ಅಂಕೋಲಾ : ತಾಲೂಕಿನ ವಂದಿಗೆಯ ನಿವಾಸಿ ಹಾಲಿ ಮೂಲ್ಕಿಯಲ್ಲಿ ವಾಸ್ತವ್ಯವಿರುವ ನಿರಂಜನ ನಾಯಕ ಹಾಗೂ ಶುಭಲಕ್ಷ್ಮೀ ದಂಪತಿಯ ಪುತ್ರಿಯಾದ ಅದಿತಿ ನಾಯಕ ಎಂ.ಎಸ್ಸಿ ರಸಾಯನ ಶಾಸ್ತ್ರ ವಿಭಾಗದಲ್ಲಿ 24 ಚಿನ್ನದ ಪದಕ ಹಾಗೂ 8 ನಗದು ಬಹುಮಾನವನ್ನು ಪಡೆಯುವ ಮೂಲಕ ಮೈಸೂರಿನ ಮಾನಸ ಗಂಗೋತ್ರಿ ವಿಶ್ವವಿದ್ಯಾನಿಲಯಕ್ಕೆ ಪ್ರಥಮ ಸ್ಥಾನ ಬಂದಿರುತ್ತಾಳೆ.

ಸೋಮವಾರ ಮೈಸೂರಿನ ಕ್ರಾಫರ್ಡ್ ಭವನದಲ್ಲಿ ನಡೆದ ವಿಶ್ವ ವಿದ್ಯಾನಿಲಯದ 106 ನೇ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲರಾದ ಥಾವರ್ ಚಂದ ಗೆಹ್ಲೋಟ್, ಇಸ್ರೋ ಮಾಜಿ ಅಧ್ಯಕ್ಷ ಡಾ ಎಸ್.ಸೋಮನಾಥ ,ಉನ್ನತ ಶಿಕ್ಷಣ ಸಚಿವರಾದ (ಉಪಕುಲಪತಿ)ಡಾ.ಎಮ್.ಸಿ.ಸುಧಾಕರ್ ರವರ ಗೌರವ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು.

ವಿದ್ಯಾರ್ಥಿನಿ ಅದಿತಿ ನಾಯಕ ಈ ಹಿಂದೆ ಮಂಗಳೂರಿನಲ್ಲಿ ಬಿ.ಎಸ್.ಇ ವ್ಯಾಸಂಗ ಮಾಡುತ್ತಿರುವ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೂ ಪ್ರಥಮ ಸ್ಥಾನ ಪಡೆದಿದ್ದರೂ. ವಿದ್ಯಾರ್ಥಿನಿಯ ಸಾಧನೆಗೆ ಕುಟುಂಬಸ್ಥರು ಹಾಗೂ ವಂದಿಗೆಯ ಗ್ರಾಮಸ್ಥರು ಅಭಿನಂಧಿಸಿದ್ದಾರೆ.


