ಬಳ್ಳಾರಿ: ರಾಜಕೀಯ ಸಂಘರ್ಷ ಹಾಗೂ ಬ್ಯಾನರ್ ವಾರ್ ಗೆ ಸಂಬಂಧಿಸಿದಂತೆ ಸರಕಾರ ಬಳ್ಳಾರಿ ಜಿಲ್ಲಾ ಪೊಲೀಸ್ ವ್ಯವಸ್ಥೆಗೆ ಬಾರಿ ಸರ್ಜರಿ ನಡೆಸಿದ್ದು, ದಕ್ಷ,ಪ್ರಾಮಾಣಿಕತೆಗೆ ಹೆಸರಾಗಿದ್ದ ಡಾ. ಸುಮನ್ ಡಿ. ಪೆನ್ನೇಕರ್ ಅವರನ್ನು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಿಸಿ ಆದೇಶ ಹೊರಡಿಸಿದೆ.

ಹೌದು…ಹೊಸ ವರ್ಷದ ಆಚರಣೆಯ ಹಿನ್ನೆಲೆಯಲ್ಲಿ ಬ್ಯಾನರ್ ವಿಚಾರವಾಗಿ ನಡೆದ ಘನತೆಯ ರಾಜಕೀಯ ಮತ್ತು ಫೈರಿಂಗ್ ಪ್ರಕರಣ ರಾಜ್ಯ ಸರಕಾರಕ್ಕೆ ತೀವೃ ಮುಜುಗರಕ್ಕೆ ಈಡಾಗಿಸಿತ್ತು, ಈ ಸಂಘರ್ಷವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಗನ್ ಮ್ಯಾನ್ ಸೇರಿದಂತೆ ಒಟ್ಟಾರೆ 26 ಜನರನ್ನು ಬಂಧಿಸಿ ಗೊಂದಲದ ವಾತಾವರಣವನ್ನು ಅಲ್ಪಪ್ರಮಾಣದಲ್ಲಿ ತಿಳಿಯಾಗಿಸಿತ್ತು, ಈಗ ಮತ್ತೊಂದು ಮೇಜರ್ ಸರ್ಜರಿಗೆ ಮುಂದಾಗಿದ್ದು,ಈ ಗಲಾಟೆಗೆ ಸಂಬಂಧಿಸಿದಂತೆ ಆಗಷ್ಟೇ ಕರ್ತವ್ಯಕ್ಕೆ ನೇಮಕವಾಗಿದ್ದ ಎಸ್‌ಪಿ ಪವನ್ ನೆಟ್ಟೂರು ಅವರನ್ನು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಅಮಾನತುಗೊಳಿಸಿ ಅವರ ಸ್ಥಾನಕ್ಕೆ ದಕ್ಷ ಅಧಿಕಾರಿ ಡಾ. ಸುಮನ್ ಡಿ. ಪೆನ್ನೇಕರ್ ಅವರನ್ನು ನೇಮಿಸಲಾಗಿದೆ.

2013 ರ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿರುವ ಸುಮನ್ ಡಿ ಪೆನ್ನೇಕರ್ ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಬೆಂಗಳೂರು ಅನೇಕಾರು ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿ ಜನಮೆಚ್ಚಿದ ಅಧಿಕಾರಿ ಎಂದು ಗುರುತಿಸಿಕೊಂಡಿರುವ ಸುಮನ್ ಪೆನ್ನೇಕರ್ ಸಂದಿಗ್ಧ ಸ್ಥಿತಿಯನ್ನು ತಿಳಿಯಾಗಿಸುವ ಪೈಯರ್ ಬ್ರಾಂಡ್ ಅಧಿಕಾರಿ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣದಲ್ಲಿ ತನಿಖಾಧಿಕಾರಿಯಾಗಿದ್ದ ಇವರು ಪ್ರಕರಣವನ್ನು ಕೂಲಂಕಷವಾಗಿ ತನಿಖೆ ಕೈಗೊಂಡು ಅಪರಾಧಿಗೆ ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿ ಕಾರ್ಯದಕ್ಷತೆ ಮೆರೆದಿದ್ದರು.


