ಹೊನ್ನಾವರ: ಪರಿಹಾರ ನೀಡದ ಹೊನ್ನಾವರ ಪಟ್ಟಣ ಪಂಚಾಯತ್ ಕಛೇರಿಯನ್ನು ಜಪ್ತಿ ಮಾಡುವಂತೆ ಹೊನ್ನಾವರ ಸಿವಿಲ್ ನ್ಯಾಯಾಲಯ ಆದೇಶ ಹೊರಡಿಸಿದ್ದು, ನ್ಯಾಯಾಲಯದ ಅಣತಿಯಂತೆ ಕೋರ್ಟ್ ಸಿಬ್ಬಂದಿಗಳು ಆದೇಶದ ಪ್ರತಿ ಹಿಡಿದು ಕಕ್ಷಿದಾರರೊಡನೆ ಪ.ಪಂ ಕಛೇರಿಗೆ ಆಗಮಿಸಿ ಜಪ್ತಿಗೆ ಮುಂದಾಗಿದ್ದಾರೆ.

ಏನಿದು ಪ್ರಕರಣ…2014ರಲ್ಲಿ ಮಳೆಗಾಲದ ಸಮಯದಲ್ಲಿ ಪ.ಪಂ ಸಂಬಂಧಿಸಿದ ಚರಂಡಿಯಿಂದ ಅಂಗಡಿಗೆ ನೀರು ನುಗ್ಗಿದ್ದ ಪರಿಣಾಮ ಅಂಗಡಿಯ ಸಾಮಾನು ಸರಂಜಾಮಗಳಿಗೆ ಹಾನಿಯುಂಟಾಗಿತ್ತು, ಇದರಿಂದ ಪರಿಹಾರ ನೀಡುವಂತೆ ಅಂಗಡಿ ಮಾಲೀಕ ಶ್ರೀಧರ್ ನಾಯಕ್ ಹಲವು ಬಾರಿ ಪ.ಪಂ ಮುಖ್ಯಾಧಿಕಾರಿ ಬಳಿ ಮನವಿ ಮಾಡಿದ್ದರು.ಪರಿಹಾರ ನೀಡದಿದ್ದ ಕಾರಣ ಪ.ಪಂ. ವಿರುದ್ದ ನ್ಯಾಯಲಯದ ಮೊರೆ ಹೊಗಿದ್ದ ಅಂಗಡಿ ಮಾಲೀಕನಿಗೆ ಹತ್ತು ತಿಂಗಳ ಹಿಂದೆ ಪರಿಹಾರ ನೀಡುವಂತೆ ಆದೇಶ ನೀಡಿದರೂ ಪರಿಹಾರ ನೀಡದ ಹಿನ್ನಲೆ ಮಂಗಳವಾರ ಮುಂಜಾನೆ ಪ.ಪಂ. ಕಛೇರಿಗೆ ಆಗಮಿಸಿದ ನ್ಯಾಯಲಯದ ಸಿಬ್ಬಂದಿ ಜಪ್ತಿಗೆ ಮುಂದಾದರು.

ಈ ಕುರಿತು ಪ್ರತಿಕ್ರಿಯೆ ನೀಡಿದ ಪ.ಪಂ. ಮುಖ್ಯಾಧಿಕಾರಿ ಯೇಸು ಬೆಂಗಳೂರು ತಡೆಯಾಜ್ಞೆಗೆ ಅರ್ಜಿ ಸಲ್ಲಿಸಿದ್ದರಿಂದ ಕೊರ್ಟ ತಾತ್ಕಲಿಕ ತಡೆಯಾಜ್ಞೆ ನೀಡಿದೆ ಎಂದು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.


Leave a Reply