ಕಾರವಾರ:ಇಂದಿನಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಪ್ರಾರಂಭವಾಗಿದ್ದು ಪೊಲೀಸ್ ವರಿಷ್ಠಾಧಿಕಾರಿ ಜಿಲ್ಲೆಯಾದ್ಯಂತ ಕೆಲವು ಪರೀಕ್ಷಾ ಕೇಂದ್ರಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ವಿಶ್ ಮಾಡುವುದರ ಮೂಲಕ ಧೈರ್ಯ ತುಂಬಿದರು.

ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯ ಜೈ ಹಿಂದ್ ಹೈಸ್ಕೂಲ್ SSLC ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶುಭಕೋರಿ,ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಉಜ್ವಲವಾಗಲೆಂದು ಹಾರೈಸಿ ಮಾತನಾಡಿ
ಎಸ್ಎಸ್ಎಲ್ಸಿ ಪರೀಕ್ಷೆಯು ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ವೃತ್ತಿಪರ ಮಾರ್ಗವನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳ ಇಚ್ಚೆಯನ್ನು ಅರಿತು ಪೋಷಕರು ಮಕ್ಕಳ ಮೇಲೆ ಅನಗತ್ಯ ಒತ್ತಡ ಹೇರುವುದನ್ನು ತಪ್ಪಿಸಿ, ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿ, ಪ್ರೋತ್ಸಾಹಿಸಬೇಕು,ಆದ್ದರಿಂದ ವಿದ್ಯಾರ್ಥಿಗಳು ಯಾವುದೇ ಆತಂಕ ಅಥವಾ ಪರೀಕ್ಷಾ ಭಯಕ್ಕೆ ಒಳಗಾಗದೆ, ಈ ಸಿಕ್ಕ ಉತ್ತಮ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ತಮ್ಮ ಮಕ್ಕಳಿಗೆ ಧೈರ್ಯತುಂಬುತ್ತಿರುವುದು ನೋಡಿದ ಪಾಲಕರು ಸಂತೋಷ ವ್ಯಕ್ತಪಡಿಸಿದ್ದಾರೆ. SSLC ವಿದ್ಯಾರ್ಥಿಗಳ ಧೈರ್ಯ ಹೇಳಲು ಪರಿಕ್ಷಾ ಕೇಂದ್ರಕ್ಕೆ ಬಂದ ಎಸ್ಪಿಯ ಕಾರ್ಯವೈಖರಿಗೆ ಜಿಲ್ಲೆಯಾದ್ಯಂತ ಶ್ಲಾಘನೆ ವ್ಯಕ್ತವಾಗಿದೆ.

ಉತ್ತರ ಕನ್ನಡ ಜಿಲ್ಲೆಗೆ ಪೊಲೀಸ್ ವರಿಷ್ಠಾಧಿಕಾರಿಯಾಗಿ ಎಂ ನಾರಾಯಣ ಅಗಮಿಸುತ್ತಲೇ ಪೊಲೀಸ್ ಇಲಾಖೆಯ ಚಿತ್ರಣವೇ ಬದಲಾಯಿಸಿದೆ.ಅಂದು ಎಸ್ಪಿಯಾಗಿದ್ದ ಸುಮನ್ ಡಿ ಪೆನ್ನೇಕರ್ ಅವರನ್ನು ಇಂದಿಗೂ ನೆನೆಯುವ ಉತ್ತರ ಕನ್ನಡಿಗರು ಎಂ ನಾರಾಯಣ ಅವರನ್ನು ಸಹ ಮೆಚ್ಚಿಕೊಂಡಿದ್ದಾರೆ.


Leave a Reply