ಕಾರವಾರ: ಮಾರ್ಚ್ 22 ರಂದು ಆರಂಭವಾಗುವ ಭಾರತದ ಅತ್ಯುನ್ನತ ಪಂದ್ಯಾವಳಿ ಹಾಗೂ ಪ್ರಪಂಚದ ಅತ್ಯುತ್ತಮ ಮನರಂಜನೆಯನ್ನು ನೀಡುವ ಏಕೈಕ ಕ್ರಿಕೆಟ್ ಟೂರ್ನಿಯಾಗಿ ಐಪಿಎಲ್ ಹೊರಹೋಮ್ಮಿದೆ. ಟೂರ್ನಿಯುದ್ದಕ್ಕೂ ಮನರಂಜನೆಗಿಂತ ಬೆಟ್ಟಿಂಗ್ ದಂದೆಯೇ ಬಲು ಜೋರಾಗಿದ್ದು ಯುವಕರು ಜೀವನವನ್ನು ಹಾಳುಮಾಡಿಕೊಳ್ಳುತ್ತಿರುವುದನ್ನು ಗಮನಿಸಿದ ಎಸ್ಪಿ ಎಂ ನಾರಾಯಣ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬೆಟ್ಟಿಂಗ್ ಭೂತದಿಂದ ಹಣ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಎದುರಾಗುತ್ತಿರುವ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ದಂದೆಗೆ ಕಡಿವಾಣ ಹಾಕಲು ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಹೌದು….ಐಪಿಎಲ್ ಬಂತೆಂದರೆ ಸಾಕು 2 ತಿಂಗಳ ಕಾಲ ಯುವಕರು ಫುಲ್ ಬ್ಯುಸಿ. ಹಳ್ಳಿ ಹಳ್ಳಿಗಳಲ್ಲೂ ಬೆಟ್ಟಿಂಗ್‌ದೇ ಮಾತು. ಬೆಟ್ಟಿಂಗ್ ದಂಧೆಗೆ ಬಲಿಯಾಗಿ ಯುವಕರು ತಮ್ಮ ಹಣ ಮಾತ್ರವಲ್ಲ ಭವಿಷ್ಯವನ್ನೇ ಕಳೆದುಕೊಳ್ತಿದ್ದಾರೆ. ಕೋಟ್ಯಂತರ ರೂಪಾಯಿ ಹಣದ ವ್ಯವಹಾರ ನಡೆಯುವ ಈ ಬೆಟ್ಟಿಂಗ್ ದಂಧೆಗೆ ಕಡಿವಾಣ ಹಾಕಲು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಬೆಟ್ಟಿಂಗ್ ಮಾಡುವವರಿಗೆ ಖಡಕ್ ವಾರ್ನಿಂಗ್ ನೀಡಿದ್ದು,ಪ್ರತಿ ಪೊಲೀಸ್ ಠಾಣೆಗಳಿಗೆ ಹದ್ದಿನ ಕಣ್ಣಿಡಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಬೆಟ್ಟಿಂಗ್ ಮಾಡಿ ಹಣಕಳೆದುಕೊಂಡು ಜೀವನ ಹಾಳುಮಾಡಿಕೊಳ್ಳುತ್ತಿರುವ ನಮ್ಮ ಯುವಕರು ಸಾಲಗಾರರಾಗುತ್ತಿದ್ದಾರೆ, ಕೆಲವರು ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ,ಇದನ್ನು ಸಂಪೂರ್ಣವಾಗಿ ತೋಲಗಿಸಲು ಪೊಲೀಸ್ ಇಲಾಖೆ ಬೆಟ್ಟಿಂಗ್ನಲ್ಲಿ ತೊಡಗಿದ್ದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಿದ್ದೇವೆ.ಅನುಮಾನಾಸ್ಪದವಾಗಿ ಕಂಡು ಬಂದರೆ ಅಂತವರ ಮೊಬೈಲ್ ಅನ್ನು ಮುಟ್ಟುಗೋಲು ಹಾಕಿಕೊಂಡು ಸೂಕ್ತ ಕ್ರಮ ಕೈಗೊಳ್ಳಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ.


Leave a Reply