BATKAL|ಕದ್ದವನಿಂದಲೇ ಕಂಪ್ಲೇಂಟ್!ಮುಖವಾಡ ಧರಿಸಿ ಅಜ್ಜಿಯಬಳಿಯೇ ದರೋಡೆ ಮಾಡಿದ ಖತರ್ನಾಕ್ ಮೊಮ್ಮಗ!

Spread the love

ಭಟ್ಕಳ: ಯಾರು ಇಲ್ಲದ ವೇಳೆ ಮುಖವಾಡ ಧರಿಸಿಬಂದು ಅಜ್ಜಿಯ ಬಳಿಯಿದ್ದ ಚಿನ್ನಾಭರಣವನ್ನು ದೋಚಿ,ಆತನೇ ಪೊಲೀಸ್ ಠಾಣೆಗೆ ಬಂದು ಕಂಪ್ಲೇಂಟ್ ನೀಡಿದ್ದ ಖತರ್ನಾಕ್ ಮೊಮ್ಮಗನನ್ನು ಭಟ್ಕಳ ನಗರ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೌದು…ಮಾರ್ಚ್ 17, ರಂಜಾನ್ ಪ್ರಾರ್ಥನೆಯ ಸಮಯ ಮನೆಯವರೆಲ್ಲಾ ಜೊತೆಯಾಗಿ ಸೆರಿ ಉಪಹಾರ ಸೇವಿಸಿ ಆ ಬಳಿಕ ಪುರುಷರು ಬೆಳಗ್ಗಿನ ನಮಾಝ್‌ಗೆ ಮಸೀದಿಗೆ ತೆರಳಿದರು. ಮಹಿಳೆಯರು ಪ್ರಾರ್ಥನೆಯಲ್ಲಿ ನಿರತರಾದರು. ಇದೇ ಸಮಯವನ್ನು ಉಪಯೋಗಿಸಿಕೊಂಡು ಮುಖವಾಡವನ್ನು ಮುಚ್ಚಿಕೊಂಡಿದ್ದ ಅಪರಿಚಿತ ವ್ಯಕ್ತಿಯೋರ್ವ ಮನೆಗೆ ನುಗ್ಗಿ ವಯೋವೃದ್ಧೆಯ ಬಾಯಿಯನ್ನು ಮುಚ್ಚಿ, ಕತ್ತು ಹಿಸುಕಿ ಚಿನ್ನಾಭರಣಗಳನ್ನು ದೋಚಿ ಪರಾರಿಯಾದ ಬಗ್ಗೆ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ದರೋಡೆ ಬಗ್ಗೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಭಟ್ಕಳ ನಗರ ಠಾಣೆ ಪೊಲೀಸ್ ಉಪನಿರೀಕ್ಷಕ ನವೀನ್ ನಾಯ್ಕ್ ನೇತೃತ್ವದ ಪೊಲೀಸರ ತಂಡ ಆರೋಪಿಯ ಪತ್ತೆಗೆ ಬಲೆ ಬೀಸಿಬೀಸಿದರು. ಮನೆಯಲ್ಲಿದ್ದ ಸಿಸಿಟಿವಿಯನ್ನು ಪರಿಶೀಲನೆಯನ್ನು ನಡೆಸಿದರು. ಈ ವೇಳೆ ಕೃತ್ಯವು ಕೇವಲ 4 ನಿಮಿಷಗಳಲ್ಲಿ ನಡೆದಿದೆ ಎಂಬುವುದನ್ನು ಪತ್ತೆ ಹೆಚ್ಚಿದರು.

ದರೋಡೆಯ ಹಿನ್ನೆಲೆ ಸಂತ್ರಸ್ತೆಯ ಮೊಮ್ಮಗ ತಾಜಮ್ಮುಲ್ ಹಸನ್ ಅಸ್ಕೇರಿ(46) ಅಜ್ಜಿಯ ಪರವಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದನು. ಹಾಗೆಯೇ ಅಪರಾಧಿಯನ್ನು ಪತ್ತೆಹಚ್ಚಲು ಆತ ಪೊಲೀಸ್ ಅಧಿಕಾರಿಗಳಿಗೆ ಸಹಾಯ ಮಾಡುವಂತೆ ನಟಿಸಿದನು.ಆದರೆ, ತನಿಖೆ ಮುಂದುವರಿದಂತೆ ಪೊಲೀಸರು ನಟೌಂಕಿ ಮೊಮ್ಮಗನನ್ನು ಬಂಧಿಸಿದ್ದಾರೆ.

ಯಾರು ಇಲ್ಲದ ಸಂದರ್ಭದಲ್ಲಿ ಮುಖವಾಡ ಧರಿಸಿ ಅಜ್ಜಿಯ ಕತ್ತು ಹಿಸುಕಿ ಚಿನ್ನಾಭರಣವನ್ನು ಎಗರಿಸಿ,ಚಿನ್ನಾಭರಣವನ್ನು ಬ್ಯಾಂಕಿನಲ್ಲಿ ಅಡುವಿಟ್ಟು, ಅಜ್ಜಿಯ ಅಭರಣವನ್ನು ಯಾರೋ ದರೊಡೆಕೋರರು ದರೋಡೆಮಾಡಿದ್ದಾರೆ ಎಂದು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ತಾನೇ ದೂರು ದಾಖಲಿಸಿದ್ದ ಮೊಮ್ಮಗನನ್ನು ನಿಜ ಅವತಾರವನ್ನು ಪಿಎಸೈ ನವೀನ ನಾಯ್ಕ ನೇತೃತ್ವದ ತಂಡ ಬಯಲುಮಾಡಿದ್ದು ನಟೌಂಕಿ ತಾಜಮ್ಮುಲ್ ಹಸನ್ ಅಸ್ಕೇರಿಯನ್ನು ಕಂಬಿ ಎಣಿಸುವಂತೆ ಮಾಡಿದ್ದಾರೆ.

ಪಿಎಸೈ ನವೀನ್ ನಾಯ್ಕ ಚಾಣಾಕ್ಷತನದಿಂದ ಪ್ರಕರಣವನ್ನು ಸುರಳಿತವಾಗಿ ಬಗೆಹರಿಸಿದ್ದರಿಂದ ತಾಲೂಕಿನಾದ್ಯಂತ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ. ಎಸ್ಪಿ ಎಂ ನಾರಾಯಣ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *