‘ಅಂದರ್ ಬಾಹರ್’ ನಾಲ್ವರ ಬಂಧನ;ನಾಲ್ವರು ಎಸ್ಕೇಪ್!

Spread the love

ಯಲ್ಲಾಪುರ:ತಾಲೂಕಿನಲ್ಲಿ ‘ಅಂದರ್ ಬಾಹರ್’ ಜುಗಾರಿ ಆಡುತ್ತಿದ್ದ ನಾಲ್ವರನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದು, ನಾಲ್ಕು ಮಂದಿ ಎಸ್ಕೇಪ್ ಆಗಿದ್ದಾರೆ.

ಹೌದು…ತಾಲೂಕಿನ ಮಂಚಿಕೇರಿಯ ಬೆಡ್ತಿ ಸೇತುವೆಯ ಬಳಿ ಸಾರ್ವಜನಿಕ ಅರಣ್ಯ ಪ್ರದೇಶದಲ್ಲಿ ‘ಅಂದರ್ ಬಾಹರ್’ ಆಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯೊಂದಿಗೆ ದಾಳಿನಡೆಸಿದ ಯಲ್ಲಾಪುರ ಪಿಎಸೈ ಸಿದ್ದು ಗುಡಿ ನೇತೃತ್ವದ ತಂಡ ನಾಲ್ವರನ್ನು ಬಂಧಿಸಿದ್ದು, ನಾಲ್ವರು ಓಡಿ ಹೋಗಿದ್ದಾರೆ ಎನ್ನಲಾಗಿದೆ ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಎಂಟು ಮಂದಿಯ ಮೇಲೆ ಎಫ್ ಐ ಆರ್ ದಾಖಲಾಗಿದೆ.

ತಾಲೂಕಿನ ತಟಗಾರ ಕ್ರಾಸ್ ನಿವಾಸಿ ಮಂಜುನಾಥ್ ಅರ್ಜುನ್ ರಾವ್, ಮಂಜುನಾಥ್ ನಗರದ ಮಂಜುನಾಥ್ ಗೋಪಾಲ್ ನಾಯ್ಕ, ಮೊಹಮ್ಮದ್ ರಫೀಕ್ ಖಾನ್ ತಂದೆ ಉಸ್ಮಾನ್ ಖಾನ್ ಖಾಜಾ ಸಬಗೇರಿ, ನೂತನ ನಗರದ ಪ್ರಶಾಂತ್ ತಂದೆ ಮಾರುತಿ ರಾವೋಜಿ ಬಂಧಿತರಾಗಿದ್ದು,ತೆಲಂಗಾರದ ವಿದ್ಯಾದರ್ ಲಕ್ಷ್ಮಣ್ ಬಾಂದೇಕರ್,ವಜ್ರಳ್ಳಿಯ ಜಕ್ರಿಯ ಉಮರ್ ಮುಲ್ಲಾ ವಜ್ರಳ್ಳಿ,ಯಾಸಿನ್ ಶೆಖ್, ಸುನಿಲ್ ಯಲ್ಲಾಪುರಕರ್ ಓಡಿಹೋಗಿದ್ದು, ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

ಅಂದು ಪೊಲೀಸರ ವಿರುದ್ಧ ಹೋರಾಟಕ್ಕಿಳಿದ ಮುಖಂಡ ಇಂದು ಪೊಲೀಸರ ಅತಿಥಿ!

ಕಿರವತ್ತಿಯ ಹೋಳಿ ಹಬ್ಬದ ಡಿಜೆ ವಿಚಾರವಾಗಿ ನಡೆದ ಗಲಾಟೆಯಲ್ಲಿ ಪೊಲೀಸರ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು,ಆ ಪ್ರತಿಭಟನೆಯಲ್ಲಿ ಮುಖ್ಯವಾಗಿ ತೊಡಗಿಕೊಂಡಿದ್ದ ಪ್ರಶಾಂತ ಮಾರುತಿ ರಾವೋಜಿ ಅಂದರ್ ಬಾಹರ್ ದಾಳಿಯಲ್ಲಿ ಬಂಧಿತನಾಗಿ ಪೊಲೀಸರ ಅತಿಥಿಯಾಗಿದ್ದಾನೆ ಎನ್ನಲಾಗಿದೆ.

ಬಂಧಿತರಿಂದ ನಗದು ಹಣ 19260 ಹಾಗೂ ಎರಡು ಮೊಬೈಲ್ ಫೋನುಗಳು ಮೋಟಾರ್ ಸೈಕಲ್ ಗಳು ವಶಪಡಿಸಿಕೊಳ್ಳಲಾಗಿದೆ.

Leave a Reply

Your email address will not be published. Required fields are marked *