Spread the love

ಅಂಕೋಲಾ : ನಿಕಟಪೂರ್ವ ಶಾಸಕಿ  ರೂಪಾಲಿ ಸಂತೋಷ ನಾಯ್ಕ ಅವರ ನೇತ್ರತ್ವದಲ್ಲಿ ಸಂಗಾತಿ ರಂಗಭೂಮಿ (ರಿ.) ಅಂಕೋಲಾ ಇವರ ಸಂಘಟನೆಯಲ್ಲಿ ಅಂಕೋಲಾದ ಜೈ ಹಿಂದ್ ಮೈದಾನದಲ್ಲಿ ಜನೆವರಿ 14 ರಿಂದ 20 ರವರೆಗೆ ಅಂಕೋಲಾದ ಹೆಮ್ಮೆಯ 7 ನೇ‌ ವರ್ಷದ ಅಂಕೋಲಾ ಉತ್ಸವ ನಡೆಯಲಿದೆ ಎಂದು ಜಾನಪದ ಗಾಯಕಿ ಪ್ರಶಸ್ತಿ ಪುರಸ್ಕ್ರತ ಕಲಾವಿದೆ ಬೆಳಂಬಾರದ ಲಕ್ಷ್ಮೀ ಬುದ್ದು ಗೌಡ ಹೇಳಿದರು.


        ಅವರು ಪಟ್ಟಣದ ಕೆಎಲ್ಇ  ಸಭಾಭವನದಲ್ಲಿ ಅಂಕೋಲಾ ಉತ್ಸವ ಸಮಿತಿ ಆಯೋಜಿಸಿದ್ದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ ಸಂಗಾತಿ ರಂಗಭೂಮಿಯ ಆಶ್ರಯದಲ್ಲಿ ಅಂಕೋಲಾದಲ್ಲಿ 7 ನೇ ವರ್ಷದ ಅಂಕೋಲಾ ಉತ್ಸವವನ್ನು ನಾವೆಲ್ಲ ಸೇರಿ ಪಕ್ಷ, ಜಾತಿ, ಧರ್ಮ ಬದಿಗಿಟ್ಟು ಸಂಭ್ರಮದಿಂದ ಆಚರಿಸೋಣ. ಕಳೆದ 6 ವರ್ಷಗಳಿಂದ ಮಾಜಿ ಶಾಸಕಿ ರೂಪಾಲಿ ನಾಯ್ಕ  ಅವರು ನೇತ್ರತ್ವದಲ್ಲಿ ಸಂಘಟಿಸುತ್ತಾ ಬಂದಿದ್ದು ಈ ಸಲವೂ ಅವರ ನಾಯಕತ್ವದಲ್ಲಿ ಅಂಕೋಲಾ ಉತ್ಸವವನ್ನು ಯಶಸ್ವಿಗೊಳಿಸೋಣ ಎಂದರು.


 ವಿಶ್ರಾಂತ ಪ್ರಾಚಾರ್ಯ ಡಾ|| ರಾಮಕೃಷ್ಣ ಗುಂದಿ ಮಾತನಾಡಿ ಜನೇವರಿ 14 ರಿಂದ 20 ರವರೆಗೆ 7 ದಿನಗಳ ಕಾಲ ನಡೆಯುವ ಅಂಕೋಲಾ‌ ಉತ್ಸವಕ್ಕೆ ಎಲ್ಲರೂ ಸಹಕಾರ ನೀಡಬೇಕು. ಇದು ನಮ್ಮೂರಿನ ಹೆಮ್ಮೆಯ ಉತ್ಸವ, ಸಂಘಟಕರು ಈಗಾಗಲೇ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರ ಗೌರವಾಧ್ಯಕ್ಷತೆಯಲ್ಲಿ ಈ ವರ್ಷ ಅದ್ದೂರಿಯಾಗಿ ನಡೆಯಲಿದೆ ಎಂದರು.
             ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷರಾದ ರಾಘು ಕಾಕರಮಠ ಮಾತನಾಡಿ ಸಂಗಾತಿ ರಂಗಭೂಮಿ ವಿಶಿಷ್ಠ ಕಾರ್ಯಕ್ರಮಗಳ ಮೂಲಕ ಮನೆಮಾತಾಗಿದೆ. ಸಂಗಾತಿ ರಂಗಭೂಮಿ ಯಾವುದೇ ಕಾರ್ಯಕ್ರಮ ಮಾಡಿದರೂ ಅದು ಯಶಸ್ವಿಯಾಗುತ್ತಿದೆ. ಎಲ್ಲ ವಿಭಾಗದ ಪ್ರತಿಭೆಗಳಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸುವ ಕಾರ್ಯ ಮಾಡುತ್ತಿದೆ. ಇದರಲ್ಲಿ ಅಂಕೋಲಾ ಉತ್ಸವ ಕೂಡ ಒಂದು ಇದನ್ನು ಎಲ್ಲರೂ ಸೇರಿ ಯಶಸ್ವಿಗೊಳಿಸೋಣ ಎಂದರು.


           ಜಿ ಪಂ ಮಾಜಿ ಸದಸ್ಯ ಜಗದೀಶ ನಾಯಕ ಮೊಗಟಾ ಮಾತನಾಡಿ ಕಲೆ, ಸಾಹಿತ್ಯ, ನೃತ್ಯ, ಸಂಗೀತ,  ನಾಟಕ, ಯಕ್ಷಗಾನ ಹೀಗೆ ಹತ್ತು ಹಲವು ಪ್ರತಿಭೆಗಳಿಗೆ ವೇದಿಕೆಯನ್ನು ಒದಗಿಸಿಕೊಡುತ್ತಿರುವ ಸಂಗಾತಿ ರಂಗಭೂಮಿ ಅಂಕೋಲಾ ಉತ್ಸವವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸುತ್ತ ಬಂದಿದೆ. ಸ್ಥಳೀಯ ಕಲಾವಿದರ ಜೊತೆಗೆ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕಲಾವಿದರನ್ನೂ ಕರೆಯಿಸಿ ಕಾರ್ಯಕ್ರಮ ನೀಡುತ್ತಿರುವದು ಶ್ಲಾಘನೀಯವಾದುದು. ಕಾರವಾರದ ಕರಾವಳಿ ಉತ್ಸವಕ್ಕೆ ಮಾತ್ರ ಸೀಮಿತವಾಗಿದ್ದ ಜನತೆಗೆ ಅಂಕೋಲಾದಲ್ಲೇ ಈ ಅವಕಾಶವನ್ನು ಒದಗಿಸಿಕೊಟ್ಟ ರೂಪಾಲಿ ನಾಯ್ಕ  ಅವರ ನೇತೃತ್ವದ ಸಂಗಾತಿ ರಂಗಭೂಮಿಯ ವತಿಯಿಂದ 7 ನೇ ವರ್ಷದ ಅಂಕೋಲಾ ಉತ್ಸವ ಅತ್ಯಂತ ಯಶಸ್ವಿಯಾಗಲು ನಾವೆಲ್ಲರೂ ಶಕ್ತಿಮೀರಿ ಶ್ರಮಿಸೋಣ, ಇದಕ್ಕೆ ಅಂಕೋಲೆಯ ಎಲ್ಲ ಜನರು ಸಹಕಾರ ನೀಡಬೇಕು ಎಂದರು.


           ಬಿಜೆಪಿ ಅಂಕೋಲಾ ಮಂಡಲದ ಮಾಜಿ ಅಧ್ಯಕ್ಷ ಸಂಜಯ ನಾಯ್ಕ ಭಾವಿಕೇರಿ ಮಾತನಾಡಿ ಅಂಕೋಲಾ ಉತ್ಸವ ಎಲ್ಲ ಪ್ರಕಾರದ ಕಾರ್ಯಕ್ರಮಗಳಿಗೆ ಅವಕಾಶ ನೀಡುತ್ತಿದ್ದಾರೆ ಎಂದರು. ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಅಧ್ಯಕ್ಷ ರಾಜೇಂದ್ರ ನಾಯ್ಕ ಮಾತನಾಡಿ ಸಂಗಾತಿ ರಂಗಭೂಮಿಯ ಆಶ್ರಯದಲ್ಲಿ ಕಳೆದ‌ 6 ವರ್ಷಗಳಿಂದ ಅಂಕೋಲಾ ಉತ್ಸವ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಈ ಸಂಘಟನೆಯ ಹಿಂದೆ ಇರುವ ಶಕ್ತಿ ಎಂದರೆ ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರು. ಅವರ ಸಹಕಾರದಿಂದ ಈ ಸಲವೂ ಕೂಡ ಯಶಸ್ವಿಯಾಗಿ ನಡೆಯಲಿದೆ ಅಂಕೋಲಾದಲ್ಲಿ ಸಾಂಸ್ಕ್ರತಿಕ ಕಾರ್ಯಕ್ರಮಗಳು ಆಗುತ್ತಲೇ ಇರಬೇಕು ಇದಕ್ಕೆ ರೂಪಾಲಿ‌ ನಾಯ್ಕ ಅವರ ಸಹಕಾರ ಇದ್ದೇ ಇರುತ್ತದೆ ಎಂದರು. ಪುರಸಭೆಯ ಮಾಜಿ ಸದಸ್ಯೆ ಜಯಾ ನಾಯ್ಕ, ಬಿಜೆಪಿ ಪ್ರಕೋಸ್ಟ ಸಂಚಾಲಕ ರಾಘವೇಂದ್ರ ಭಟ್ಟ ಮಾತನಾಡಿ ಉತ್ಸವಕ್ಕೆ ಶುಭ ಕೋರಿದರು. ಸಂಚಾಲಕ ಕೆ ರಮೇಶ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ ಪ್ರತೀ ವರ್ಷದಂತೆ ಈ ವರ್ಷವೂ ಅಂಕೋಲಾ ಉತ್ಸವವನ್ನು ಯಶಸ್ವಿಗೊಳಿಸಲು ಸರ್ವರ ಸಹಕಾರ ಕೋರಿದರು.
ಈ ಸಂದರ್ಭದಲ್ಲಿ ಜಾನಪದ ಕಲಾವಿರಾದ ಸೋಮಿ ಹುಲಿಯಾ ಗೌಡ, ತುಳಸಿ ಬುದ್ದು ಗೌಡ, ಸೋಮಿ ವಿಠೋಬ ಗೌಡ, ಲಾಯನ್ಸ್ ಕ್ಲಬ್ ಆಫ್ ಅಂಕೋಲಾ ಸಿಟಿ ಪ್ರಮುಖರಾದ ಎನ್.ಎಚ.ನಾಯ್ಕ, ಪುರಸಭೆ ಮಾಜಿ ಸದಸ್ಯ ಶ್ರೀಧರ ನಾಯ್ಕ, ಸಂದೀಪ ಗಾಂವಕರ, ಸುಬ್ರಹ್ಮಣ್ಯ ಗಾಂವಕರ, ವಿನಾಯಕ ಶೆಟ್ಟಿ, ಗದಗಯ್ಯ ಚಿಕ್ಕಮಠ, ಸಂಗೀತಾ ಆರ್.ನಾಯ್ಕ, ಮಂಗಲಾ ಹರಿಕಂತ್ರ, ಪಾರ್ವತಿ ಕೇಣಿ, ಹೂವಾ ಖಂಡೇಕರ, ಶಾಂತಾ ಹರಿಕಾಂತ, ವೆಂಕಟೇಶ ದುರ್ಗೆಕರ್, ಮೋಹನ ದುರ್ಗೆಕರ್, ಭಾಗ್ಯಶ್ರೀ ನಾಯಕ, ಮನಿಷಾ ನಾಯ್ಕ, ಪ್ರಜ್ವಲ ನಾಯ್ಕ, ನವೀನ ನಾಯ್ಕ, ವೆಂಕಟೇಶ ಗೌಡ, ಸುಬ್ರಹ್ಮಣ್ಯ ರೇವಣಕರ, ಅರ್ಪಿತಾ ನಾಯಕ, ಶ್ಯಾಮಲಾ ಗೌಡ, ದಿವ್ಯಾ ಗೌಡ, ಘನಶ್ಯಾಮ ಗಾಂವಕರ, ನಾಗರಾಜ ನಾಯ್ಕ ಪಳ್ಳಿಕೇರಿ, ಪ್ರೇಮಜ್ಯೋತಿ, ಪ್ರೇಮಾ, ಸುಧಾ ಗೌಡ, ನಾಗೇಶ ಗಾಂವಕರ, ಮನೋಹರ ಗಾಂವಕರ, ಮುರಿಳಿಧರ ಎಸ್. ಬಂಟ, ನಿತೀಶ ಕೇಣಿ, ಸುಭಾಷ ನಾಯಕ ಭಾವಿಕೇರಿ, ರಾಜು ಗೌಡ, ಗೀತಾ ಗೌಡ, ಮಂಜುನಾಥ ನಾಯ್ಕ, ಗಣೇಶ ತೆಂಡುಲ್ಕರ, ಮಂಜುನಾಥ ಮಧನೂರು, ಸೂರಜ ನಾಯ್ಕ, ಗೋವಿಂದ ಮಹಾಲೆ, ಪ್ರವೀಣಾ ದೊಡ್ಮನಿ, ಡಿ.ಎನ್.ಪಡ್ತಿ, ರಾಜು ಹರಿಕಾಂತ, ರಾಜು ಗೌಡ, ಮಾರುತಿ ನಾಯ್ಕ, ಸಂತೋಷ ಗೌಡ ಮುಂತಾದವರಿದ್ದರು.

Leave a Reply

Your email address will not be published. Required fields are marked *