ಸೇರಿದಂತೆ ಇತರ ಪ್ರಮುಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *